Advertisement

ಮಂಗಳೂರಿನ ಪಬ್ಬಾಸ್ ನಲ್ಲಿ ಐಸ್ ಕ್ರೀಮ್ ಸವಿದ ರಾಹುಲ್ ಗಾಂಧಿ

12:42 AM Apr 28, 2023 | Team Udayavani |

ಮಂಗಳೂರು: ಮಂಗಳೂರಿನ ಪ್ರಖ್ಯಾತ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ‌ ಐಸ್ ಕ್ರೀಮ್ ಸವಿದರು.

Advertisement

ಕಾಂಗ್ರೆಸ್ ಚುನಾವಣ‌ ಪ್ರಚಾರದ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಅವರು ನಗರ ಹೊರವಲಯದ ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಸಭೆಯಲ್ಲಿ ಭಾಗವಹಿಸಿ ರಾತ್ರಿ ಬಿಗಿ ಭದ್ರತೆಯೊಂದಿಗೆ ನಗರದ ಲಾಲ್ ಬಾಗ್ ನಲ್ಲಿರುವ ಪ್ರಖ್ಯಾತ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಐಸ್ ಕ್ರೀಮ್ ಸವಿದರು.

ಈ ವೇಳೆ ಡಿ.ಕೆ. ಶಿವಕುಮಾರ್, ಕೆ.ಸಿ. ವೇಣುಗೋಪಾಲ್, ನಲ್ಪಾಡ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಗೆ ಸಾಥ್ ನೀಡಿದರು.

ಈ ವೇಳೆ ರಾಹುಲ್ ಗಾಂಧಿಯೊಂದಿಗೆ ಸೆಲ್ಫಿಗೆ ಜನ ಮುಗಿಬಿದ್ದರು, ಇದಕ್ಕೆ ಸಹಕರಿಸಿದ ರಾಹುಲ್ ಗಾಂಧಿ ಜನರ ಜೊತೆ ಸೆಲ್ಫಿ ತೆಗಿಸಿಕೊಂಡರು.

ಇದನ್ನೂ ಓದಿ: “ತರಂಗ ಯುಗಾದಿ ಧಮಾಕ-2023′ ಅದೃಷ್ಟಶಾಲಿಗಳ ಆಯ್ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next