Advertisement

ಮೇಕ್ ಇನ್ ಇಂಡಿಯಾ ; ರಾಹುಲ್ ಹೇಳಿಕೆಗೆ ರವಿಶಂಕರ್ ಪ್ರಸಾದ್ ತಿರುಗೇಟು

07:40 PM Dec 24, 2022 | Team Udayavani |

ನವದೆಹಲಿ: ರಾಹುಲ್ ಗಾಂಧಿ ‘ಮೇಕ್ ಇನ್ ಇಂಡಿಯಾ’ ಕುರಿತು ಮಾತನಾಡಿದ್ದಾರೆ. ಇಂದು, ಚೀನ ನಂತರ ಭಾರತವು ಮೊಬೈಲ್ ಫೋನ್‌ಗಳ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ. ಭಾರತದಲ್ಲಿ ಈಗ ಸ್ಯಾಮ್‌ಸಂಗ್ ಮತ್ತು ಆಪಲ್ ಫೋನ್‌ಗಳು ತಯಾರಾಗುತ್ತಿವೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಅವರು ತಿರುಗೇಟು ನೀಡಿದ್ದಾರೆ.

Advertisement

ಬಿಹಾರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಇಂದು ಮತ್ತೆ ಭಾರತೀಯ ಸೇನೆಯನ್ನು ಪ್ರಶ್ನಿಸಿದ್ದಾರೆ. ಭೂಮಿಯನ್ನು ಯಾವಾಗ ಹಿಂದಿರುಗಿಸುತ್ತೀರಿ ಎಂದು ಅವರು ಕೇಳುತ್ತಿದ್ದಾರೆ. ಆದರೆ ಭೂಮಿಯನ್ನು ಯಾವಾಗ ತೆಗೆದುಕೊಳ್ಳಲಾಯಿತು ಸೇನೆಯ ಬಗ್ಗೆ ದ್ವೇಷಪೂರಿತ ಹೇಳಿಕೆಗಳನ್ನು ನೀಡುವುದು ಅವರ ಪಕ್ಷದ ತಂತ್ರವಾಗಿದೆ ಎಂದರು.

ರಾಹುಲ್ ಗಾಂಧಿ ಪ್ರೀತಿ ಹರಡುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಭಾರತವನ್ನು ವಿಭಜಿಸಲು ಪ್ರಯತ್ನಿಸುವ ಜನರು ಅವರೊಂದಿಗೆ ಇದ್ದಾರೆ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ‘ತುಕ್ಡೆ ತುಕ್ಡೆ’ ಗ್ಯಾಂಗ್‌ಗೆ ಸೇರಿದ ಜನರು ಅವರೊಂದಿಗೆ ವಿವಿಧ ಸ್ಥಳಗಳಲ್ಲಿ ನಡೆದರು. ಅವರೊಂದಿಗೆ ನಡೆದುಕೊಂಡು ಪ್ರೀತಿಯನ್ನು ಹರಡುವುದು ಹೇಗೆ? ಎಂದು ಬಿಜೆಪಿ ನಾಯಕ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next