ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ರಾತ್ರಿ ಹರ್ಯಾಣದ ಮುರ್ತಾಲ್ ನಿಂದ ಅಂಬಾಲದವರೆಗೆ ಟ್ರಕ್ ನಲ್ಲಿ ಪ್ರಯಾಣ ಮಾಡಿದರು.
ಹರ್ಯಾಣದ ಮುರ್ತಾಲ್ ಗೆ ರಾತ್ರಿ 11 ಗಂಟೆ ಸುಮಾರಿಗೆ ರಾಹುಲ್ ಆಗಮಿಸಿದರು. ಮುರ್ತಾಲ್ ನಿಂದ ಮಧ್ಯರಾತ್ರಿ 12ರ ಸುಮಾರಿಗೆ ಟ್ರಕ್ ಏರಿ ಅಂಬಾಲ ತಲುಪಿದರು. ಮುರ್ತಾಲ್ ನಿಂದ ಅಂಬಾಲಾಗೆ ಪ್ರಯಾಣಿಸುವಾಗ ರಾಹುಲ್ ಗಾಂಧಿ ಟ್ರಕ್ ಚಾಲಕರೊಂದಿಗೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು ಎಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಐಎಎನ್‌ಎಸ್ ತಿಳಿಸಿದೆ.
ಇದನ್ನೂ ಓದಿ:VIRAL: ಮದುವೆ ದಿನ ಪರಾರಿಯಾಗಲು ಯತ್ನಿಸಿದ ವರ: 20ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ವಧು
ಅವರನ್ನು ಹೆಚ್ಚು ಕಾಡುವ ಇತರ ಸಮಸ್ಯೆಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಬಗೆಹರಿಸಬಹುದು ಎಂಬುದರ ಕುರಿತು ರಾಹುಲ್ ಅವರೊಂದಿಗೆ ಮಾತನಾಡಿದರು. ಅಂಬಾಲ ತಲುಪಿದ ನಂತರ ರಾಹುಲ್ ಗಾಂಧಿ ರಸ್ತೆ ಮಾರ್ಗವಾಗಿ ಹಿಮಾಚಲ ಪ್ರದೇಶದ ಶಿಮ್ಲಾ ಕಡೆಗೆ ತೆರಳಿದರು. ಆದರೆ, ರಾಹುಲ್ ಗಾಂಧಿಯವರ ತಡರಾತ್ರಿ ಪ್ರಯಾಣದ ಬಗ್ಗೆ ಪಕ್ಷದ ನಾಯಕತ್ವ ಯಾವುದೇ ಮಾಹಿತಿ ನೀಡಿರಲಿಲ್ಲ.