Advertisement
ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಮೋದಿ ಕೇವಲ 15 ಮಂದಿಗೆ ಪ್ರಧಾನಿಯಾಗಿದ್ದಾರೆ. ದೇಶದ ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಶ್ರೀಮಂತರ ಪಾಲಿಗೆ ಚೌಕಿದಾರ್ ಆಗಿದ್ದಾರೆ ಎಂದು ಟೀಕಿಸಿದರು.
Related Articles
Advertisement
ಮೋದಿ ಎಂಬ ಹೆಸರೇಕಿದೆ: ನೀರವ್ ಮೋದಿ, ಲಲಿತ್ ಮೋದಿ, ಚೋಕ್ಸಿ, ವಿಜಯಮಲ್ಯ, ಅಂಬಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದ ಕಳ್ಳರ ಕೂಟ ಜನರ ಹಣವನ್ನು ಕೊಳ್ಳೆ ಹೊಡೆದಿದ್ದಾರೆ, ರೈತರ, ಬಡವರ, ಕಾರ್ಮಿಕರ ಹಣವನ್ನು ಲೂಟಿ ಮಾಡಿರುವುದು ಸ್ಪಷ್ಟವಾಗಿ ಜನತೆಯ ಕಣ್ಣಿಗೆ ಗೋಚರಿಸುತ್ತಿದೆ. ಸಾವಿರಾರು ಕೋಟಿ ರೂ. ಹಣವನ್ನು ಜನತೆಗೆ ಹಾಗೂದೇಶಕ್ಕೆ ವಂಚಿಸಿರುವ ಕಳ್ಳರ ಹೆಸರು ಬಹುತೇಕ ಮೋದಿ ಎಂದು ಏಕಿದೆ ಎಂದು ವ್ಯಂಗ್ಯವಾಡಿದರು.
ಗಬ್ಬರ್‌ಸಿಂಗ್ ಜಿಎಸ್‌ಟಿ: ಅನಿಲ್ ಅಂಬಾನಿಯನ್ನು ಆಲಂಗಿಸಿಕೊಳ್ಳುವ ಮತ್ತು ನೀರವ್ ಮೋದಿ ಜೊತೆಗೆ ಫೋಟೋ ತೆಗೆಸಿಕೊಳ್ಳುವ ಪ್ರಧಾನಿ ಮೋದಿ ದೇಶದ ಬಡವರು, ರೈತರು, ಕಾರ್ಮಿಕರನ್ನು ಏಕೆ ಅಲಂಗಿಸಿ ಕೊಳ್ಳುವುದಿಲ್ಲ ಹಾಗೂ ಇವರ ಜೊತೆ ಏಕೆ ಫೋಟೋ ತೆಗೆಸಿಕೊಳ್ಳುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಅವರು, ನೋಟು ಅಮಾನ್ಯಿàಕರಣ ಹಾಗೂ ಜಿಎಸ್‌ಟಿ ಎಂಬ ನೆಪದಲ್ಲಿ ಬಡವರನ್ನು, ರೈತರನ್ನು, ಜನ ಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡಿದ್ದಲ್ಲದೆ ಗಬ್ಬರ್ ಸಿಂಗ್ ಜಿಎಸ್‌ಟಿ ರೂಪದಲ್ಲಿ ಬಹುದೊಡ್ಡ ಹೊಡೆದ ನೀಡಿದ್ದಾರೆ ಎಂದು ದೂರಿದರು. ಗಬ್ಬರ್‌ಸಿಂಗ್ ಟ್ಯಾಕ್ಸ್ ಹೆಸರಿನಲ್ಲಿ ಶೇ.28 ತೆರಿಗೆ ವಸೂಲಿ ಮಾಡುವ ಮೂಲಕ ಜನಸಾಮಾನ್ಯರಿಗೆ ತೊಂದರೆ ನೀಡಲಾಗುತ್ತಿದೆ. ಹೋದಕಡೆಯಲ್ಲೆಲ್ಲಾ ಭಾಷಣದಲ್ಲಿ ಪೊಳ್ಳು ಭರವಸೆಗಳನ್ನು ನೀಡುತ್ತಿರುವ ಮೋದಿ ಕಳೆದ 5 ವರ್ಷದಲ್ಲಿ ಭಾರತದಲ್ಲಿ ನಿರುದ್ಯೋಗ ನಿವಾರಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಜನರ ಮುಂದಿಡುತ್ತಿಲ್ಲ, 5 ವರ್ಷದ ಅಭಿವೃದ್ಧಿ ಜನರಿಗೆ ತಿಳಿಸುತ್ತಿಲ್ಲ. ಮೇಕ್ ಇನ್ ಇಂಡಿಯಾ, ಸ್ಟಾಂಡ್ ಅಫ್ಇಂಡಿಯಾ ಘೋಷಣೆಗಳನ್ನು ಮಾಡಿರುವ ಡೈಲಾಗ್ ಗಳನ್ನು ಕೇಳಿ ಯುವ ಜನತೆ ಬೇಸತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉದ್ಯಮಿ ಅನಿಲ್ ಅಂಬಾನಿಗೆ ಸಹಸ್ರ ಕೋಟಿ ರೂ. ಸಾಲ ನೀಡಲಾಗಿದ್ದು, ಇನ್ನು ವಾಪಸ್ ಪಡೆದಿಲ್ಲ ಸಾಲ ಪಡೆದ ಖಾತೆಯನ್ನು ನಿರ್ವಹಣೆ ಮಾಡದೆ ಅದನ್ನು ಹಾಗೇ ಉಳಿಸಿಕೊಂಡಿದ್ದಾರೆ. ಈ ಬಗ್ಗೆಯೂ ಪ್ರಧಾನಿ ಮೋದಿ ಚಕಾರವೆತ್ತುತ್ತಿಲ್ಲ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿ ಸುಳ್ಳನ್ನೇ ಜನತೆ ಕೇಳಿದ್ದು, ರೈತರ, ಕೃಷಿಕರ, ಭ್ರಷ್ಟಾಚಾರ,ಕಾರ್ಮಿಕರ ಬಗ್ಗೆ ಮಾತೇ ಎತ್ತುತ್ತಿಲ್ಲ, ಇಂತಹವ್ಯಕ್ತಿಯನ್ನು ಜನತೆ ತಿರಸ್ಕರಿಸಿ ರೈತರ ರಕ್ಷಣೆಯಹೊಣೆ ಹೊತ್ತಿರುವ ಹಾಗೂ ಯುವಕರಿಗೆಉದ್ಯೋಗ ಸೃಷ್ಟಿಸುವ ಮತ್ತು ಪ್ರೀತಿ, ವಿಶ್ವಾಸ,ಸಾಮರಸ್ಯ ಹಾಗೂ ಅಭಿವೃದ್ಧಿ ವಿಚಾರಅಳವಡಿಸಿಕೊಂಡಿರುವ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಮನವಿ ಮಾಡಿದರು.