Advertisement

7ನೇ ವೇತನ ಆಯೋಗ, ಅನುಷ್ಠಾನ: ಮೋದಿಗೆ ರಾಹುಲ್‌ 6ನೇ ಪ್ರಶ್ನೆ

11:12 AM Dec 04, 2017 | Team Udayavani |

ಹೊಸದಿಲ್ಲಿ : ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಇಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ “ಏಳನೇ ವೇತನ ಆಯೋಗ ಮತ್ತು ಅದರ ಅನುಷ್ಠಾನ’ ಕುರಿತಾಗಿ ತನ್ನ ಆರನೇ ಪ್ರಶ್ನೆಯನ್ನು ಕೇಳಿದ್ದಾರೆ.

Advertisement

7ನೇ ವೇತನ ಆಯೋಗದ ಶಿಪಾರಸಿನಲ್ಲಿ ತಿಂಗಳ ಕನಿಷ್ಠ ವೇತನವನ್ನು 18,000 ರೂ.ಗೆ ನಿಗದಿಸಲಾಗಿದೆ. ಹಾಗಿದ್ದರೂ ನಿಯಮತಿ ಮತ್ತು ಗುತ್ತಿಗೆ ಕೆಲಸಗಾರರಿಗೆ ಅನುಕ್ರಮವಾಗಿ 5,500 ರೂ. ಮತ್ತು 10,000 ರೂ. ವೇತನ ಮಾತ್ರವೇ ಏಕೆ ಸಿಗುತ್ತಿದೆ ? ಎಂದು ರಾಹುಲ್‌ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್‌ ನಾಯಕ ತನ್ನ ಟ್ವೀಟ್‌ ಜತೆಗೆ ಹಿರಿಯ ಮಹಿಳೆಯೊಬ್ಬರ ವಿಡಿಯೋ ಹಾಕಿದ್ದು ಅದರಲ್ಲಾಕೆ ಶಿಕ್ಷಕರಿಗೆ ಕಡಿಮೆ ಸಂಬಳ ಇರುವ ಬಗ್ಗೆ ಮಾತನಾಡಿದ್ದಾರೆ.

ಗುಜರಾತ್‌ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿ ಅವರಿಗೆ ಸಾಮಾಜಿಕ ಜಾಲ ತಾಣದಲ್ಲಿ  ದಿನ ನಿತ್ಯ ಸರಣಿ ಪ್ರಶ್ನೆಯನ್ನು ಕೇಳುತ್ತಿದ್ದಾರೆ. 

ಅಂತೆಯೇ ನಿನ್ನೆ ಭಾನುವಾರ ರಾಹುಲ್‌ “ಗುಜರಾತ್‌ನಲ್ಲಿ ಮಹಿಳೆಯರ ಸುರಕ್ಷೆ, ಶಿಕ್ಷಣ ಮತ್ತು ಆರೋಗ್ಯ’ ಕುರಿತಾಗಿ ಪ್ರಶ್ನಿಸಿದ್ದರು. 

Advertisement

ಪ್ರಕೃತ ಎರಡು ದಿನಗಳ ಗುಜರಾತ್‌ ಭೇಟಿಯಲ್ಲಿರುವ ಪಿಎಂ ಮೋದಿ ಅವರು ಕಾಂಗ್ರೆಸ್‌ ಮತ್ತು ಅದರ ಎರಡನೇ ಮಟ್ಟದ ಹೈಕಮಾಂಡ್‌ ವಿರುದ್ಧ “ಸಾಂಸ್ಥಿಕ ಚುನಾವಣೆಯಲ್ಲಿ ವಿಭಜನ ರಾಜಕಾರಣ ಮತ್ತು ಅಕ್ರಮದ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ’ ಎಂದು ದೂರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next