ಡಾಕ್ಟರೇಟ್ಗೆ ರಾಹುಲ್ ದ್ರಾವಿಡ್ ಅವರ ಹೆಸರನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ ಎಂದು ಘೋಷಿಸಿತ್ತು. ಇದೀಗ ದ್ರಾವಿಡ್ ಗೌರವ ಡಾಕ್ಟರೇಟ್ ಸ್ವೀಕರಿಸಲು ನಿರಾಕರಿಸಿದ್ದು, ವಿವಿಗೆ ಮುಖಭಂಗವಾಗಿದೆ.
Advertisement
ಗೌರವ ಡಾಕ್ಟರೇಟ್ಗೆ ತಮ್ಮನ್ನು ಆಯ್ಕೆ ಮಾಡಿರುವ ಬಗ್ಗೆ ಮಾಹಿತಿ ನೀಡಲು ದ್ರಾವಿಡ್ ಅವರು ದೂರವಾಣಿ ಮೂಲಕಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಬುಧವಾರ ಬೆಳಗ್ಗೆ ಇ-ಮೇಲ್ ಮೂಲಕ ಸಂದೇಶ ಕಳುಹಿಸಿದೆ. ಇದಕ್ಕೆ ದ್ರಾವಿಡ್ ಇ-ಮೇಲ್ ಮೂಲಕವೇ ಪ್ರತಿಕ್ರಿಯೆ ಕಳುಹಿಸಿದ್ದು, ಸ್ವತಃ ಕ್ರೀಡಾ ರಂಗದಲ್ಲಿ ಶೈಕ್ಷಣಿಕವಾಗಿ ಸಂಶೋಧನೆ ನಡೆಸುವ ಮೂಲಕವೇ ಡಾಕ್ಟರೇಟ್ ಪಡೆಯುವ ಇಚ್ಛೆ ತಮ್ಮದು ಎಂದು ಹೇಳುವ ಮೂಲಕ ಗೌರವ ಡಾಕ್ಟರೇಟ್ ನಿರಾಕರಿಸಿದ್ದಾರೆ.