ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ)ದ ಮುಖ್ಯ ಕೋಚ್ ಹುದ್ದೆಯ ಮರುಆಯ್ಕೆ ಬಯಸಿದ್ದಾರೆ. ಈಗಾಗಲೇ ಈ ಹುದ್ದೆಯಲ್ಲಿರುವ ದ್ರಾವಿಡ್ ಮರು ಆಯ್ಕೆ ಬಯಸಿ ಬಿಸಿಸಿಐ ಗೆ ಅರ್ಜಿ ಹಾಕಿದ್ದಾರೆ.
ದ್ರಾವಿಡ್ ಅವರು ಎರಡು ವರ್ಷದ ಅವಧಿ ಮುಗಿದಿದೆ. ಹೀಗಾಗಿ ನೂತನ ಕೋಚ್ ಗಾಗಿ ಬಿಸಿಸಿಐ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿತ್ತು. ಬಿಸಿಸಿಐ ನ ಹೊಸ ಸಂವಿಧಾನದ ಪ್ರಕಾರ, ವಿಸ್ತರಣೆಗೆ ಯಾವುದೇ ಅವಕಾಶವಿಲ್ಲ. ನೇಮಕಾತಿ ಪ್ರಕ್ರಿಯೆಯನ್ನು ಹೊಸದಾಗಿ ಆರಂಭಿಸಬೇಕು.
ಇದನ್ನೂ ಓದಿ:ಗುಣವರ್ಧನೆ ಅಫ್ಘಾನ್ ಬ್ಯಾಟಿಂಗ್ ಕೋಚ್
ಆದರೆ ರಾಹುಲ್ ದ್ರಾವಿಡ್ ಮರು ಆಯ್ಕೆಗೆ ಅರ್ಜಿ ಸಲ್ಲಿಸಿದ್ದರೆ. ದ್ರಾವಿಡ್ ಹೊರತುಪಡಿಸಿ ಬೇರೆ ಯಾರೂ ಇಲ್ಲಿ ಅರ್ಜಿ ಹಾಕಿಲ್ಲ. ಅರ್ಜಿಗಳ ಸಲ್ಲಿಸಲು ಗಡುವು ಆಗಸ್ಟ್ 15 ರಂದು ನಿಗದಿಯಾಗಿತ್ತು. ಆದರೆ ಬೇರೆ ಯಾರೂ ಅರ್ಜಿ ಸಲ್ಲಿಸದ ಕಾರಣ ಭಾರತೀಯ ಬೋರ್ಡ್ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಗೆ ಗಡುವು ವಿಸ್ತರಿಸಿದೆ.
ರಾಹುಲ್ ದ್ರಾವಿಡ್ ಅವರು ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ ಗಳ ಸರಣಿಯಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು. ಭಾರತದ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರೀ ಅವರ ಅವಧಿಯೂ ಟಿ20 ವಿಶ್ವಕಪ್ ನಂತರ ಮುಗಿಯಲಿದ್ದು, ನಂತರ ಹೊಸ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.