ಕೂಚ್ ಬೆಹಾರ್: ಪಶ್ಚಿಮ ಬಂಗಾಳದಲ್ಲಿ ಸ್ವತಂತ್ರ ವಾಗಿ ಸ್ಪರ್ಧಿಸುವ ಬಗ್ಗೆ ಟಿಎಂಸಿ ಮಾತಾಡಿರು ವಂತೆಯೇ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಗುರುವಾರ ಪಶ್ಚಿಮ ಬಂಗಾಳ ಪ್ರವೇಶಿಸಿದೆ. ಕೂಚ್ ಬೆಹಾರ್‌ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, “ಅನ್ಯಾಯದ ವಿರುದ್ಧ ದೇಶಾದ್ಯಂತ ಪ್ರತಿಪಕ್ಷಗಳ ಒಕ್ಕೂಟ “ಇಂಡಿ ಯಾ’ ಒಗ್ಗಟ್ಟಿ ನಿಂದ ಹೋರಾಡಲಿದೆ’ ಎಂದರು.
“ದೇಶಾದ್ಯಂತ ಬಿಜೆಪಿ ಮತ್ತು ಆರ್‌ಎಸ್‌ಎಸ್ ಹಿಂಸಾಚಾರ ಮತ್ತು ದ್ವೇಷ ಭಾವನೆ ಯನ್ನು ಹರಡುತ್ತಿದೆ. ದೇಶವನ್ನು ಅನ್ಯಾಯ ಆವರಿಸಿದೆ ಎಂಬ ಕಾರಣಕ್ಕೆ ಯಾತ್ರೆಗೆ “ನ್ಯಾಯ’ ಪದವನ್ನು ಸೇರಿಸಲಾಗಿದೆ. ದೇಶ ವನ್ನು ಆವರಿಸಿರುವ ಅನ್ಯಾ ಯದ ವಿರುದ್ಧ ಇಂಡಿಯಾ ಒಕ್ಕೂಟ ಹೋರಾಟ ನಡೆಸಲಿದೆ’ ಎಂದು ರಾಹುಲ್ ಗಾಂಧಿ ಹೇಳಿದರು.
ಪಶ್ಚಿಮ ಬಂಗಾಳದ ಆರು ಜಿಲ್ಲೆಗಳು ಮತ್ತು ಆರು ಲೋಕಸಭೆ ಕ್ಷೇತ್ರಗಳಲ್ಲಿ ನ್ಯಾಯ ಯಾತ್ರೆ ಆಯೋಜಿಸಲಾಗಿದ್ದು, ಒಟ್ಟು 5 ದಿನಗಳಲ್ಲಿ ರಾಜ್ಯದ 523 ಕಿ.ಮೀ. ದೂರ ಯಾತ್ರೆ ಸಾಗಲಿದೆ.
ಯಾತ್ರೆಗೆ ನಿತೀಶ್ ಇಲ್ಲ? :
ಪಶ್ಚಿಮ ಬಂಗಾಳದ ಬಳಿಕ ಯಾತ್ರೆ ಬಿಹಾರ ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ಸಿಎಂ ನಿತೀಶ್ ಕುಮಾರ್ ಯಾತ್ರೆಯಿಂದ ಅಂತರ ಕಾಯ್ದುಕೊಳ್ಳಲಿದೆ ಎಂದು ಹೇಳಲಾಗಿದೆ.