Advertisement

ಕನ್ನಡ ಸಿನಿಮಾ ಮೇಲೆ ಬೇಸರಗೊಂಡ ರಾಗಿಣಿ !

10:14 AM Feb 07, 2020 | Lakshmi GovindaRaj |

ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ಸಿನಿಮಾಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಆದರೆ, ಸಿನಿಮಾಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ, ಅವುಗಳ ಗುಟ್ಟಮಟ್ಟ ಕೂಡ ಕಡಿಮೆಯಾಗುತ್ತಿದೆ ಅನ್ನೋದು ಚಿತ್ರ ಪ್ರೇಮಿಗಳ ಮತ್ತು ಚಿತ್ರರಂಗದ ಅನೇಕರ ಮಾತು. ಈಗ ನಟಿ ರಾಗಿಣಿ ದ್ವಿವೇದಿಗೂ ಕೂಡ ಈ ಮಾತು ಸರಿ ಎನಿಸಿದೆ. ಹೌದು, ಇತ್ತೀಚೆಗೆ ಬರುತ್ತಿರುವ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿರುವ ರಾಗಿಣಿ ದ್ವಿವೇದಿ, ಸಿನಿಮಾಗಳ ಗುಣಮಟ್ಟ, ಅವುಗಳಿಗೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆಗಳ ಕುರಿತು ಮಾತನಾಡಿದ್ದಾರೆ.

Advertisement

“ಕನ್ನಡದಲ್ಲಿ ಇತ್ತೀಚೆಗೆ ಸಿನಿಮಾಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದು ಇಂಡಸ್ಟ್ರಿಯ ಮಟ್ಟಿಗೆ ಒಳ್ಳೆಯ ಬೆಳವಣಿಗೆ. ಹೆಚ್ಚು ಸಿನಿಮಾಗಳು ನಿರ್ಮಾಣವಾದಷ್ಟೂ, ಹೆಚ್ಚಿನ ಸಂಖ್ಯೆಯ ಕಲಾವಿದರು, ತಂತ್ರಜ್ಞರು, ನಿರ್ದೇಶಕರಿಗೆ ಅವಕಾಶ ಸಿಗುತ್ತದೆ. ಆದ್ರೆ ಹೀಗೆ ನಿರ್ಮಾಣವಾದ ಸಿನಿಮಾಗಳಲ್ಲಿ ಬಹುತೇಕ ಸಿನಿಮಾಗಳು ಒಳ್ಳೆಯ ಗುಣಮಟ್ಟದಲ್ಲಿ ಇರುವುದಿಲ್ಲ. ಹೀಗಾದರೆ, ಅಂಥ ಸಿನಿಮಾಗಳನ್ನು ಯಾವ ಆಡಿಯನ್ಸ್‌ ತಾನೇ ನೋಡುತ್ತಾರೆ?’ ಅನ್ನೋದು ರಾಗಿಣಿ ಪ್ರಶ್ನೆ.

“ಬೇರೆ ಭಾಷೆಗಳಲ್ಲಿ ನಮಗಿಂತ ಕಡಿಮೆ ಸಂಖ್ಯೆಯಲ್ಲಿ ಸಿನಿಮಾಗಳು ಬಂದ್ರೂ, ಅವುಗಳ ಗುಣಮಟ್ಟ ಚೆನ್ನಾಗಿರುತ್ತದೆ. ಬಾಕ್ಸಾಫೀಸ್‌, ಕಲೆಕ್ಷನ್ಸ್‌ ವಿಚಾರದಲ್ಲೂ ಅವು ಒಂದಷ್ಟು ಸೌಂಡ್‌ ಮಾಡುತ್ತವೆ. ಅದನ್ನು ಮಾಡಿದ ನಿರ್ಮಾಪಕರು, ನಿರ್ದೇಶಕರು, ಕಲಾ ವಿದರು, ಟೆಕ್ನೀಶಿಯನ್ಸ್‌ ಎಲ್ಲರಿಗೂ ಸಿನಿಮಾ ಒಂದಷ್ಟು ಹೆಸರು ತಂದು ಕೊಡುತ್ತವೆ. ಆದರೆ, ನಮ್ಮಲ್ಲಿ ಆ ರೀತಿ ಆಗುತ್ತಿಲ್ಲ ಅನ್ನೋದು ನನ್ನ ಅನಿಸಿಕೆ’ ಎಂಬುದು ರಾಗಿಣಿ ಮಾತು.

“ಕನ್ನಡದಲ್ಲಿ ಸಿನಿಮಾ ಗಳ ಸಂಖ್ಯೆ ಹೆಚ್ಚಾದಂತೆ ಅವುಗಳ ಕಥೆ, ನಿರೂಪಣೆ, ಮೇಕಿಂಗ್‌ ಕಡೆಗೂ ಹೆಚ್ಚು ಗಮನ ಹರಿಸಿದರೆ, ಗುಣ ಮಟ್ಟದ ಸಿನಿಮಾಗಳನ್ನು ನಮ್ಮಲ್ಲೂ ಮಾಡೋದಕ್ಕೆ ಸಾಧ್ಯ. ನಿಜ ಹೇಳಬೇಕು ಅಂದರೆ, ನಮ್ಮಲ್ಲಿ ಒಳ್ಳೆಯ ಕಲಾವಿದರು, ನಿರ್ಮಾ ಪಕರು, ತಂತ್ರಜ್ಞರು ಎಲ್ಲರೂ ಇದ್ದಾರೆ. ನಾವೂ ಕೂಡ ಯಾರ್ಗೂ ಕಮ್ಮಿಯಿಲ್ಲ. ಆದರೆ ಅಂದು ಕೊಂಡಂತೆ ಕ್ವಾಲಿಟಿ ಸಿನಿಮಾಗಳು ಬರುತ್ತಿಲ್ಲ’ ಎಂಬ ಬೇಸರ ಅವರದು.

ಅಂದಹಾಗೆ, ತಾವು ಆಡಿರುವ ಮಾತಿ ನಂತೆ ರಾಗಿಣಿ ಕೂಡ ಇನ್ನು ಮುಂದೆ ತಾವು ಒಪ್ಪಿಕೊಳ್ಳುವ ಸಿನಿಮಾಗಳ ಕ್ವಾಲಿಟಿಯ ಕಡೆಗೆ ಹೆಚ್ಚಿನ ಗಮನ ನೀಡಲಿ ದ್ದಾರಂತೆ. ಎಷ್ಟು ಸಿನಿಮಾ ಗಳನ್ನು ಮಾಡಿದ್ದೀನಿ ಅನ್ನೋ ದಕ್ಕಿಂತ ಎಂಥ ಸಿನಿಮಾ ಮಾಡಿದ್ದೀನಿ ಅನ್ನೋದು ನನಗೆ ಮುಖ್ಯ. ಹಾಗಾಗಿ ಮುಂದೆ ನಾನು ಮಾಡ ಲಿರುವ ಸಿನಿಮಾಗಳು ಬೇರೆ ಥರದಲ್ಲೇ ಇರು ತ್ತವೆ. ಆದಷ್ಟು ಬೇಗ ಅಂಥ ದ್ದೊಂದು ಸಿನಿಮಾ ಬಗ್ಗೆ ಗುಡ್‌ ನ್ಯೂಸ್‌ ಕೊಡ್ತೀನಿ’ ಎನ್ನುತ್ತಾರೆ ರಾಗಿಣಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next