Advertisement
* ಏನ್ ಇಷ್ಟೊಂದ್ ಸಣ್ಣ ಆಗಿದ್ದೀರಿ?ಅಯ್ಯೋ, ಈಗ ನಾನು ಒಂದೂವರೆ ಕೆಜಿ ತೂಕ ಜಾಸ್ತಿಯಾಗಿದ್ದೇನೆ. ಅದು “ಕಿಚ್ಚು’ ಚಿತ್ರಕ್ಕಾಗಿ ಮಾಡಿಕೊಂಡ ಬದಲಾವಣೆ. ಅದನ್ನು ಹಾಗೆಯೇ ಮುಂದುವರೆಸಿಕೊಂಡೆಯಷ್ಟೇ. ನನಗೂ 27. ವಯಸ್ಸು ಆಗ್ತಾ ಇದೆ. ಚಿತ್ರರಂಗಕ್ಕೆ ಬಂದು ಏಳೆಂಟು ವರ್ಷಗಳಾಗಿವೆ. ವಯಸ್ಸು ಹೇಳಿಕೊಳ್ಳೋಕೆ ನನಗೇನೂ ಮುಜುಗರವಿಲ್ಲ. ವಯಸ್ಸು ಹೇಳಿಕೊಂಡಾಕ್ಷಣ, ಯಾವ ಬದಲಾವಣೆಯೂ ಆಗೋದಿಲ್ಲ. ಇಲ್ಲಿ ಇಷ್ಟು ದಿನ ಎಲ್ಲವೂ ಸಿಕ್ಕಿದೆ. ಸೋಲು, ಗೆಲುವು ಎರಡನ್ನೂ ನೋಡಿದ್ದಾಗಿದೆ.
ಎಲ್ಲಾ ಪಕ್ಷಗಳಿಂದಲೂ ಆಹ್ವಾನ ಬಂದಿದ್ದುಂಟು. ಆದರೆ, ನಾನು ಹೋಗುವುದಿಲ್ಲ. ಸಿನಿಮಾ ಕೆಲಸ ಜಾಸ್ತಿ ಇದೆ. ಇಲ್ಲೇ ಬಿಜಿ ಇರುವಾಗ, ಪ್ರಚಾರಕ್ಕೆಲ್ಲಿ ಹೋಗಲಿ? * ಈ ವರ್ಷ ನಿಮ್ಮ ಸಿನಿಮಾಗಳ ಬಿಡುಗಡೆ ಪರ್ವ ಅನ್ನಿ?
ಹೌದು, ಕಳೆದ ಒಂದುವರೆ ವರ್ಷದಿಂದ ಯಾವ ಚಿತ್ರಗಳೂ ಬಂದಿಲ್ಲ. ಈ ವರ್ಷ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. “ಕಿಚ್ಚು’ ಈ ವಾರ ಬರುತ್ತಿದೆ. “ಎಂಎಂಸಿಎಚ್’ ರೆಡಿಯಾಗಿದೆ. “ನಾನೇ ನೆಕ್ಸ್ಟ್ ಸಿಎಂ’ ಕೂಡ ರಿಲೀಸ್ ಹಾದಿಯಲ್ಲಿದೆ. ಪಿ.ಸಿ. ಶೇಖರ್ ನಿರ್ದೇಶನದ “ದಿ ಟೆರರಿಸ್ಟ್’ ಚಿತ್ರೀಕರಣ ಮುಗಿದಿದೆ. ಶರಣ್ ಜೊತೆಗೊಂದು ಹೊಸ ಚಿತ್ರ ಮಾಡುತ್ತಿದ್ದೇನೆ. ಅದು ಮಲಯಾಳಂನ “ಟು ಕಂಟ್ರೀಸ್’ ಚಿತ್ರದ ರಿಮೇಕ್. ಇನ್ನು, ಪ್ರೇಮ್ ಜೊತೆಗೆ “ಗಾಂಧಿಗಿರಿ’ ಚಿತ್ರವೂ ಇದೆ. “ವಿಲನ್’ನಲ್ಲಿ ಅವರು ಬಿಝಿ ಇದ್ದಾರೆ. ಮುಂದೆ ನೋಡಬೇಕು.
Related Articles
ನಾನು ಬೇಕೂ ಅಂತೇನೂ ನಾಯಕಿ ಪ್ರಧಾನ ಚಿತ್ರ ಮಾಡುತ್ತಿಲ್ಲ. ಹಾಗೆಯೇ, ಹೀರೋ ಜೊತೆ ಮಾಡುವುದಿಲ್ಲ ಅಂತಾನೂ ಇಲ್ಲ. ನನಗೆ ಬಂದ ಒಳ್ಳೆಯ ಕಥೆಗಳನ್ನು ಒಪ್ಪಿಕೊಂಡು ಮಾಡಿದ್ದೇನೆrà. ಬಂದವೆಲ್ಲವೂ ನಾಯಕಿ ಪ್ರಧಾನ ಚಿತ್ರಗಳಾಗಿದ್ದವು. ಆದರೂ ಈಗ ಬ್ಯಾಲೆನ್ಸ್ ಮಾಡುತ್ತಿದ್ದೇನೆ. ಕಮರ್ಷಿಯ್ ಮಧ್ಯೆ ಸೋಲೋ ಸಿನಿಮಾಗಳನ್ನೂ ಮಾಡುತ್ತಿದ್ದೇನೆ. ಸುಮ್ಮನೆ ಯಾವುದೋ ಸಿನಿಮಾ ಮಾಡಬೇಕು, ದೊಡ್ಡ ಹೀರೋ, ದೊಡ್ಡ ನಿರ್ದೇಶಕರ ಚಿತ್ರದಲ್ಲಿ ನಾನಿರಬೇಕು ಅಂತ ಬಯಸುವುದಿಲ್ಲ.
Advertisement
* ಕಿರುತೆರೆಯ ಜರ್ನಿ ಹೇಗಿದೆ?ಈಗಷ್ಟೇ ಒಂದು ವಾಹಿನಿಯಲ್ಲಿ “ಕಾಮಿಡಿ’ ಶೋ ಮುಗಿಸಿದ್ದೇನೆ. ಹೆಚ್ಚು ಎಪಿಸೋಡ್ ಇದ್ದರೆ ಮಾಡುವುದು ಕಷ್ಟ. ಅದರಲ್ಲೂ ಕಾನ್ಸೆಪ್ಟ್ ಇಷ್ಟವಾದರೆ ಮಾತ್ರ ನಾನು ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತೇನೆ. ಸದ್ಯಕ್ಕೆ ಎರಡೂ¾ರು ಚಾನೆಲ್ ಜೊತೆ ಮಾತುಕತೆ ನಡೆಯುತ್ತಿದೆ. ಒಳ್ಳೆಯ ಕಾರ್ಯಕ್ರಮವಿದ್ದರೆ ಮಾಡ್ತೀನಿ. * ಬೇರೆ ಭಾಷೆಯಿಂದ ಅವಕಾಶ?
ಸದ್ಯ ಬೇರೆ ಭಾಷೆಯ ಚಿತ್ರಗಳಿಲ್ಲ. ಪಂಜಾಬಿ ಭಾಷೆಯಿಂದ ಅವಕಾಶವೊಂದು ಬಂದಿದೆ. ಮಲಯಾಳಂ ಚಿತ್ರವೊಂದನ್ನು ಅಂತಿಮಗೊಳಿಸಬೇಕಿದೆ. ಬಿಟ್ಟರೆ, ಬೇರೆ ಭಾಷೆ ಚಿತ್ರವಿಲ್ಲ. ನನಗೆ ಭಾಷೆ ಮುಖ್ಯವಲ್ಲ. ಒಳ್ಳೆಯ ಚಿತ್ರ ಮಾಡಬೇಕೆಂಬ ಉದ್ದೇಶವಿದೆ. ಈಗ ಬಿಡುಗಡೆಗೆ ಕಾದ ಒಳ್ಳೆಯ ಚಿತ್ರಗಳಿವೆ. ಅವಸರ ಮಾಡದಂತೆ ಕಾದು ಒಳ್ಳೆಯ ಕಥೆ ಆಯ್ಕೆ ಮಾಡಿಕೊಳ್ಳುತ್ತೇನೆ. ಒಂದೇ ಕೈಲಿ ಚಪ್ಪಾಳೆ ಸಾಧ್ಯವಿಲ್ಲ: ಕಾಸ್ಟಿಂಗ್ ಕೌಚ್ ಕುರಿತು ಎಲ್ಲೆಡೆ ಸುದ್ದಿಯಾಗುತ್ತಲೇ ಇದೆ. ಈ ಬಗ್ಗೆ ನಟಿ ರಾಗಿಣಿ ಕೂಡ ಪ್ರತಿಕ್ರಿಯಿಸಿದ್ದಾರೆ. “ನನಗೆ ಅಂತಹ ಅನುಭವ ಆಗಿಲ್ಲ. ಅದು ವೈಯಕ್ತಿಕ ಅಭಿಪ್ರಾಯಗಳಷ್ಟೇ. ಒಂದಂತೂ ನಿಜ, ಒಂದು ಕೈಯಿಂದ ಚಪ್ಪಾಳೆ ಆಗಲ್ಲ. ಹಾಗಂತ ನಾನು ಯಾರನ್ನೂ ಬ್ಲೇಮ್ ಮಾಡುವುದಿಲ್ಲ. ಯಾರಿಗೆ ಆ ಕೆಟ್ಟ ಅನುಭವ ಆಗಿದೆಯೋ ಅದು ಬೇಸರದ ವಿಷಯ. ಈಗಂತೂ ಎಲ್ಲರೂ ಓಪನ್ ಆಗಿ ಮಾತಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಇದರಿಂದ ಜನರಿಗೂ ಒಂದಷ್ಟು ವಿಷಯ ಗೊತ್ತಾಗುತ್ತೆ. ಜಾಗೃತಿ ಮೂಡಿಸಿದಂತೂ ಆಗುತ್ತೆ. ಕೆಲವರು ಬುದ್ಧಿವಂತಿಕೆಯಿಂದ ಮಾತಾಡುತ್ತಾರೆ, ಇನ್ನೂ ಕೆಲವರು ಪಬ್ಲಿಸಿಟಿಗೂ ಹೇಳಿಕೊಳ್ಳಬಹುದು. ಯಾರೇ ಇರಲಿ, ನಿಮ್ಮೊಂದಿಗೆ ತಪ್ಪಾಗಿ ಮಾತಾಡಿದರೆ, ವರ್ತಿಸಿದರೆ, ಅಲ್ಲೇ ಜಾಡಿಸಿ ಉತ್ತರ ಕೊಡಿ. ನೀವು ಹೇಗೆ ರಿಯಾಕ್ಟ್ ಮಾಡ್ತೀರೋ, ಅದರ ಮೇಲೆ ಅವಲಂಬಿಸಿರುತ್ತದೆ. ಅವರು ನಿಮ್ಮೊಂದಿಗೆ ಚೆನ್ನಾಗಿ ಮಾತಾಡಲ್ಲ ಅಂದರೆ, ಅವರೊಂದಿಗೆ ಮಾತಾಡಬೇಡಿ, ಅವಾಯ್ಡ ಮಾಡಿ ಅಷ್ಟೇ. ನನ್ನ ಲೈಫಲ್ಲಿ ನಾನೊಂದು ದಾರಿ ಮಾಡಿಕೊಂಡಿದ್ದೇನೆ. ಅದೇ ದಾರಿಯಲ್ಲೇ ನಡೆಯುತ್ತೇನೆ. ನನ್ನಿಷ್ಟದಂತೆಯೇ ಬದುಕುತ್ತೇನೆ. ಆದರೆ, ಕಾಸ್ಟಿಂಗ್ ಕೌಚ್ ವಿಷಯವನ್ನು ವಿನಾಕಾರಣ ಎಳೆದಾಡುವುದು ಬೇಡ. ಏನಾದರೂ ಅಂತಹ ಸ್ಥಿತಿ ಬಂತಾ? ದೂರು ಕೊಡಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ. ಹಿಂದೆ ಬಿಕಿನಿ ಹಾಕಿದರೂ ಸುದ್ದಿಯಾಗುತ್ತಿತ್ತು. ಐಟಂ ಸಾಂಗ್ ಮಾಡಿದರೂ ಮಾತಾಡುತ್ತಿದ್ದರು. ಈಗ ಕಾಸ್ಟಿಂಗ್ ಕೌಚ್ ವಿಷಯ ಜೋರಾಗಿ ಕೇಳಿಬರುತ್ತಿದೆ. ಇದು ಒಳ್ಳೆಯದೇ. ಇದರಿಂದ ಒಂದಷ್ಟು ಜಾಗೃತಿಯಾಗುತ್ತೆ. ಜನರಿಗೂ ತಿಳಿವಳಿಕೆ ಬರುತ್ತದೆ’ ಎನ್ನುತ್ತಾರೆ ರಾಗಿಣಿ.