ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪಿ.ಚಿದಂಬರಂ ಮತ್ತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ರಾಹುಲ್ ಗಾಂಧಿ ಸಾಮಾಜಿಕ ತಾಣದಲ್ಲಿ ಗ್ರಾಫ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ’ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಚಿದಂಬರಂ ಅವರು, ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. 2020-21 ಕಳೆದ ನಾಲ್ಕುದಶಕಗಳಲ್ಲೇ ಅತ್ಯಂತ ಕತ್ತಲ ವರ್ಷ ಎಂದು ಜರಿದಿದ್ದಾರೆ.
ಇನ್ನಾದರೂ ಸರ್ಕಾರ ಆರ್ಥಿಕತಜ್ಞರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಎಚ್ಚರಗೊಳ್ಳಬೇಕು, ಕಾರ್ಯಯೋಜನೆಯಲ್ಲಿ ಹಾಗೂ ಅದನ್ನು ಜಾರಿಗೊಳಿಸುವುದರಲ್ಲಿನ ತನ್ನ ತಪ್ಪನ್ನು ಒಪ್ಪಿಕೊಂಡು ನೀತಿಗಳನ್ನು ಬದಲಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿಕೋವಿಡ್ 19 : ದ್ವಿತೀಯ ಪಿಯುಸಿ ಪರೀಕ್ಷೆಗಳು ರದ್ದು : ಕೇಂದ್ರ ಸರ್ಕಾರ
ಪ್ರಸ್ತುತ ಪರಿಸ್ಥಿತಿ ಬಹುತೇಕ ಕೊರೊನಾ ಕಾರಣಕ್ಕೆ ನಿರ್ಮಾಣವಾಗಿರುವುದು ಹೌದು. ಆದರೆ ಇದಕ್ಕೆ ಆರ್ಥಿಕಪರಿಸ್ಥಿತಿಯನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡಿದ ಬಿಜೆಪಿ ಸರ್ಕಾರವೂ ಕಾರಣ ಎಂದಿದ್ದಾರೆ.