Advertisement
ಗಣೇಶ್ ಶೆಟ್ಟಿ ಕುಂದಾಪು ಕೊರ್ಗಿ: ಆಡಳಿತ ಪಕ್ಷಕ್ಕೆ ಸಹಕಾರ ಕೊಡಲು ಹಾಗೂ ಅಲ್ಲಿನ ಜನರಲ್ಲಿ ಆಶಾ ಭಾವನೆ ಮತ್ತು ಧೈರ್ಯ ತುಂಬುವ ಸಲುವಾಗಿ ಭೇಟಿ ಕೊಡಬೇಕೆ ಹೊರತು ಅಲ್ಲಿನ ಜನರಲ್ಲಿ ಗಲಭೆ ಎಬ್ಬಿಸಲು ನೀವು ಭೇಟಿ ನೀಡುವ ಅಗತ್ಯ ಇಲ್ಲ
Related Articles
Advertisement
ಕೃಷ್ಣ ಟಿಕೆ ದನುಷ: ಭೇಟಿಯ ಅವಶ್ಯಕತೆ ಏನಿದೆ,ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಇತರ ಪಕ್ಷಗಳು ಕಾಶ್ಮೀರದ ಬಗ್ಗೆ ನಡೆದುಕೊಂಡ ರೀತಿ ನಮ್ಮ ಕಣ್ಮುಂದೆ ಇರುವಾಗ ?
ನಿತೇಶ್ ಬಿ: ಪ್ರಜಾಪ್ರಭುತ್ವ ದೇಶದಲ್ಲಿ ಸರ್ವಾಧಿಕಾರಿ ಆಡಳಿತವನ್ನು ವಿರೋಧ ಮಾಡಲೇಬೇಕು, ಒಕ್ಕೂಟ ಸರ್ಕಾರ ಕೈ ಗೊಂಡು ಇರೋ ಕ್ರಮಗಳ ಬಗ್ಗೆ ವಿರೋಧ ಪಕ್ಷಗಳು ಭೇಟಿ ನೀಡಿ ಅಲ್ಲಿನ ಸ್ಥಿತಿಗಳನ್ನು ನೋಡಲು ಹೋಗೋದ್ರಲ್ಲಿ ತಪ್ಪು ಏನು ಇಲ್ಲ. ಒಕ್ಕೂಟ ಸರ್ಕಾರ ಸರಿಯಾಗಿ ಮಾಡಿದ್ರೆ ಯಾಕೆ ಭಯ ಪಡ ಬೇಕು, ವಿರೋಧ ಪಕ್ಷಗಳು ಭೇಟಿ ನೀಡೋದ್ರಲ್ಲಿ ವಿರೋಧ ಯಾಕೆ ಮಾಡ್ಬೇಕು
ಹೆಚ್ ಗೌಡ: ಸರಿಯಿಲ್ಲ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಒಂದು ಮಾತಿದೆ ‘ ಮಾರಾಟ ಮಾಡಿ , ಇಲ್ಲಾಂದ್ರೆ ಗ್ರಾಹನಿಗೆ ಗೊಂದಲ ಮೂಡಿಸಿ , ಅಂತ .ಅದನ್ನ ಚಾಚು ತಪ್ಪದೆ ಕೇಂದ್ರದ ಈ ವಿರೋಧ ಪಕ್ಷಗಳು ಮಾಡುತ್ತಿವೆ, ಬರಿ ಗೊಂದಲ ಆಗಿದ್ದರೆ ಸಹಿಸಬಹುದಿತ್ತು. ಆದರೆ ಇವರು ದೇಶದ್ರೋಹಿ ನಿಲುವುಗಳನ್ನ ಪ್ರತಿಪಾದಿಸುತ್ತಿರೋದೆ ಹೇಸಿಗೆ ಹುಟ್ಟಿಸುತ್ತಿರೋದು .
ದಿನೇಶ್ ಎಸ್: ಪ್ರತಿಪಕ್ಷಗಳ ಭೇಟಿ ಅಲ್ಲಿನ ನೈಜ ವಾತಾವರಣ ಅರಿತು ಕೊಳ್ಳುವುದಾಗಿರಬೇಕಿದೆ, ಆದರೆ ಪ್ರತಿಪಕ್ಷಗಳ ನಾಯಕರು ಕಾಶ್ಮೀರಕ್ಕೆ ಮಗ್ಗುಲ ಮುಳ್ಳಾಗಿದ್ದ ಸಂವಿಧಾನದ ಆರ್ಟಿಕಲ್ಗಳನ್ನು ತೆರವುಗೊಳಿಸಿದಾಗ ಅದರ ಸಾಧಕ ಬಾಧಕಗಳನ್ನರಿಯದೇ ವಿರೋಧಿಸಿದ ಅವರು ಕಾಶ್ಮೀರದ ಭೇಟಿಯನ್ನು ಯಾವ ಉದ್ದೇಶದಿಂದ ಕೈಗೊಳ್ಳುತ್ತಿದ್ದಾರೆ ಎನ್ನುವುದು ಜನರು ಗಮನಿಸುತ್ತಾರೆ.
ಬಾಬು ಮನು: ದೇಶಭಕ್ತ ಸೈನಿಕರ ಮೇಲೆ ದಾಳಿ ನಡೆದಾಗ ಕಲ್ಲುಗಳನ್ನು ಎಸೆದಾಗ ಸೈನಿಕರ ಮೇಲೆ ಹಲ್ಲೆ ನಡೆಸಿದಾಗ ಯಾಕೆ ಹೋಗಲಿಲ್ಲ?
ಚನ್ನಕೇಶವ ಮೂರ್ತಿ: ಈ ದೇಶದ ವಿರೋಧ ಪಕ್ಷಗಳು ತಮ್ಮ ಜವಾಬ್ದಾರಿ ಅರಿತು ಕಾಶ್ಮೀರದಲ್ಲಿ ಜನರ ಸಂಗಡ ಮಾತುಕತೆ ಮಾಡಿದರೆ ತಪ್ಪು ಅಲ್ಲ, ಕೇಂದ್ರ ಸರ್ಕಾರ ಮತ್ತು ಅಲ್ಲಿನ ಬಹುಜನರ ಮನಸಿನ ಭಾವನೆ ಕೂಡ ಎಲ್ಲರಿಗೂ ತಿಳಿಯಬೇಕು. ಇದು ಪ್ರಜಾಪ್ರಭುತ್ವ ರಾಷ್ಟ್ರ.
ಚೌಕಿದಾರ್ ಶರಣಬಸವ ಪಾಟೀಲ್: ದೇಶದ ಒಳಗೆ ಇದ್ದುಕೊಂಡು ಕಾಶ್ಮೀರದ ನ್ಯಾಯವನ್ನು ವಿರೋಧಿಸಿದ ಈ ಪ್ರತಿಪಕ್ಷಗಳು ಅಲ್ಲಿ ಹೋಗಿ ಪ್ರಚೋದಿಸಿ ಬರುತ್ತಾರೆ. ಪರಿಣಾಮವಾಗಿ ಇಲ್ಲಿ ಬಂದು ಬೊಬ್ಬೆ ಹಾಕುತ್ತಾರೆ. ಎಲ್ಲ ಸಹಜ ಸ್ಥಿತಿಗೆ ಮರಳಿರುವ ಸಂಧರ್ಭದಲ್ಲಿ ಇಂತಹ ಆಟೋಟ ಬೇಡವಾಗಿತ್ತು.
ಪವನ್ ರಾಜ್: ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಇವರಿಗೆ ನೆಮ್ಮದಿ ಇಲ್ಲ. ಕಲ್ಲು ಹೊಡೆಸಲು ಹೋಗ್ತಾ ಇದ್ದಾರೆ. ಮೊದಲು ಇವರ ಮೇಲೆ ದೇಶ ದ್ರೋಹಿಯ ಕೇಸ್ ದಾಖಲು ಮಾಡುವಂತೆ ಒತ್ತಾಯ ಮಾಡಬೇಕು.