Advertisement

ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ; 5 ರೂ.ಗೆ ತಿಂಡಿ, 10 ರೂ.ಗೆ ಊಟ

12:08 PM Aug 16, 2017 | Sharanya Alva |

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಾದ್ಯಂತ ಆರಂಭಿಸಿರುವ 101 ಇಂದಿರಾ ಕ್ಯಾಂಟೀನ್ ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

Advertisement

ಜಯನಗರದಲ್ಲಿನ ಕನಕನಪಾಳ್ಯದಲ್ಲಿ ನಿರ್ಮಾಣವಾಗಿದ್ದ ಇಂದಿರಾ ಕ್ಯಾಂಟೀನ್ ಅನ್ನು ಸಾಂಕೇತಿಕವಾಗಿ ರಾಹುಲ್ ಗಾಂಧಿ ಉದ್ಘಾಟಿಸಿದರು. ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್, ಸಂಸದ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ಕೆಜೆ ಜಾರ್ಜ್, ಮೇಯರ್ ಪದ್ಮಾವತಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ. ಇಂದಿರಾ ಕ್ಯಾಂಟೀನ್ ನಲ್ಲಿ 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ಲಭ್ಯವಾಗಲಿದೆ. ಬೆಂಗಳೂರಿನಾದ್ಯಂತ ಸುಮಾರು 70 ದಿನಗಳಲ್ಲಿ 101 ಇಂದಿರಾ ಕ್ಯಾಂಟೀನ್ ಅನ್ನು ನಿರ್ಮಿಸಲಾಗಿತ್ತು.

ಯಾರೂ ಉಪವಾಸದಿಂದ ಮಲಗಬಾರದು: ರಾಹುಲ್ ಗಾಂಧಿ

ದೇಶದಲ್ಲಿ ಎಲ್ಲರಿಗೂ ಊಟ, ತಿಂಡಿ ಸಿಗಬೇಕು. ಇದು ದೇಶದ ಜನರ ಪ್ರತಿಯೊಬ್ಬರ ಹಕ್ಕು. ಯಾರೂ ಉಪವಾಸದಿಂದ ಮಲಗಬಾರದು. ಬೆಂಗಳೂರಿನ ಯಾವುದೇ ಬಡ ವ್ಯಕ್ತಿ ಹಸಿದ ಹೊಟ್ಟೆಯಲ್ಲಿ ಇರಬಾರದು. ಹಾಗಾಗಿ ಇಂದಿರಾ ಕ್ಯಾಂಟೀನ್ ಮೂಲಕ ಹಸಿದವರ ಹೊಟ್ಟೆ ತಂಬಿಸುವ ಕನಸನ್ನು ನನಸು ಮಾಡುವ ಪ್ರಯತ್ನ  ಬೆಂಗಳೂರಿನಲ್ಲಿ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

Advertisement

ಹೈಲೈಟ್ಸ್:

ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿಗೆ ಹೂ ಗುಚ್ಛ ನೀಡಿ ವೇದಿಕೆಗೆ ಸ್ವಾಗತಿಸಿದ ಸಚಿವ ಕೆಜೆ ಜಾರ್ಜ್

ಜೆಡಿಎಸ್, ಬಿಜೆಪಿ ಮುಖಂಡರು, ಕಾರ್ಪೋರೇಟರ್ ಗಳು ಕಾರ್ಯಕ್ರಮಕ್ಕೆ ಗೈರು

5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ

ನಿಂತುಕೊಂಡು ಆಹಾರ ಸೇವಿಸಲು 8 ಮೇಜುಗಳು

ನಗರದ ಇತರೆಡೆಯೂ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು

Advertisement

Udayavani is now on Telegram. Click here to join our channel and stay updated with the latest news.

Next