Advertisement

ಮೋದಿ ಭಾಷಣದಲ್ಲಿ ಅವರ ಹೆಸರು ಬಿಟ್ಟು ಇನ್ನಾವ ಬಿಜೆಪಿ ನಾಯಕರ ಹೆಸರೂ ಹೇಳಲ್ಲ: ರಾಹುಲ್

10:23 PM May 01, 2023 | Team Udayavani |

ಚಾಮರಾಜನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕದ ಚುನಾವಣಾ ಪ್ರಚಾರ ಭಾಷಣಗಳಲ್ಲಿ ನರೇಂದ್ರ ಮೋದಿಯವರ ಹೆಸರು ಬಿಟ್ಟರೆ ಇನ್ನಾವ ಸ್ಥಳೀಯ ನಾಯಕರ ಹೆಸರನ್ನೂ ಹೇಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

Advertisement

ನಗರದಲ್ಲಿ ಸೋಮವಾರ ಸಂಜೆ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿಯವರೇ ನೀವು ಸಭೆಗಳಲ್ಲಿ ನಿಮ್ಮ ಸ್ಥಳೀಯ ಬಿಜೆಪಿ ನಾಯಕರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ನಾನು ಭಾಷಣಗಳಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪರಮೇಶ್ವರ್ ಮುಂತಾದ ಹಿರಿಯರ ಹೆಸರು ಹೇಳುತ್ತೇನೆ. ಆದರೆ ನೀವು ನರೇಂದ್ರ ಮೋದಿ ಎಂಬ ಹೆಸರು ಬಿಟ್ಟು ಇನ್ನಾರ ಹೆಸರೂ ಹೇಳುವುದಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ, ಯಡಿಯೂರಪ್ಪ ಅವರ ಹೆಸರು ಹೇಳುವುದಿಲ್ಲ. ನೀವು ಯಾರಿಗೂ ಮರ್ಯಾದೆ ಕೊಡುವುದಿಲ್ಲ ಎಂದು ಟೀಕಿಸಿದರು.

ಈ ಚುನಾವಣೆಯಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರವೇ ಮುಖ್ಯ ವಿಷಯ. ಕಾಂಗ್ರೆಸ್ ಪಕ್ಷ ನನ್ನ ಮೇಲೆ 91 ಬಾರಿ ನಿಂದನೆ ಮಾಡಿದೆ ಎಂದು ಹೇಳಿದ್ದೀರಿ. ನಿಮ್ಮ ಬಗ್ಗೆಯೇ ಮಾತನಾಡುವುದನ್ನು ಕಡಿಮೆ ಮಾಡಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: BJP ಲೂಟಿ ಹೊಡೆದ ಹಣವನ್ನು ಕಾಂಗ್ರೆಸ್ ಸರ್ಕಾರ ಜನರಿಗೆ ವಾಪಸ್ ನೀಡಲಿದೆ: ರಾಹುಲ್

Advertisement

Udayavani is now on Telegram. Click here to join our channel and stay updated with the latest news.

Next