Advertisement

ವಯನಾಡ್‌ನ‌ಲ್ಲಿ ರಾಹುಲ್‌ ಅಬ್ಬರ

12:25 PM Apr 06, 2019 | mahesh |

ಕಲ್ಪೆಟ್ಟಾ (ಕೇರಳ): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಅಮೇಠಿಯಿಂದ ಸ್ಪರ್ಧಿಸುವುದರ ಜತೆಗೆ, ಕೇರಳದ ವಯನಾಡ್‌ನಿಂದಲೂ ಸ್ಪರ್ಧಿಸಲು ನಿರ್ಧರಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಗುರುವಾರ, ವಯನಾಡ್‌ನ‌ ಆಡಳಿತ ಕೇಂದ್ರವಾದ ಕಲ್ಪೆಟ್ಟಾದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ತಮ್ಮ ಸಹೋದರಿ ಪ್ರಿಯಾಂಕಾ ವಾದ್ರಾ, ಹಿರಿಯ ಕಾಂಗ್ರೆಸ್ಸಿಗರಾದ ಕೆ.ಸಿ. ವೇಣುಗೋಪಾಲ್‌, ಮುಕುಲ್‌ ವಾಸ್ನಿಕ್‌ ಹಾಗೂ ಇನ್ನಿತರರೊಂದಿಗೆ ಆಗಮಿಸಿ, ಜಿಲ್ಲಾಧಿಕಾರಿ ಎ.ಆರ್‌. ಅಜಯ ಕುಮಾರ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿ ಹೊರಗಡೆ ಕಾಂಗ್ರೆಸ್‌ ಹಾಗೂ ಯುಡಿಎಫ್ನ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಬಳಗ ಹಾಜರಿತ್ತು.

Advertisement

ಸ್ಪರ್ಧೆಗೆ ಸಮರ್ಥನೆ: ನಾಮಪತ್ರ ಸಲ್ಲಿಕೆ ಅನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ರಾಹುಲ್‌, ತಾವು ವಯನಾಡ್‌ನ‌ಲ್ಲಿ ಸ್ಪರ್ಧಿಸುತ್ತಿರುವುದನ್ನು ಸಮರ್ಥಿಸಿ ಕೊಂಡರು. ಈ ಕುರಿ ತಾಗಿ ಅಮೇಠಿಯ ತಮ್ಮ ಪ್ರತಿಸ್ಪರ್ಧಿ ಸ್ಮತಿ ಇರಾನಿ ಮಾಡಿ ರುವ ಟೀಕೆಗೆ ಉತ್ತರಿಸಿದ ಅವರು, “”ನಮ್ಮ ದೇಶದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾಗಗಳೆಲ್ಲವೂ ಅಖಂಡ ಭಾರತದ ಕುರುಹು ಗಳು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿ, ದಕ್ಷಿಣ ಭಾರತೀಯರ ಸಂಸ್ಕೃತಿ, ಭಾಷೆ, ಇತಿಹಾಸದ ಮೇಲೆ ದಾಳಿ ನಡೆಸುವಂಥದ್ದಾಗಿದೆ. ಆದರೆ, ಇಡೀ ಭಾರತವೇ ಒಂದು, ಇಲ್ಲಿ ಉತ್ತರ- ದಕ್ಷಿಣ ಎಂಬ ಭೇದವಿಲ್ಲ ಎಂಬುದನ್ನು ಸಾಬೀತುಪಡಿಸಲು ನಾನು ಕೇರಳದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ” ಎಂದರು. ಜತೆಗೆ, ವಯನಾಡ್‌ನಿಂದ ಸ್ಪರ್ಧಿಸು ವುದನ್ನು ಕೇರಳದಲ್ಲಿ ಆಡಳಿತಾ ರೂಢ ಎಪಿಎಂ ನೇತೃತ್ವದ ಎಲ್‌ಡಿಎಫ್ ನಾಯಕರು ಟೀಕಿಸಿದ್ದರ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, “”ಕೇರಳದಲ್ಲಿ ಸಿಪಿಎಂ, ಕಾಂಗ್ರೆಸ್‌ ನಡುವಿನ ವಾಕ್ಸಮರ ಸಾಮಾನ್ಯ ವಾದದ್ದು. ನನ್ನ ಸ್ಪರ್ಧೆಯಿಂದ ಎರಡೂ ಪಕ್ಷಗಳಿಗೆ ಒಂದು ಏಕತೆಯ ಸಂದೇಶ ರವಾನಿಸಲು ಯತ್ನಿಸುತ್ತೇನೆ. ಆದರೆ, ಎಡ ಪಕ್ಷಗಳ ವಿರುದ್ಧ ಚಕಾರವೆತ್ತುವುದಿಲ್ಲ” ಎಂದರು.

ಭರ್ಜರಿ ರೋಡ್‌ ಶೋ
ನಾಮಪತ್ರ ಸಲ್ಲಿಕೆ ನಂತರ ತೆರೆದ ವಾಹನದಲ್ಲಿ ಸಹೋದರಿ ಪ್ರಿಯಾಂಕಾ ವಾದ್ರಾ ಜತೆಗೆ ರಾಹುಲ್‌ ರೋಡ್‌ ಶೋ ನಡೆಸಿದರು. ಸುಂದರ ಬೆಟ್ಟಗುಡ್ಡಗಳ ನಗರವಾದ ಕಲ್ಪೆಟ್ಟಾದ ಚಿಕ್ಕ ಚಿಕ್ಕ ರಸ್ತೆಗಳಲ್ಲಿ ಜನರು ಕಿಕ್ಕಿರಿದು ರಾಹುಲ್‌ ಅವರತ್ತ ಕೈ ಬೀಸಿ ತಮ್ಮ ಹರ್ಷ ವ್ಯಕ್ತಪಡಿಸಿದರು. ಕಿರಿದಾದ ರಸ್ತೆಗಳ ಎರಡೂ ಕಡೆ ಜನ ಜಮಾಯಿಸಿದ್ದರಿಂದ ಭದ್ರತಾ ಸಿಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಈ ಸಂದರ್ಭದಲ್ಲಿ ಕೇರಳದ ಮಾಜಿ ಸಿಎಂ ಉಮ್ಮನ್‌ ಚಾಂಡಿ, ಕೇರಳ ವಿಧಾನಸಭೆ ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ಕೂಡ ಇದ್ದರು. ಮಾರ್ಗ ಮಧ್ಯೆ, ಹಲವಾರು ಜನರ ಕೈ ಕುಲುಕಿದ ರಾಹುಲ್‌, ಕೆಲವ ರೊಂದಿಗೆ ಸೆಲ್ಫಿಗಾಗಿ ಮುಖ ಮಾಡಿದರು. ಎಲ್ಲೆಲ್ಲೂ ಕಾಂಗ್ರೆಸ್‌ ಮತ್ತು ಯೂನಿ ಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಬಾವುಟಗಳು ರಾರಾಜಿಸಿದವು.

ಮೋದಿ ವಿರುದ್ಧ ಟೀಕೆ
“”ದೇಶದಲ್ಲಿ ಕೃಷಿ ಮತ್ತು ನಿರುದ್ಯೋಗ ಸಮಸ್ಯೆಗಳು ತಾಂಡವವಾಡುತ್ತಿವೆ. 2014ರಲ್ಲಿ ನಾನೊಬ್ಬ ಚೌಕಿದಾರ ಎಂದು ಮೋದಿ ಹೇಳಿದಾಗ ಎಲ್ಲರೂ ಅವರ ಮೇಲೆ ಭರವಸೆಯಿಟ್ಟಿದ್ದರು. ಆದರೆ, ಅದೇ ಚೌಕಿದಾರ ಅನಿಲ್‌ ಅಂಬಾನಿಗೆ ವಾಯುಪಡೆಗೆ ಮೀಸಲಿದ್ದ 30,000 ಕೋಟಿ ರೂ. ಕೊಟ್ಟರು” ಎಂದು ರಫೇಲ್‌ ಒಪ್ಪಂದವನ್ನು ಮತ್ತೆ ಪ್ರಸ್ತಾವಿಸಿದರು. “”ರಕ್ಷಣಾ ಕ್ಷೇತ್ರದಲ್ಲಿ ಅನುಭವವೇ ಇಲ್ಲದ ಅನಿಲ್‌ ಅಂಬಾನಿಗೆ 30,000 ಕೋಟಿ ರೂ. ಯೋಜನೆ ನೀಡುವ ಮೂಲಕ 45,000 ಕೋಟಿ ರೂ. ಸಾಲವನ್ನು ಮೈಮೇಲೆಳೆದುಕೊಂಡಿದ್ದ ಅವರಿಗೆ ಚೌಕಿದಾರ್‌ ಪರೋಕ್ಷವಾಗಿ ಸಹಾಯ ಮಾಡಿದರು” ಎಂದು ಅವರು ತಿಳಿಸಿದರು.

ರಾಹುಲ್‌ನನ್ನು ಚೆನ್ನಾಗಿ ನೋಡಿಕೊಳ್ಳಿ
ಪ್ರಿಯಾಂಕಾ ವಾದ್ರಾ ಟ್ವೀಟ್‌ ಮಾಡಿ, “”ನನ್ನ ನಿಜವಾದ ಸ್ನೇಹಿತನಂತಿ ರುವ ನನ್ನ ಸಹೋದರ ಒಬ್ಬ ಧೈರ್ಯವಂತ. ಈ ಚುನಾವಣೆಯಲ್ಲಿ ಆತನನ್ನು ಕೈ ಹಿಡಿದರೆ, ಆತ ಎಂದಿಗೂ ನಿಮ್ಮನ್ನು ಕೈ ಬಿಡಲಾರ. ಅವನನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು ಮನವಿ ಮಾಡಿದ್ದಾರೆ.

Advertisement

ಅಮೇಠಿಗೆ ರಾಹುಲ್‌ ಅವಮಾನ: ಸ್ಮತಿ
“ಕೇರಳದ ವಯನಾಡ್‌ನ‌ಲ್ಲಿ ಸ್ಪರ್ಧಿಸಲು ನಿರ್ಧರಿಸುವ ಮೂಲಕ ರಾಹುಲ್‌ ಗಾಂಧಿ, ಅಮೇಠಿ ಜನತೆಗೆ ಅವಮಾನ ಮಾಡಿದ್ದಾರೆ’ ಎಂದು ಅಮೇಠಿಯ ಬಿಜೆಪಿ ಅಭ್ಯರ್ಥಿ ಸ್ಮತಿ ಇರಾನಿ, ರಾಹುಲ್‌ರನ್ನು ಟೀಕಿಸಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ಅಮೇಠಿಗೆ ಗುರುವಾರ ಭೇಟಿ ನೀಡಿದ್ದ ಅವರು, ಪರ್ಸಾದೇಪುರ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್‌ ರ್ಯಾಲಿಯಲ್ಲಿ ಮಾತನಾಡಿದರು. ಭಾಷಣದಲ್ಲಿ ತಮ್ಮನ್ನು ತಾವು “ದೀದಿ’ (ಅಕ್ಕ) ಎಂದು ಸಂಬೋಧಿಸಿಕೊಂಡ ಸ್ಮತಿ, “”ಜನರ ಆಶೀರ್ವಾದ ಪಡೆಯಲು “ದೀದಿ’ ಅಮೇಠಿಗೆ ಆಗಮಿಸಿರುವಾಗ, ಈವರೆಗೆ ನಾಪತ್ತೆ ಯಾಗಿದ್ದ ಇಲ್ಲಿನ ಸಂಸದ ಕೇರಳಕ್ಕೆ ಹೋಗಿದ್ದಾರೆ. ಇದು ಮೇಲ್ನೋಟಕ್ಕೆ ಕಾಕತಾಳೀಯವಾಗಿದ್ದರೂ ದೈವೇಚ್ಛೆಯಾಗಿದೆ’ ಎಂದೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next