ಕೋಲ್ಕತಾ: ಪಶ್ಚಿಮ ಬಂಗಾಲ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. ಇದರ ಜತೆಗೆ ಪಕ್ಷದ ಮುಖಂಡ ರಾಹುಲ್ ಗಾಂಧಿ 2 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಅಲ್ಲಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಕಳೆದ ಒಂದು ದಶಕದಿಂದ ಮಾಟಿಗರಾ-ನಕ್ಸಲ್‌ಬಾರಿ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ಹಿಡಿತದಲ್ಲಿಟ್ಟುಕೊಂ ಡಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಗೆದ್ದಿದ್ದ ಶಂಕರ್ ಮಲಕಾರ್ ಈ ಬಾರಿ ಮೂರನೇ ಸ್ಥಾನಕ್ಕಿಳಿ ದಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಆನಂದಮಯ್ ಬರ್ಮನ್ ಗೆದ್ದಿದ್ದಾರೆ., 2006ರಿಂದ 2009ರ ವರೆಗೆ ಹಾಗೂ 2011ರಿಂದ 2016ರ ವರೆಗೆ ಹಿಡಿತದಲ್ಲಿದ್ದ ಗೋಲ್‌ಪೋಕರ್‌ನಲ್ಲಿ ಕಾಂಗ್ರೆಸ್ 3ನೇ ಸ್ಥಾನಕ್ಕೆ ಕುಸಿದಿದೆ.
ಇದೇ ಪ್ರಥಮ: ಪಶ್ಚಿಮ ಬಂಗಾಲದಲ್ಲಿ ಎಡಪಕ್ಷ ಗಳದ್ದು ಈ ಬಾರಿ ಹೀನಾಯ ಸೋಲು. 31 ವರ್ಷಗಳ ಕಾಲ ಸತತವಾಗಿ ಬಂಗಾಲವನ್ನು ಆಳಿದ ಸಿಪಿಐ, ಸಿಪಿಎಂ ಒಂದೇ ಒಂದು ಸ್ಥಾನವನ್ನೂ ಗೆದ್ದಿಲ್ಲ. ಸ್ವತಂತ್ರ ಬಂದಾದ ಮೇಲೆ ಪಶ್ಚಿಮ ಬಂಗಾಳದಲ್ಲಿ ಆ ಪಕ್ಷಗಳು ಇಂಥ ಕಳಪೆ ಸಾಧನೆ ಮಾಡಿರುವುದು ಇದೇ ಮೊದಲು.
ಶೇ.85 ಮಂದಿಗೆ ಠೇವಣಿ ನಷ್ಟ: ಹೊಸ ತಾಗಿ ಅಸ್ತಿತ್ವಕ್ಕೆ ಬಂದಿದ್ದ ಭಾರತೀಯ ಜಾತ್ಯತೀತ ರಂಗ, ಎಡಪಕ್ಷಗಳ ಅಭ್ಯ ರ್ಥಿಗಳನ್ನೂ ಸೋಲಿನ ಕತೆಯೇ. ಕಾಂಗ್ರೆಸ್ ಕೂಡ ಇದೇ ಒಕ್ಕೂಟದ ಅಡಿ ಯಲ್ಲಿ ಸ್ಪರ್ಧಿಸಿತ್ತು. ಪಕ್ಷದ ಅಭ್ಯರ್ಥಿ ನೇಪಾಲ ಚಂದ್ರ ಮಹತೋ ಬಾಘ…ಮುಂಡಿ ಕ್ಷೇತ್ರ ದಲ್ಲಿ ಜಯ ಸಾಧಿಸಿದರೆ, ಐಎಸ್‌ಎಫ್ನ ನೌಶಾದ್ ಸಿದ್ದಿಕಿ ಭಂಗಾರ್‌ನಲ್ಲಿ ಜಯ ಗಳಿಸಿ, ಮೋರ್ಚಾಕ್ಕೆ ಮುಜುಗರ ತಪ್ಪಿಸುವ ಯತ್ನ ಮಾಡಿದ್ದಾರೆ. ಮೋರ್ಚಾದ ಅಭ್ಯರ್ಥಿಗಳು ಸ್ಪರ್ಧಿಸಿದ್ದ 292 ಕ್ಷೇತ್ರಗಳಲ್ಲಿ ಶೇ. 85 ಕ್ಷೇತ್ರಗಳ ಅಭ್ಯರ್ಥಿಗಳು ತಮ್ಮ ಠೇವಣಿಯನ್ನೇ ಕಳೆದುಕೊಂಡಿದ್ದಾರೆ.