ಹೊಸದಿಲ್ಲಿ: ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಟು ಟೀಕೆ ಮಾಡಿ ಕಿಡಿ ಕಾರಿದ್ದಾರೆ.
ಹನಿಗವನದ ಮಾದರಿಯಲ್ಲಿ ಬರೆದಿರುವ ಟ್ವೀಟ್‌ನಲ್ಲಿ ”ಎಷ್ಟು ಲೀಕ್? ಡೇಟಾ ಲೀಕ್!, ಆಧಾರ್ ಲೀಕ್!, ಎಸ್‌ಎಸ್‌ಎಲ್‌ಸಿ ಎಕ್ಸಾಂ ಲೀಕ್!, ಎಲೆಕ್ಷನ್ ಡೇಟ್ ಲೀಕ್!, ಸಿಬಿಎಸ್‌ಇ ಪೇಪರ್‌ಸ್ ಲೀಕ್ ! ಪ್ರತೀ ವಿಚಾರದಲ್ಲೂ ಲೀಕ್!, ಚೌಕಿದಾರ್ ವೀಕ್ ಹೇ..”ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯು ಲಕ್ಷಾಂತರ ವಿದ್ಯಾರ್ಥಿಗಳ ಭರವಸೆ ಮತ್ತು ಭವಿಷ್ಯವನ್ನು ನಾಶಪಡಿಸುತ್ತದೆ.ಕಾಂಗ್ರೆಸ್ ಯಾವಾಗಲೂ ನಮ್ಮ ಶಿಕ್ಷಣ ಸಂಸ್ಥೆಗಳನ್ನು ರಕ್ಷಿಸಿತ್ತು. ಆರ್‌ಎಸ್‌ಎಸ್ ಮತ್ತು ಬಿಜೆಪಿ ಶಿಕ್ಷಣ ಸಂಸ್ಥೆಗಳನ್ನು ನಾಶ ಮಾಡುತ್ತಿವೆ. ನಾನು ಹೇಳುವುದನ್ನು ನಂಬಿ. ಇದು ಕೇವಲ ಆರಂಭ ಮಾತ್ರ ಎಂದು ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮುನ್ನ ನಾನು ದೇಶವನ್ನುಕಾಯುವವ (ಚೌಕಿದಾರ್ )ಎಂದಿದ್ದರು,ಇದೀಗ ರಾಹುಲ್ ಟ್ವೀಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ.