ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರೂ ರಾಹುಲ್ ನಿವಾಸಕ್ಕೆ ಧಾವಿಸಿ, ಸಹೋದರನ ಜತೆ ಮಾತುಕತೆ ನಡೆಸಿದ್ದಾರೆ. ಅವರ ಜೊತೆಗೆ ರಾಜಸ್ಥಾನ ಸಿಎಂ ಅಶೋಕ್ ಗೆಹೊÉàಟ್, ಡಿಸಿಎಂ ಸಚಿನ್ ಪೈಲಟ್, ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲಾ ಕೂಡ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿ, ಸದ್ಯಕ್ಕೆ ತಲೆದೋರಿರುವ ನಾಯಕತ್ವ ವಿವಾದದ ಕುರಿಚು ಚರ್ಚಿಸಿದ್ದಾರೆ. ರಾಹುಲ್ ಅವರು ರಾಜೀನಾಮೆ ಕುರಿತು ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ. ಆದರೆ, ಲೋಕಸಭೆಯಲ್ಲಿ ಪಕ್ಷದ ನೇತೃತ್ವ ವಹಿಸಲು ಒಪ್ಪಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆ “ಆತ್ಮಾಹುತಿ’ಯಂಥ ನಿರ್ಧಾರ: “ರಾಹುಲ್ ರಾಜೀ ನಾಮೆಗೆ ನಿರ್ಧರಿಸಿರುವುದು ಆತ್ಮಾಹುತಿ ಮಾಡಿ ಕೊಂಡಂತೆ’ ಎಂದು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ. “ರಾಹುಲ್ ಏನಾದರೂ ಗಾಂಧಿ ಕುಟುಂ ಬದ ಹೊರತಾದ ನಾಯಕನನ್ನು ಅಧ್ಯಕ್ಷ ಸ್ಥಾನ ಕ್ಕೇರಿಸಿದರೆ, ಆ ನಾಯಕನನ್ನು “ಗಾಂಧಿ ಕುಟುಂಬದ ಕೈಗೊಂಬೆ’ ಎಂದು ಮೋದಿ-ಅಮಿತ್ ಶಾ ಬ್ರಿಗೇಡ್ ಆಡಿಕೊಳ್ಳಲು ಶುರು ಮಾಡುತ್ತದೆ. ರಾಜಕೀಯ ವೈರಿಗಳಿಗೆ ಅಂಥದ್ದೊಂದು ಅವಕಾಶವನ್ನು ಏಕೆ ನೀಡುತ್ತೀರಿ? ಬಿಜೆಪಿ ಹೂಡಿರುವ ಖೆಡ್ಡಾದೊಳಕ್ಕೆ ಏಕೆ ಬೀಳುತ್ತೀರಿ ಎಂದೂ ಪ್ರಶ್ನಿಸಿದ್ದಾರೆ.
Advertisement
ರಾಜಸ್ಥಾನದಲ್ಲಿ ಮತ್ತಿಬ್ಬರು ನಾಯಕರ ಅಸಮಾಧಾನ ಸ್ಫೋಟರಾಜಸ್ಥಾನ ಸರಕಾರದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಮಂಗಳವಾರ ಮತ್ತಿಬ್ಬರು ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸುಶೀಲ್ ಅಸೋಪಾ ಮತ್ತು ಜೈಪುರ ಮಾಜಿ ಮೇಯರ್ ಜ್ಯೋತಿ ಖಂಡೇಲ್‌ವಾಲ್ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ. ಸಚಿನ್ ಪೈಲಟ್‌ಗೆà ಮುಖ್ಯ ಮಂತ್ರಿ ಹುದ್ದೆ ನೀಡಬೇಕಿತ್ತು ಎಂದಿರುವ ಸುಶೀಲ್ ಅಸೋಪಾ, “5 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಸಚಿನ್ ಪೈಲಟ್‌ರನ್ನು ಸಿಎಂ ಹುದ್ದೆಗೇರಿಸಿದ್ದಲ್ಲಿ ಎಲ್ಲವೂ ಸರಿಯಾಗಿರುತ್ತಿತ್ತು’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಮಂಗಳವಾರ ಸಿಎಂ ಅಶೋಕ್ ಗೆಹೊÉàಟ್ ಹಾಗೂ ಡಿಸಿಎಂ ಪೈಲಟ್ ಜತೆ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ಇನ್ನೊಂದೆಡೆ, “20-25 ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದಾರೆ’ ಎಂದು ಬಿಜೆಪಿ ಹೇಳಿ ದೆ.