Advertisement

“ತ್ರಿವಳಿಗಳಿಂದ ಶ್ರೇಷ್ಠ ನಿರ್ವಹಣೆ ನಿರೀಕ್ಷೆ’: ರಾಹುಲ್‌ ದ್ರಾವಿಡ್‌

08:20 AM Jun 08, 2022 | Team Udayavani |

ಹೊಸದಿಲ್ಲಿ: ತ್ರಿವಳಿ ಆಟಗಾರರಾದ ರೋಹಿತ್‌ ಶರ್ಮ, ಕೆಎಲ್‌ ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಅವರು ಐಪಿಎಲ್‌ನಲ್ಲಿ ನೀಡಿದ ನಿರ್ವಹಣೆಗೆ ತೀವ್ರತರದ ಟೀಕೆಗೆ ಒಳಗಾಗಿದ್ದರೂ ಮುಂಬರುವ ದಿನಗ ಳಲ್ಲಿ ಅವರಿಂದ ಶ್ರೇಷ್ಠ ನಿರ್ವಹಣೆಯನ್ನು ನಿರೀಕ್ಷಿಸುವೆ ಎಂದು ಭಾರತೀಯ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.

Advertisement

ಕಳೆದ ಟಿ20 ವಿಶ್ವಕಪ್‌ನ ಪವರ್‌ಪ್ಲೇ ಆಟದ ವೇಳೆ ರೋಹಿತ್‌, ರಾಹುಲ್‌ ಮತ್ತು ಕೊಹ್ಲಿ ಅವರ ಆಟವನ್ನು ಗಮನಿ ಸಲಾಗಿದೆ. ಮುಂಬರುವ ವಿಶ್ವಕಪ್‌ಗೆ ಮುಂಚಿತವಾಗಿ ಅವರೆಲ್ಲ ತಮ್ಮ ಗುಣ ಮಟ್ಟ ಮತ್ತು ಸಾಮರ್ಥ್ಯಕ್ಕೆ ಅನುಗುಣ ವಾಗಿ ಉತ್ತಮ ನಿರ್ವಹಣೆ ನೀಡುವ ವಿಶ್ವಾಸವಿದೆ ಎಂದವರು ಹೇಳಿದರು.

ನಮ್ಮ ಅಗ್ರ ಮೂವರು ಆಟಗರಾರ ಸಾಮರ್ಥ್ಯ, ಗುಣಮಟ್ಟ ನಮಗೆ ತಿಳಿದಿದೆ. ಅವರು ಶ್ರೇಷ್ಠ ಮಟ್ಟದ ಆಟಗಾರರು. ಪರಿಸ್ಥಿತಿಗೆ ತಕ್ಕಂತೆ ಅವರು ಆಡುವ ನಿರೀಕ್ಷೆ ನಮ್ಮದು ಎಂದವರು ಹೇಳಿದರು. ಭಾರತೀಯ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರ ಣಿಯ ಮೊದಲ ಪಂದ್ಯಕ್ಕಾಗಿ ಅಭ್ಯಾಸ ನಿರತವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಈ ಸರಣಿಗೆ ರೋಹಿತ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಟಿಕೆಟ್‌ ಖಾಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಮೊದಲ ಟಿ20 ಪಂದ್ಯದ ಶೇಕಡಾ 94ರಷ್ಟು ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. 35 ಸಾವಿರ ಆಸನ ಸಾಮರ್ಥ್ಯದ ಈ ಮೈದಾನದಲ್ಲಿ ಇನ್ನು 400ರಿಂದ 500 ಟಿಕೆಟ್‌ಗಳು ಬಾಕಿ ಉಳಿದಿವೆ ಎಂದು ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್‌ ಮಂಚಂದ ಹೇಳಿದ್ದಾರೆ.

2019ರ ನವೆಂಬರ್‌ ಬಳಿಕ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಪಂದ್ಯ ವೊಂದು ದಿಲ್ಲಿಯಲ್ಲಿ ನಡೆಯುತ್ತಿದೆ. ಸುಮಾರು 27 ಸಾವಿರ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಪ್ರೇಕ್ಷಕರನ್ನು ಆಕರ್ಷಿಸುವ ಸಲುವಾಗಿ ಹಿರಿಯ ನಾಗರಿಕರು ಕ್ರೀಡಾಂಗಣಕ್ಕೆ ಪ್ರವೇಶಿಸಲು ಗಾಲ್ಫ್ ಕಾರ್ಟ್‌ ಬಳಸಲು ಅವಕಾಶ ಕಲ್ಪಿಸಲಾಗಿದೆ.

Advertisement

ಯಶಸ್ವಿ ನಾಯಕರು
ಐಪಿಎಲ್‌ ಕೂಟದಲ್ಲಿ ಭಾರತೀಯ ಆಟಗಾರರು ನಾಯಕರಾಗಿಯೂ ಯಶಸ್ಸು ಸಾಧಿಸಿರುವುದು ಭಾರತೀಯ ತಂಡಕ್ಕೆ ಹೆಚ್ಚಿನ ಲಾಭ ತರಲಿದೆ. ನಾಯಕತ್ವದ ಗುಣವು ಕ್ರಿಕೆಟಿಗರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ದ್ರಾವಿಡ್‌ ಅಭಿಪ್ರಾಯಪಟ್ಟಿದ್ದಾರೆ.

ಹಾರ್ದಿಕ್‌ ಪಾಂಡ್ಯ ನೇತೃತ್ವದ ಗುಜರಾತ್‌ ಟೈಟಾನ್ಸ್‌ ಚೊಚ್ಚಲ ಪ್ರವೇಶದಲ್ಲಿಯೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಕೆಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌ ಮತ್ತು ಸಂಜು ಸ್ಯಾಮ್ಸನ್‌ ಕೂಡ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಹಲವು ಭಾರತೀಯ ನಾಯಕರು ಶ್ರೇಷ್ಠ ನಿರ್ವಹಣೆ ನೀಡುತ್ತಿರುವುದು ಒಳ್ಳೆಯ ವಿಷಯವಾಗಿದೆ. ಹಾರ್ದಿಕ್‌ ಅವರಲ್ಲಿ ಒಬ್ಬರಾಗಿದ್ದಾರೆ. ಲಕ್ನೋ ತಂಡದ ಪರ ಕೆಎಲ್‌ ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಐಪಿಎಲ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ ಯುವ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಂಡದಲ್ಲಿರುವುದು ಒಳ್ಳೆಯ ಸೂಚನೆ ಮತ್ತು ಅವರಿಂದ ಉತ್ತಮ ನಿರ್ವಹಣೆಯನ್ನು ನಿರೀಕ್ಷಿಸಲಾಗಿದೆ ಎಂದು ರಾಹುಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next