ಹೊಸದಿಲ್ಲಿ: “ಗಾಳಿಯ ಟರ್ಬೈನ್‌ಗಳಿಂದ ಕೇವಲ ಶಕ್ತಿಯನ್ನಷ್ಟೇ ಅಲ್ಲ, ಶುದ್ಧ ಕುಡಿಯುವ ನೀರು- ಆಮ್ಲಜನಕವನ್ನೂ ಉತ್ಪಾದಿಸಬಹುದು’ ಎಂಬ ಪ್ರಧಾನಿ ಮೋದಿ ಅವರ ಸಲಹೆಯನ್ನು ಅಪಹಾಸ್ಯ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಪವನಶಕ್ತಿ ಉತ್ಪಾದಕ ಕಂಪೆನಿಯ ಸಿಇಒ ಜತೆ ಮೋದಿ ಸಂವಾದಿಸುತ್ತಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್, “ನಮ್ಮ ಪ್ರಧಾನಿಗೆ ಏನೂ ಗೊತ್ತಿಲ್ಲ ಎನ್ನುವುದೇ ಭಾರತದ ಪಾಲಿಗೆ ನೈಜ ಅಪಾಯ. ಈ ಸತ್ಯ ಹೇಳಲು ಅವರ ಸುತ್ತಮುತ್ತಲಿನವರಿಗೆ ಧೈರ್ಯ ವಿಲ್ಲ’ ಎಂದು ಹೇಳಿದ್ದರು.
ಇದಕ್ಕೆ ಪ್ರತ್ಯುತ್ತರಿಸಿರುವ ಕೇಂದ್ರ ಸಚಿವ ಪಿಯೂಶ್ ಗೋಯಲ್, “ಜಗತ್ತಿನ ಮುಂಚೂಣಿ ಕಂಪೆನಿಯ ಸಿಇಒ ಪ್ರಧಾನಿ ಸಲಹೆಯನ್ನು ಶ್ಲಾ ಸಿರುವಾಗ, ರಾಹುಲ್ ಇದನ್ನು ಟೀಕಿಸುತ್ತಿದ್ದಾರೆ’ ಎಂದಿದ್ದಾರೆ.
ಪಾತ್ರಾ ವಾಗ್ಧಾಳಿ: ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಕೂಡ ರಾಹುಲ್ ಮೇಲೆ ವಾಗ್ಧಾಳಿ ನಡೆಸಿದ್ದು, “ರಾಹುಲ್ ಜಿ ನಾಳೆ ಬೆಳಗ್ಗೆ ಬೇಗನೆ ಎದ್ದು ಈ ವೈಜ್ಞಾನಿಕ ವರದಿಗಳನ್ನು ಓದಿ. ನಿಮಗೆ ವೈಜ್ಞಾನಿಕ ಸಂಗತಿ ಅರ್ಥವಾಗುವುದಿಲ್ಲ ಎಂಬುದು ನಮಗೆ ಗೊತ್ತಿದೆ’ ಎಂದು ಸವಾಲೆಸೆದಿ ದ್ದಾರೆ. ನೀರನ್ನು ಸೃಷ್ಟಿಸುವ ಟರ್ಬೈನ್ ಮತ್ತು ಮರುಭೂಮಿಯಲ್ಲಿ 1 ಸಾವಿರ ಲೀ. ಗಾಳಿ ಶುದ್ಧೀಕರಿಸಿದ ಟರ್ಬೈನ್ ಕುರಿತಾಗಿ 2 ವರದಿಗಳನ್ನು ಪಾತ್ರ ಪೋಸ್ಟ್ ಮಾಡಿದ್ದಾರೆ.
ರಾಹುಲ್‌ರ ಅಜ್ಞಾನ, ಅನರ್ಹತೆಗೆ ಚಿಕಿತ್ಸೆಗಳಿಲ್ಲ.
ಅಮಿತ್ ಮಾಳವೀಯ, ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ