Advertisement

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

07:55 PM Apr 18, 2021 | Team Udayavani |

ನವ ದೆಹಲಿ/ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೊರೊನಾ ತೀವ್ರಗತಿಯಲ್ಲಿ ಹಬ್ಬುತ್ತಿರುವ ಕಾರಣಕ್ಕಾಗಿ ತಮ್ಮ ಎಲ್ಲ ಸಾರ್ವಜನಿಕ ರ‍್ಯಾಲಿಗಳನ್ನು ರದ್ದುಗೊಳಿಸಿರುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿಳಿಸಿದ್ದಾರೆ.

Advertisement

“ಪ್ರಸ್ತುತ ಕೊರೊನಾದ ಘೋರ ಸನ್ನಿವೇಶ ಅರಿತು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇಂಥ ಸನ್ನಿವೇಶದಲ್ಲಿ ಇತರ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಬೃಹತ್‌ ಸಮಾವೇಶಗಳನ್ನು ರದ್ದುಗೊಳಿಸುವ ಬಗ್ಗೆ ಯೋಚಿಸಬೇಕಿದೆ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ರಾಹುಲ್‌ ಕ್ರಮವನ್ನು ಸ್ವಾಗತಿಸಿರುವ ಕಾಂಗ್ರೆಸ್‌, “ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್‌ ನಿಲುವು ಮಾದರಿಯಾಗಲಿ. ಅವರೂ ರ‍್ಯಾಲಿ ರದ್ದುಗೊಳಿಸಲಿ’ ಎಂದು ಒತ್ತಾಯಿಸಿದೆ.

ಇತ್ತೀಚೆಗಷ್ಟೇ (5ನೇ ಹಂತಕ್ಕೆ ) ರಾಹುಲ್‌ ಬಂಗಾಳದಲ್ಲಿ ಚೊಚ್ಚಲ ಪ್ರಚಾರ ಕೈಗೊಂಡಿದ್ದರು. ಬಂಗಾಳದಲ್ಲಿ ಇನ್ನು 3 ಹಂತದ ಮತದಾನ ಬಾಕಿ ಇದೆ.

ಇದನ್ನೂ ಓದಿ :ಕೋವಿಡ್ ಪ್ರಕರಣಗಳ ಉಲ್ಬಣ : ತಮಿಳುನಾಡು-ಬಿಹಾರಿನಲ್ಲಿ ರಾತ್ರಿ ಕರ್ಫ್ಯೂ ಜಾರಿ

Advertisement

ಮತ್ತೆ ಹಿಂಸಾಚಾರ: ಜಲ್ಪೆಗುರಿ ಕ್ಷೇತ್ರದಲ್ಲಿ ಶನಿವಾರ ರಾತ್ರಿ ಮತದಾನೋತ್ತರ ಸಂಘರ್ಷ ಏರ್ಪಟ್ಟಿದ್ದು, ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪೊರಝಾರ್‌ ಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಶಿಖಾ ಚಟರ್ಜಿ, ಟಿಎಂಸಿ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ.

ಮೋದಿ ರಾಜೀನಾಮೆ ನೀಡಲಿ: ಕೊರೊನಾ ಏರಿಕೆ ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣ ವಿಫ‌ಲವಾಗಿದ್ದು, ಕೂಡಲೇ ರಾಜೀನಾಮೆ ನೀಡುವಂತೆ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಏತನ್ಮಧ್ಯೆ, ವಿವಾದಿತ ಹೇಳಿಕೆ ಕಾರಣಕ್ಕಾಗಿ ಬಿಜೆಪಿ ಮುಖಂಡ ಸಯಾಂತನ್‌ ಬಸು, ಟಿಎಂಸಿ ನಾಯಕಿ ಸುಜಾತಾ ಮಂಡಲ್‌ಗೆ ಚುನಾವಣಾ ಆಯೋಗ 24 ಗಂಟೆ ಪ್ರಚಾರದಿಂದ ದೂರ ಉಳಿಯುವಂತೆ ನಿಷೇಧ ವಿಧಿಸಿದೆ.

ದೀದಿಗೆ ಹತಾಶೆ : ಶಾ
5 ಹಂತದ ಮತದಾನದಲ್ಲಿ ಬಿಜೆಪಿ ಬಗ್ಗೆ ಜನರ ಒಲವು ಕಂಡು ದೀದಿ ಹತಾಶರಾಗಿದ್ದಾರೆ. ಈ 180 ಕ್ಷೇತ್ರಗಳ ಪೈಕಿ ಬಿಜೆಪಿ 122ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ ಎಂದು ಗೃಹ ಸಚಿವ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ವರೂಪ್‌ ನಗರದ ರ‍್ಯಾಲಿಯಲ್ಲಿ ಮಾತನಾಡಿದ ಅವರು, “ಬಂಗಾಳದ ಯಾವುದೇ ದಿಕ್ಕಿಗೆ ಹೋದರೂ, ದೀದಿಯ ನಿರ್ಗಮನ ಸೂಚನೆಗಳೇ ಕಾಣಿಸುತ್ತಿವೆ’ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next