Advertisement

IPL ಉದ್ಘಾಟನೆಗೆ ರೆಹಮಾನ್‌ ಮತ್ತು ಬಾಲಿವುಡ್‌ ತಾರೆಯರು

11:41 PM Mar 20, 2024 | Team Udayavani |

ಚೆನ್ನೈ: ಹದಿನೇಳನೇ ಐಪಿಎಲ್‌ ಪಂದ್ಯಾವಳಿಗೆ ಶುಕ್ರವಾರ ಸಂಜೆ ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ವರ್ಣರಂಜಿತ ಆರಂಭ ಲಭಿಸಲಿದೆ. ಎಂದಿನಂತೆ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆದರೆ ಇದರಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎಂಬುದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

Advertisement

ಮೂಲವೊಂದರ ಪ್ರಕಾರ ಚೆನ್ನೈನವರೇ ಆದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌, ಬಾಲಿವುಡ್‌ ತಾರೆಯರಾದ ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್, ಖ್ಯಾತ ಗಾಯಕ ಸೋನು ನಿಗಮ್‌ ಸೇರಿಕೊಂಡು ಕಾರ್ಯಕ್ರಮ ನಡೆಸಿಕೊಡಲಿದ್ದಾರೆಂದು ತಿಳಿದು ಬಂದಿದೆ.

ಉದ್ಘಾಟನ ಸಮಾರಂಭ ಸಂಜೆ 6.30ಕ್ಕೆ ಮೊದಲ್ಗೊಂಡು ಒಂದು ಗಂಟೆ ಕಾಲ ಸಾಗಲಿದೆ. ಸ್ಟಾರ್‌ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಇದು ನೇರ ಪ್ರಸಾರ ಕಾಣಲಿದೆ. ಉದ್ಘಾಟನ ಕಾರ್ಯಕ್ರಮದಿಂದಾಗಿ ಆರ್‌ಸಿಬಿ-ಚೆನ್ನೈನಡುವಿನ ಪಂದ್ಯ ಅರ್ಧ ಗಂಟೆ ವಿಳಂಬವಾಗಿ, ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಉಳಿದ ರಾತ್ರಿ ಪಂದ್ಯಗಳ ಆರಂಭದ ಸಮಯ 7.30. ಹಗಲು ಪಂದ್ಯಗಳು ಅಪರಾಹ್ನ 3.30ಕ್ಕೆ ಮೊದಲ್ಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next