Advertisement

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

02:55 PM Apr 24, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿಂದೆ ನೀಡಿದ್ದ “ಸಂಪತ್ತು ಸಮೀಕ್ಷೆ” ಹೇಳಿಕೆ ವಿಚಾರದಲ್ಲಿ ಯು-ಟರ್ನ್ ತೆಗೆದುಕೊಂಡಿದ್ದು, ದೇಶ ಎದುರಿಸುತ್ತಿರುವ ಅನ್ಯಾಯದ ಪ್ರಮಾಣವನ್ನು ಕಂಡುಹಿಡಿಯಲು ಮಾತ್ರ ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

Advertisement

ಬುಧವಾರ ದೆಹಲಿಯ ಜವಾಹರ್ ಭವನದಲ್ಲಿ ಪಕ್ಷದ ಸಾಮಾಜಿಕ ನ್ಯಾಯ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾವು ಇನ್ನೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿಲ್ಲ, ಎಷ್ಟು ಅನ್ಯಾಯವಾಗಿದೆ ಎಂಬುದನ್ನು ಕಂಡುಹಿಡಿಯೋಣ ಎಂದು ನಾನು ಹೇಳಿದ್ದೇನೆ” ಎಂದು ಹೇಳಿದರು.

ಎಷ್ಟು ಅನ್ಯಾಯವಾಗಿದೆ ಎಂದು ಪರೀಕ್ಷಿಸೋಣ ಎಂದು ಹೇಳಿದ ಕ್ಷಣದಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ. ಇದು ದೇಶವನ್ನು ಒಡೆಯುವ ಪ್ರಯತ್ನ ಎಂದು ಹೇಳುತ್ತಿದ್ದಾರೆ. ಎಕ್ಸ್-ರೇ (ಸಂಪತ್ತು ಸಮೀಕ್ಷೆ) ಮೂಲಕ ನಾವು ಸಮಸ್ಯೆಯನ್ನು ತಿಳಿದುಕೊಳ್ಳುತ್ತೇವೆ” ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರು ತೀವ್ರ ಮಟ್ಟದ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

90 ರಷ್ಟು ಭಾರತೀಯರಿಗೆ ಅನ್ಯಾಯವಾಗುತ್ತಿದೆ, ಈ ಅನ್ಯಾಯವನ್ನು ಪರಿಶೀಲಿಸುವಂತೆ ನಾನು ಕರೆ ನೀಡಿದ ಕ್ಷಣವೇ ಪ್ರಧಾನಿ ಮತ್ತು ಬಿಜೆಪಿ ನನ್ನ ಮೇಲೆ ದಾಳಿ ಮಾಡಲು ಆರಂಭಿಸಿದರು ಎಂದು ರಾಹುಲ್ ಗಾಂಧಿ ಆರೋಪಿಸಿದರು.

ರಾಹುಲ್ ಹೇಳಿದ್ದೇನು?

Advertisement

ರಾಹುಲ್ ಗಾಂಧಿ ಅವರು ಏಪ್ರಿಲ್ 7 ರಂದು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ, ದೇಶದಲ್ಲಿ ಜನರ ನಡುವೆ ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಹಣಕಾಸು ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸಲಿದೆ ಎಂದಿದ್ದರು.

ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ಹೊರತುಪಡಿಸಿ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಭರವಸೆ ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿ ರಾಹುಲ್ ಹೇಳಿಕೆಯನ್ನೇ ಟೀಕಾಸ್ತ್ರವಾಗಿ ಬಳಸಿಕೊಂಡು ತೀವ್ರ ಆಕ್ರೋಶ ಹೊರ ಹಾಕಿದ್ದರು. “ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ ದೇಶದ ಹಿಂದೂಗಳ ಸಂಪತ್ತನ್ನು ಮುಸ್ಲಿಮರಿಗೆ ಹಸ್ತಾಂತರ ಮಾಡಲಿದೆ’ ಎಂದು ಕಿಡಿ ಕಾರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next