Advertisement

ರಾಹುಲ್‌ ನನ್ನ ಬಾಸ್‌; ಎಲ್ಲರೂ ಆತನನ್ನು ಬೆಂಬಲಿಸಬೇಕು: ಸೋನಿಯಾ

11:44 AM Feb 08, 2018 | Team Udayavani |

ಹೊಸದಿಲ್ಲಿ : ರಾಹುಲ್‌ ಗಾಂಧಿ ಈಗ ನನ್ನ ಬಾಸ್‌; ಆತನ ಶಕ್ತಿ, ಸಾಮರ್ಥ್ಯದ ಬಗ್ಗೆ ನನಗೆ ಶಂಕೆಯೇ ಇಲ್ಲ ಎಂದು ಎರಡು ದಶಕಗಳ ಕಾಲ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸಿ ತನ್ನ ಪುತ್ರನಿಗೆ ಪಕ್ಷದ ಕಾರ್ಯಭಾರವನ್ನು ಒಪ್ಪಿಸಿ ಹಿಂಬದಿ ಸೀಟಿಗೆ ಸರಿದಿರುವ ಸೋನಿಯಾ ಗಾಂಧಿ ಅವರು ಸಂಭ್ರಮದಿಂದ ಹೇಳಿರುವ ಮಾತಿದು. 

Advertisement

“ಕಾಂಗ್ರೆಸ್‌ ಅಧ್ಯಕ್ಷನಾಗಿ ರಾಹುಲ್‌ ಗಾಂಧಿಯ ಶಕ್ತಿ, ಸಾಮರ್ಥ್ಯ, ಪ್ರೌಢಿಮೆ ಹಾಗೂ ಕೌಶಲದ ಬಗ್ಗೆ ನನಗೀಗ ಯಾವ ಸಂದೇಹಗಳೂ ಇಲ್ಲ; ಎಲ್ಲರೂ ಆತನನ್ನು ಬೆಂಬಲಿಸುವರೆಂದು ನಾನು ಹಾರೈಸುತ್ತೇನೆ’ ಎಂದು ಸೋನಿಯಾ ಗಾಂಧಿ ನಿನ್ನೆ ಬುಧವಾರ ನಡೆದಿದ್ದ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಶೈಲಿಯನ್ನು ಟೀಕಿಸುತ್ತಾ, ಸೋನಿಯಾ ಗಾಂಧಿ, “ಆಳುವ ಪಕ್ಷದ ಆಡಳಿತೆಯಲ್ಲಿ ಸಂಸದೀಯ ಶಕ್ತಿಗಳನ್ನು ದುರ್ಬಲಗೊಳಿಸಲಾಗಿದೆ. ಪ್ರಧಾನಿ ಮೋದಿ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಸಂದಿವೆ; ಈ ಅವಧಿಯಲ್ಲಿ ಸಂಸದೀಯ ಸಂಸ್ಥೆಗಳು ವ್ಯವಸ್ಥಿತ ದಾಳಿಗೆ ಗುರಿಯಾಗಿವೆ.ಸಂಸತ್ತು ಮಾತ್ರವಲ್ಲದೆ ನ್ಯಾಯಾಂಗ, ಮಾಧ್ಯಮ ಮತ್ತು ಒಟ್ಟಾರೆಯಾಗಿ ಪೌರ ಸಮಾಜ ದಾಳಿ, ಬೆದರಿಕೆಗೆ ಗುರಿಯಾಗಿವೆ. ರಾಜಕೀಯ ವಿರೋಧಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಗಿದೆ. ದಲಿತರ ಮೇಲೆ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಯಾವುದೇ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿಲ್ಲ; ಹಾಗಾಗಿ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next