ಬಾಗ್‌ಪತ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೇ ಹೋಲುತ್ತಿರುವ ಮೀರತ್‌ನ ಪಕ್ಷದ ಕಾರ್ಯಕರ್ತ ಫೈಸಲ್ ಚೌಧರಿ ಅವರು ಬುಧವಾರ ಪಶ್ಚಿಮ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಮಾವಿಲ್ಕಾದಿಂದ ಪುನರಾರಂಭಗೊಂಡ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಭಾರಿ ಸುದ್ದಿಯಾಗಿದ್ದಾರೆ.
ಚೌಧರಿ ಅವರು ಗಾಂಧಿಯವರಂತೆಯೇ ಬಿಳಿ ಟಿ-ಶರ್ಟ್‌ನಲ್ಲಿ ಪಕ್ಷದ ಇತರ ಕಾರ್ಯಕರ್ತರೊಂದಿಗೆ ನಡೆದುಕೊಂಡು ಹೋಗುತ್ತಿದ್ದುದು ಮಾಧ್ಯಮಗಳು ಸೇರಿ ಎಲ್ಲರ ಗಮನ ಸೆಳೆದಿದೆ. ವಿಡಿಯೋ ವೈರಲ್ ಆಗಿದೆ.
ಭಾರತ್ ಜೋಡೋ ಯಾತ್ರೆ ಮಂಗಳವಾರ ಮಧ್ಯಾಹ್ನ ದೆಹಲಿಯ ಮಾರ್ಗಾಟ್ ಹನುಮಾನ್ ದೇವಸ್ಥಾನದಿಂದ ಪ್ರಾರಂಭವಾದ ನಂತರ ಉತ್ತರ ಪ್ರದೇಶವನ್ನು ಪ್ರವೇಶಿಸಿತ್ತು. ನಿನ್ನೆ ಮಾವಿಲ್ಕಾದಿಂದ ಬರೌತ್ ವರೆಗೆ ಆರಂಭಗೊಂಡಿತು.
ಯಾತ್ರೆಯು ಜನವರಿ 6 ರಂದು ಹರಿಯಾಣವನ್ನು ಮರುಪ್ರವೇಶಿಸುವ ಮೊದಲು ಮೂರು ದಿನಗಳ ಅವಧಿಯಲ್ಲಿ ಉತ್ತರ ಪ್ರದೇಶವನ್ನು ದಾಟುವ ನಿರೀಕ್ಷೆಯಿದೆ.