Advertisement

ರಾಹುಲ್‌, ಗೇಲ್‌ ಕಮಾಲ್‌

01:56 AM Apr 11, 2019 | sudhir |

ಮುಂಬಯಿ: ಕನ್ನಡಿಗ ಕೆ.ಎಲ್‌. ರಾಹುಲ್‌ ಅವರ ಅಮೋಘ ಹಾಗೂ ಆಜೇಯ ಶತಕದ ನೆರವಿನೊಂದಿಗೆ ಹನ್ನೆರಡನೇ ಆವೃತ್ತಿಯ 24ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ದಾಳಿಯನ್ನು ಬೆಂಡೆತ್ತಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ನಾಲ್ಕು ವಿಕೆಟ್‌ಗಳ ನಷ್ಟದಲ್ಲಿ 197 ರನ್‌ಗಳ ಬೃಹತ್‌ ಮೊತ್ತವನ್ನು ಪೇರಿಸಿದೆ.

Advertisement

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಪಂಜಾಬ್‌ ಪರ ಕ್ರಿಸ್‌ ಗೇಲ್‌ ಹಾಗೂ ಕೆ.ಎಲ್‌. ರಾಹುಲ್‌ ಮುಂಬೈ ಬೌಲಿಂಗ್‌ ಮೇಲೆ ಘಾತುಕ ಪ್ರಹಾರ ನಡೆಸಿದರು. ಚೆಂಡನ್ನು ವಾಂಖೇಡೆ ಅಂಗಳದಲ್ಲಿ ಎಲ್ಲ ದಿಕ್ಕುಗಳಿಗೂ ಬಡಿದಟ್ಟತೊಡಗಿದರು. ಗೇಲ್‌ ಅವರಂತೂ ಭಾರಿ ಜೋಶ್‌ನಲ್ಲಿದ್ದರು. ಅವರಿಬ್ಬರು ಸ್ಫೋಟಕ ಆರಂಭವನ್ನು ಒದಗಿಸಿ ಶತಕದ ಜತೆಯಾಟವಾಡಿದರು.

ಮೊದಲ ಎರಡು ಓವರ್‌ಗಳಲ್ಲಿ ನಾಲ್ಕೇ ರನ್‌ಗಳು ಬಂದರೂ ಬಳಿಕ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಯೇ ಆಯಿತು. ಗೇಲ್‌ 63 ರನ್‌ (36 ಎಸೆತ, 3 ಬೌಂಡರಿ, 7 ಸಿಕ್ಸರ್‌) ಬಾರಿಸಿದರು. 10.2 ಓವರ್‌ಗಳಲ್ಲೇ ವಿಕೆಟ್‌ ನಷ್ಟವಿಲ್ಲದೆ ಪಂಜಾಬ್‌ 100 ರನ್‌ಗಳ ಗಡಿ ದಾಟಿತ್ತು. ಆದರೆ, ಗೇಲ್‌ ವಿಕೆಟ್‌ ಪತನದ ಬಳಿಕ ಪಂಜಾಬ್‌ ದಿಢೀರ್‌ ಕುಸಿತ ಕಂಡಿತು.

ಮಿಲ್ಲರ್‌ (7), ಕರುಣ್‌ ನಾಯರ್‌ (5) ಹಾಗೂ ಸ್ಯಾಮ್‌ ಕರನ್‌ (8) ವಿಕೆಟ್‌ಗಳು ಉರುಳಿದ್ದರಿಂದ ತಂಡ 200ರ ಗಡಿ ದಾಟುವ ಅವಕಾಶವನ್ನು ಕೈಚೆಲ್ಲಿತು. ಆದರೂ ಮತ್ತೂಂದು ತುದಿಯಲ್ಲಿ ಕ್ರೀಸ್‌ ಕಚ್ಚಿ ನಿಂತ ರಾಹುಲ್‌ ಪಂಜಾಬ್‌ಗ ಆಸರೆಯಾದರು.

ಹಾರ್ದಿಕ್‌ ಪಾಂಡ್ಯಾ ಎಸೆತ 19ನೇ ಓವರ್‌ನಲ್ಲಿ 25 ರನ್‌ ದೋಚಿದ ರಾಹುಲ್‌, ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. 64 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್‌ಗಳೊಂದಿಗೆ ಅವರು ವಿಜೃಂಭಿಸಿದರು.

Advertisement

ಟಾಸ್‌ ಗೆದ್ದ ಮುಂಬೈ ಫೀಲ್ಡಿಂಗ್‌ ಆಯ್ಕೆ ಮಾಡಿತು. ಗೇಲ್‌ ವಿಕೆಟ್‌ ಬೀಳುವ ವರೆಗೂ ಈ ನಿರ್ಧಾರ ತಪ್ಪಾಯಿತೆಂದೇ ಭಾವಿಸಲಾಗಿತ್ತು. ಆದರೆ, ಬಳಿಕ ಬೌಲರ್‌ಗಳು ಪಂದ್ಯವನ್ನು ನಿಯಂತ್ರಣಕ್ಕೆ ಪಡೆದರು. ಮುಂಬೈ ಪರ ಹಾರ್ದಿಕ್‌ ಪಾಂಡ್ಯಾ ಎರಡು ವಿಕೆಟ್‌ ಪಡೆದರೂ ನಾಲ್ಕು ಓವರ್‌ಗಳಲ್ಲಿ 57 ರನ್‌ ಬಿಟ್ಟುಕೊಟ್ಟರು. ಬುಮ್ರಾ ಹಾಗೂ ಬೆಹೆÅಂಡಾಫ್ì ತಲಾ ಒಂದು ವಿಕೆಟ್‌ ಉರುಳಿಸಿದರು. ಮೊದಲ ಪಂದ್ಯದಲ್ಲಿ ಬೌಲಿಂಗ್‌ ದಾಖಲೆ ನಿರ್ಮಿಸಿದ ಅಲ್ಜಾರಿ ಜೋಸೆಪ್‌ ಇಲ್ಲಿ 2 ಓವರ್‌ಗಳಲ್ಲಿ 22 ರನ್‌ ನೀಡಿ ದುಬಾರಿಯಾದರು.

ರೋಹಿತ್‌ ಗಾಯಾಳು
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಕೀರನ್‌ ಪೊಲಾರ್ಡ್‌ ನೇತೃತ್ವದಲ್ಲಿ ಕಣಕ್ಕಿಳಿಯಿತು. ರೋಹಿತ್‌ಶರ್ಮ ಅಭ್ಯಾಸದ ವೇಳೆ ಬಲಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಅವರು ಚೇತರಿಸಿಕೊಂಡಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿ ನೀಡಲಾಯಿತು. ಐಪಿಎಲ್‌ನ 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೋಹಿತ್‌ ಪಂದ್ಯವೊಂದನ್ನು ತಪ್ಪಿಸಿಕೊಂಡರು.

ಸ್ಕೋರ್‌ಪಟ್ಟಿ
ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಕೆ. ಎಲ್‌ ರಾಹುಲ್‌ ಔಟಾಗದೆ 100
ಕ್ರಿಸ್‌ ಗೇಲ್‌ ಸಿ ಕೃಣಾಲ್‌ ಬಿ ಬೆಹೆÅಂಡಾಫ್ì 63
ಡೇವಿಡ್‌ ಮಿಲ್ಲರ್‌ ಸಿ ಡಿ ಕಾಕ್‌ ಬಿ ಹಾರ್ದಿಕ್‌ 7
ಕರುಣ್‌ ನಾಯರ್‌ ಸಿ ಚಹರ್‌ ಬಿ ಹಾರ್ದಿಕ್‌ 5
ಸ್ಯಾಮ್‌ ಕರನ್‌ ಸಿ ಡಿ ಕಾಕ್‌ ಬಿ ಬುಮ್ರಾ 8
ಮನ್‌ದೀಪ್‌ ಸಿಂಗ್‌ ಔಟಾಗದೆ 7
ಇತರ 7
ಒಟ್ಟು (4ವಿಕೆಟ್‌ಗೆ) 197
ವಿಕೆಟ್‌ ಪತನ: 1-116, 2-131, 3-141, 4-151
ಬೌಲಿಂಗ್‌
ಜಾಸನ್‌ ಬೆಹೆÅಂಡಾಫ್ì 4-0-35-1
ಜಸ್‌ಪ್ರಿತ್‌ ಬುಮ್ರಾ 4-0-38-1
ಅಲ್ಜಾರಿ ಜೋಸೆಪ್‌ 2-0-22-0
ರಾಹುಲ್‌ ಚಹರ್‌ 4-0-27-0
ಹಾರ್ದಿಕ್‌ ಪಾಂಡ್ಯ 4-0-57-2
ಕೃಣಾಲ್‌ ಪಾಂಡ್ಯ 2-0-17-0

Advertisement

Udayavani is now on Telegram. Click here to join our channel and stay updated with the latest news.

Next