Advertisement

ರಾಹುಲ್‌ ಪ್ರಧಾನಿಯಾಗಲು ಕಾರ್ಯಕರ್ತರ ಪಣ 

01:54 PM Dec 15, 2017 | Team Udayavani |

ನಗರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಾಹುಲ್‌ ಗಾಂಧಿ ಅವರಿಗೆ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಅಭಿನಂದನೆ ಸಮಾರಂಭ ನಡೆಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ಮಾತನಾಡಿ, ಜಾತ್ಯತೀತ ತತ್ತ್ವಗಳೊಂದಿಗೆ ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕಂತೆ ಮನೋಭಾವ ಹೊಂದಿರುವ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ಉತ್ತಮ ಬೆಳವಣಿಗೆ. ಅವರನ್ನು ಈ ದೇಶದ ಪ್ರಧಾನಿಯನ್ನಾಗಿಸಲು ಕಾರ್ಯಕರ್ತರು ಪಣ ತೊಡಬೇಕು ಎಂದರು.

ಕಾರ್ಯಕರ್ತರಿಗೆ ಸ್ಫೂರ್ತಿ
ಜಿ.ಪಂ. ಸದಸ್ಯ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್‌. ಮಹಮ್ಮದ್‌ ಮಾತನಾಡಿ, ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಮತ್ತಷ್ಟು ಸ್ಫೂರ್ತಿ ನೀಡಿದೆ ಎಂದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ, ರಾಹುಲ್‌ ಗಾಂಧಿ ವಿರುದ್ಧ ಪ್ರಧಾನಿ ಟೀಕೆ ಮಾಡುತ್ತಿದ್ದಾರೆ. ಮೋದಿ ದೇಶದ ಜನತೆಯ ಪ್ರಧಾನಿಯಲ್ಲ. ಅವರು ಪಕ್ಷದ ಅಥವಾ ಬಿಜೆಪಿಗರ ಪ್ರಧಾನಿಯಾಗಿದ್ದಾರೆ. ಅವರಿಗೆ ಗೌರವ ಕೊಡುವ ಅಗತ್ಯವಿಲ್ಲ. ಬಿಜೆಪಿಯವರು ದೇಶವನ್ನು ಅರಾಜಕತೆಗೆ ತಳ್ಳುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಸಾಧನೆ ಮಾದರಿ
ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಅರ್ಷದ್‌ ದರ್ಬೆ ಮಾತನಾಡಿ, ದೇಶದ ಅಭಿವೃದ್ಧಿಗೆ ಕಾಂಗ್ರೆಸ್‌ ಪಕ್ಷ ಅನಿವಾರ್ಯ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ನಾಲ್ಕು ವರ್ಷಗಳಲ್ಲಿ ಮಾಡಿದ ಸಾಧನೆ ದೇಶಕ್ಕೆ ಮಾದರಿ ಆಗಿದೆ. ಪುತ್ತೂರಿನಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಮಾಡಿದ ಅಭಿವೃದ್ಧಿ ಕಾರ್ಯಗಳು ಪಕ್ಷಕ್ಕೆ ವರದಾನವಾಗಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

Advertisement

ಕಾಂಗ್ರಸ್‌ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ನ್ಯಾಯವಾದಿ ನಿರ್ಮಲ್‌ ಕುಮಾರ್‌ ಜೈನ್‌ ಮಾತನಾಡಿ, ಬಿಜೆಪಿಗರು ನ್ಯಾಯ, ಕಾನೂನುಗಳಿಗೆ ಬೆಲೆ ಕೊಡದವರು. ಅವರಿಗೆ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸದೆ ಚುನಾವಣೆಯಲ್ಲಿ ಲಾಭ ಗಳಿಸಲು ಸಾಧ್ಯವಿಲ್ಲ ಎಂದು ಈ ರೀತಿಯ ಕೃತ್ಯಗಳಿಗೆ ಇಳಿಯುತ್ತಿದ್ದಾರೆ ಎಂದು ಹೇಳಿದರು.

ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜಾ ಮಾತನಾಡಿದರು. ಸಂಸದ ಪ್ರತಾಪ ಸಿಂಹ ಅವರು ಹುಣಸೂರಿನಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಹಾಗೂ ರಾಜ್ಯದಲ್ಲಿ ಕೋಮು ಗಲಭೆ ಮಾಡಲು ನಡೆಸಿರುವ ಯತ್ನವನ್ನು ಸಭೆಯಲ್ಲಿ ಖಂಡಿಸಲಾಯಿತು.

ಪುತ್ತೂರು ಇಂಟಕ್‌ ಅಧ್ಯಕ್ಷ ಜಯಪ್ರಕಾಶ್‌ ಬದಿನಾರ್‌, ಜಿಲ್ಲಾ ಕಾಂಗ್ರೆಸ್‌ನ ಪ್ರ. ಕಾರ್ಯದರ್ಶಿ ಯಾಕೂಬ್‌ ಹಾಜಿ ದರ್ಬೆ, ರಾಮ ಮೇನಾಲ, ಆಲಿಕುಂಞಿ ಕೊರಿಂಗಿಲ, ಅಬ್ದುಲ್‌ ಅಝೀಝ್ ಪಡೀಲ್‌, ಅಬ್ಟಾಸ್‌ ಮುರ, ಅಬ್ದುಲ್‌ ರಹಿಮಾನ್‌ ಸಾಲ್ಮರ, ಪುತ್ತೂರು ಯುವ ಕಾಂಗ್ರೆಸ್‌ ಮಾಜಿ ಕಾರ್ಯದರ್ಶಿ ರೋಶನ್‌ ರೈ ಬನ್ನೂರು, ಪ್ಯಾಟ್ರಿಕ್‌ ಲೋಬೋ ದರ್ಬೆ, ವಿಕ್ಟರ್‌ ಪಾಯಿಸ್‌, ನಗರಸಭಾ ಸದಸ್ಯ ದಿಲೀಪ್‌ಕುಮಾರ್‌ ಮೊಟ್ಟೆತ್ತಡ್ಕ, ವೇಣುಗೋಪಾಲ್‌ ಮೊಟ್ಟೆತ್ತಡ್ಕ, ಸುದೇಶ್‌ ಕುಮಾರ್‌ ಚಿಕ್ಕಪುತ್ತೂರು, ರಾಮ ನಾಯಕ್‌ ಪಾಣಾಜೆ, ನವೀನ್‌ ನಾೖಕ್‌, ಮಹಿಳಾ ಪದಾಧಿಕಾರಿಗಳಾದ ಶಾರದಾ ಅರಸ್‌, ರೇಖಾ ಯಶೋಧರ್‌, ರಝಾಕ ಆರ್‌.ಪಿ., ಗಣೇಶ್‌ ಶೆಟ್ಟಿ ನೆಲ್ಲಿಕಟ್ಟೆ, ಸೂಫಿ ಬಪ್ಪಳಿಗೆ, ಅಬ್ಟಾಸ್‌ ಮೊದಲಾವರಿದ್ದರು.

ಕಾಂಗ್ರೆಸ್‌ ಅಭಿವೃದ್ಧಿ ಪರ 
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಮಾತನಾಡಿ, ಕಾಂಗ್ರೆಸ್‌ ಅಭಿವೃದ್ಧಿ ಪರ. ಜನಪರ ಪಕ್ಷ ವಾಗಿದೆ. ಬಿಜೆಪಿ ಮನೆ ಹಾಳು ಪಕ್ಷವಾಗಿದೆ. ಬಿಜೆಪಿ ಅಧ್ಯಕ್ಷರನ್ನು ಚಾಣಕ್ಯ ಎಂದು ಹೇಳುತ್ತಾರೆ. ಅವರು ಸಮಾಜವನ್ನು ಒಡೆಯುವುದರಲ್ಲಿ ಚಾಣಕ್ಯರಾಗಿದ್ದಾರೆ. ಕೋಮುಗಲಭೆ ಮಾಡಿಸಿ ಎಂದು ರಾಜ್ಯದ ಬಿಜೆಪಿಗೆ ಅಮಿತ್‌ ಶಾ ಆದೇಶ ಮಾಡಿದ್ದಾರೆ. ಆದರೆ ಕರ್ನಾಟಕದ ಜನತೆ ಶಾಂತಿ ಪ್ರಿಯರು ಅಮಿತ್‌ ಶಾ ಹೇಳಿಕೆಗೆ ಬೆಂಬಲ ಕೊಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next