ಹೊಸದಿಲ್ಲಿ: ಒಂದು ವಿಚಾರಕ್ಕಾಗಿ ಸಮರ್ಥ ನಿರ್ಧಾರ ಕೈಗೊಂಡಿದ್ದರಿಂದ ನನ್ನ ತಂದೆ ( ರಾಜೀವ್ ಗಾಂಧಿ) ಮತ್ತು ಅಜ್ಜಿ ( ಇಂದಿರಾ ಗಾಂಧಿ) ಹತ್ಯೆಯಾಗಿದ್ದರು. ಇದು ನನಗೆ ಹೆಮ್ಮೆಯ ವಿಚಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಚಿಕಾಗೋ ವಿಶ್ವವಿದ್ಯಾಲಯದ ದೀಪೇಶ್ ಚಕ್ರವರ್ತಿ ಜೊತೆಗೆ ನಡೆಸಿದ ವರ್ಚುವಲ್ ಚರ್ಚೆಯಲ್ಲಿ ರಾಹುಲ್ ಗಾಂಧಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದರು.
ಇದನ್ನೂ ಓದಿ:ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ತರಗತಿಗಳು ಫೆ.15 ರಿಂದ ಆರಂಭ : ಉ.ಪ್ರ ಸರ್ಕಾರ
ನನ್ನ ಅಜ್ಜಿ ಮತ್ತು ತಂದೆ ಒಂದು ವಿಚಾರಕ್ಕಾಗಿ ಹತ್ಯೆಯಾದರು. ಇದರ ಬಗ್ಗೆ ನನಗೆ ಹೆಮ್ಮೆಯಿದೆ. ಇದು ಅವರ ಬಗ್ಗೆ, ನನ್ನ ಸ್ಥಾನದ ಬಗ್ಗೆ ಮತ್ತು ನಾನೇನು ಮಾಡಬೇಕು ಎನ್ನುವ ಬಗ್ಗೆ ನನಗೆ ಅರ್ಥ ಮಾಡಿಸುತ್ತದೆ ಎಂದರು.
ಕಾಂಗ್ರೆಸ್ ನ ಕುಟುಂಬ ರಾಜಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ನಮ್ಮ ಕುಟುಂಬದ ಮೇಲೆ ಈ ಆಪಾದನೆ ನನಗೆ ಅಚ್ಚರಿ ಮೂಡಿಸುತ್ತದೆ. ನಮ್ಮ ಕುಟುಂಬ ಸದಸ್ಯರು ಪ್ರಧಾನ ಮಂತ್ರಿಯಾಗಿ 30 ವರ್ಷಗಳೇ ಕಳೆಯಿತು ಎಂದಿದ್ದಾರೆ.
ಇದನ್ನೂ ಓದಿ: ಕುಲ್ಗಾಮ್ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಉಗ್ರ ನಂಟು? ಲಶ್ಕರ್ ಉಗ್ರ ಜಹೂರ್ ಅಹಮದ್ ಬಂಧನ
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಟ್ರೋಲ್, ವ್ಯಂಗ್ಯಕ್ಕೆ ಒಳಗಾಗುವ ಬಗ್ಗೆ ಮಾತನಾಡಿದ ಅವರು, ಟ್ರೋಲ್‌ಗಳ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ಯಾವುದರ ಪರ ನಿಲ್ಲಬೇಕು, ಏನು ಮಾಡಬೇಕು, ಏನು ಮಾತನಾಡಬೇಕು ಎಂಬ ಸಂಪೂರ್ಣ ಅರಿವು ನನಗೆ ಇದೆ. ಕೆಲವೊಮ್ಮೆ ಟ್ರೋಲ್‌ಗಳು ನನಗೆ ಮಾರ್ಗದರ್ಶಕರಂತೆ ದಾರಿ ತೋರುತ್ತವೆ ಎಂದು ಹೇಳಿದರು.