Advertisement

ಟ್ರ್ಯಾಕ್ಟರ್ ಓಡಿಸಿಕೊಂಡು ಸಂಸತ್ ಗೆ ಪ್ರವೇಶಿಸಿದ ರಾಹುಲ್ ಗಾಂಧಿ

05:13 PM Jul 26, 2021 | Team Udayavani |

ನವ ದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

Advertisement

ಟ್ರ್ಯಾಕ್ಟರ್ ಓಡಿಸಿಕೊಂಡು ಸಂಸತ್ ಗೆ ಪ್ರವೇಶಿಸಿದ್ದ ಕೇರಳದ ವಯನಾಡಿನ ಸಂಸದ ರಾಹುಲ್ ಗಾಂಧಿ ರಾಷ್ಟ್ರ ರಾಜಕಾರಣದ ವಲಯದಲ್ಲಿ ಸುದ್ದಿ ಮಾಡುತ್ತಿದೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾತ್ಮಕ ನಡಯನ್ನು ಈ ರೀತಿಯಲ್ಲಿ ವ್ಯಕ್ತ ಪಡಿಸಿದ ರಾಹುಲ್ ನಡೆ ಅಚ್ಚರಿ ಮೂಡಿಸಿದ್ದು, ರೈತರ ಬೆನ್ನಿಗೆ ಹಿಂದೆ ಇದ್ದೇವೆ ಎನ್ನವುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.

ಇದನ್ನೂ ಓದಿ :  ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಮತ್ತೆ ಇಬ್ಬರು ಆಯ್ಕೆ: ಬಿಸಿಸಿಐ ಅಧಿಕೃತ ಮಾಹಿತಿ

ರಾಷ್ಟ್ರೀಯ ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡಿದ ಗಾಂಧಿ, ನಾನು ರೈತರ ಧ್ವನಿಯೊಂದಿಗೆ ಬಂದಿದ್ದೇನೆ. ಕೇಂದ್ರ ಸರ್ಕಾರ ರೈತರನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಧ್ವನಿಯನ್ನು ನಿಗ್ರಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೃಷಿ ಕಾನೂನುಗಳ ಬಗ್ಗೆ ಯಾವುದೇ ರೀತಿಯಲ್ಲಿ ಚರ್ಚೆಗೆ ಮುಂದಾಗುತ್ತಿಲ್ಲ. ರೈತರ ವಿಚಾರದಲ್ಲಿ  ಕೇಂದ್ರ ಸರ್ಕಾರ ದಿವ್ಯ ನಿರ್ಲಕ್ಷ್ಯದ ಧೋರಣೆ ಹೊಂದಿದೆ ಎಂದು ಗುಡುಗಿದ್ದಾರೆ.

Advertisement

ಇನ್ನು, 2019 ರ ನವೆಂಬರ್ ನಿಂದ ರಾಷ್ಟ್ರ ರಾಜಧಾನಿಯ ಎಲ್ಲಾ ಗಡಿ ಪ್ರದೇಶಗಳಲ್ಲಿ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರದೊಂದಿಎಗ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದರೂ ಕೂಡ ಕೇಂದ್ರ ಸರ್ಕಾರ ರೈತರ ಮಾತಿಗೆ ಒಪ್ಪುತ್ತಿಲ್ಲ ಮಾತ್ರವಲ್ಲದೇ, ರೈತರು ಕೇಂದ್ರಕ್ಕೆ ಒಪ್ಪಿ ನಡೆಯುವುದಕ್ಕೆ ತಯಾರಿಲ್ಲ. ಒಟ್ಟಿನಲ್ಲಿ ಕಳೆದೊಂದು ಒಂದುವರೆ ವರ್ಷಗಳಿಂದ ಜಿದ್ದಾಜಿದ್ದಿನ ಚರ್ಚೆಗಳಂತೆ ಆಗುತ್ತಿದ್ದು, ಇನ್ನೂ ಬಗೆಹರಿಯದೇ ಉಳಿದಿರುವ ಸಮಸ್ಯೆಯಾಗಿದೆ.

ಕಳೆದ ವಾರ ರಾಷ್ಟ್ರೀಯ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಹಾಗೂ ಅವರ ಬೆಂಬಲಿಗರು ಹಾಗೂ ಇತರೆ ಪ್ರತಿಪಕ್ಷಗಳು ಸಂಸತ್ ಭವನದ ಆವರಣದೊಳಗಿರುವ ಗಾಂಧಿ ಪ್ರತಿಮೆಯ ಎದುರುಗಡೆ ಪ್ರತಿಭಟನೆ ಮಾಡಿದ್ದರು.

ಈಗ ಮತ್ತೆ ಮುಂಗಾರು ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಕೃಷಿ ಕಾಯ್ದೆಯ ವಿಚಾರ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಸೇರಿ ಇತರೆ ಪ್ರತಿಪಕ್ಷಗಳು ಕೂಡ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿವೆ.

ಕಳೆದ ವಾರ, ಜಂತರ್ ಮಂತರ್ ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ದ ನೇತೃತ್ವದಲ್ಲಿಸುಮಾರು ಇನ್ನೂರು ಮಂದಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದ್ದು, ಅಧಿವೇಶನ ಮುಗಿಯವೆರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಪತ್ನಿಯನ್ನು ಕೊಂದು ಶವ ಸುಟ್ಟು ಹಾಕಿದ್ದ ಪತಿ, ಪೊಲೀಸ್ ಇನ್ಸ್ ಪೆಕ್ಟರ್ ಬಂಧನ!

Advertisement

Udayavani is now on Telegram. Click here to join our channel and stay updated with the latest news.

Next