ಹೊಸದಿಲ್ಲಿ: ಕಾಂಗ್ರೆಸ್ ಗೆ ತಾನು ನೀಡಿರುವ ನಾಯಕತ್ವ ಸೂತ್ರದಲ್ಲಿ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ವಾದ್ರಾ ಇರಲಿಲ್ಲ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಗುರುವಾರ ಆಜ್‌ತಕ್ ವಿಶೇಷ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ನಾಯಕತ್ವದ ಸೂತ್ರದಲ್ಲಿ ಮೂರನೇ ವ್ಯಕ್ತಿಯ ಹೆಸರಿದೆಯೇ ಎಂಬ ಪ್ರಶ್ನೆಗೆ, ಕಾಂಗ್ರೆಸ್ ಜೊತೆಗಿನ ಮಾತುಕತೆಯಲ್ಲಿ ಬೇರೆ ನಾಯಕನ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ಕಾಂಗ್ರೆಸ್‌ಗೆ ಯಾವುದೇ ಪಿಕೆ ಅಗತ್ಯವಿಲ್ಲ, ಪಕ್ಷವು ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ ಎಂದಿದ್ದ ಪ್ರಶಾಂತ್ ಕಿಶೋರ್ ಹೇಳಿದರು.
ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಅಕ್ರಮ: ಕೊನೆಗೂ ಸಿಐಡಿ ಬಲೆಗೆ ಬಿದ್ದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ
“ಮಾಧ್ಯಮಗಳು ನನ್ನನ್ನು ಅಗತ್ಯಕ್ಕಿಂತ ದೊಡ್ಡದಾಗಿ ತೋರಿಸುತ್ತಿವೆ. ನನ್ನ ನಿಲುವು, ವ್ಯಕ್ತಿತ್ವ ಅಷ್ಟು ದೊಡ್ಡದಲ್ಲ, ರಾಹುಲ್ ಗಾಂಧಿ ನನ್ನ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಕಾಂಗ್ರೆಸ್‌ಗೆ ಯಾವುದೇ ಪಿಕೆ ಅಗತ್ಯವಿಲ್ಲ, ಅದು ತನ್ನದೇ ಆದ ನಿರ್ಧಾರ ತೆಗೆದುಕೊಳ್ಳಬಹುದು. ಕಾಂಗ್ರೆಸ್ ಗೆ ಹೇಳಬೇಕಾದ್ದನ್ನು ಹೇಳಿದ್ದೇನೆ, ಈಗ ಕೆಲಸ ಮಾಡಬೇಕೋ ಬೇಡವೋ ಎಂಬುದು ಅವರ ಆಯ್ಕೆ” ಎಂದು ಪ್ರಶಾಂತ್ ಕಿಶೋರ್ ಹೇಳಿದರು.