Advertisement

ಸೋಶಿಯಲ್‌ ಸರ್ವೀಸ್‌ ಖುಷಿ ಕೊಡುತ್ತಿದೆ: ರಾಗಿಣಿ

10:42 AM May 25, 2021 | Team Udayavani |

“ಇಷ್ಟು ವರ್ಷ ಫ್ರೆಂಡ್ಸ್‌ ಆ್ಯಂಡ್‌ ಫ್ಯಾಮಿಲಿ ಜೊತೆಗೆ ಬರ್ತ್‌ಡೇ ಸೆಲೆಬ್ರೇಶನ್‌ ಮಾಡ್ತಿದೆ. ಆದ್ರೆ,ಕಳೆದ ವರ್ಷದಿಂದ ಯಾವುದೇ ಸೆಲೆಬ್ರೇಶನ್‌ ಮಾಡ್ತಿಲ್ಲ. ಕಳೆದ ವರ್ಷ ನನ್ನ ಬರ್ತ್‌ಡೇ ಸಮಯದಲ್ಲಿಕೊರೊನಾ ಫ‌ಸ್ಟ್‌ ವೇವ್‌ ಇತ್ತು. ಈ ವರ್ಷ ಅದೇ ಟೈಮಲ್ಲಿ ಕೊರೊನಾ ಸೆಕೆಂಡ್‌ ವೇವ್‌ ಇದೆ. ನಮ್ಮ ಜೊತೆಯ ಲ್ಲಿರುವವರು, ನಮಗೆ ಗೊತ್ತಿರುವವರೆ ಸಾಯುತ್ತಿರುವಾಗ ನಾನು ಹೇಗೆ ಖುಷಿಯಾಗಿ ನನ್ನ ಬರ್ತ್‌ಡೇ ಸೆಲೆಬ್ರೇಶನ್‌ ಮಾಡಿಕೊಳ್ಳಲಿ? ಕಳೆದ ಒಂದು ವರ್ಷದಿಂದ ನನ್ನ ಬಹುತೇಕ ಸಮಯವನ್ನ ಸೋಶಿಯಲ್‌ ಸರ್ವೀಸ್‌ ಮಾಡೋದ್ರಲ್ಲಿ ಕಳೆಯುತ್ತಿದ್ದೇನೆ. ಅದ್ರಲ್ಲೂ ಲಾಕ್‌ಡೌನ್‌ ಟೈಮಲ್ಲಿ ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ, ಅಷ್ಟುಕೆಲಸ ಮಾಡ್ತಿದ್ದೇನೆ. ಅದು ನನಗೆ ಖುಷಿ ಕೊಡುತ್ತಿದೆ’ ಇದು ಬರ್ತ್‌ಡೇ ಗರ್ಲ್ ರಾಗಿಣಿ ಮಾತು.

Advertisement

“ಇತ್ತೀಚೆಗೆ ನನಗೆ ಸೆಲೆಬ್ರೇಶನ್‌ ಗಳಿಗಿಂತ, ಈ ಥರದ ಸೋಶಿಯಲ್‌ ಸರ್ವೀಸ್‌ ತುಂಬ ಖುಷಿ ಕೊಡುತ್ತಿದೆ. ಕೋವಿಡ್‌ ಸೆಕೆಂಡ್‌ ವೇವ್‌ ಶುರುವಾದಾಗಿನಿಂದ ನನ್ನ ಕೈಲಾದ ಕೆಲಸ ಮಾಡ್ತಿದ್ದೇನೆ. ನಮ್ಮ ತಂಡದಲ್ಲಿ ಸುಮಾರು 175 ಜನ ವಾಲೆಂಟಿಯರ್ ಇದ್ದೇವೆ. ಒಂದು ತಿಂಗಳಿನಿಂದ ಬೇರೆ ಬೇರೆ ಟ್ರಸ್ಟ್‌ ಎನ್‌ಜಿಒ ಗಳ ಜೊತೆ ಸೇರಿಕೊಂಡು ಪ್ರತಿನಿತ್ಯ 1 ಸಾವಿರಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 35 ಸಾವಿರಕ್ಕೂ ಅಧಿಕ ಊಟ, 400ಕ್ಕೂ ಹೆಚ್ಚು ಫ‌ುಡ್‌ಕಿಟ್‌ ಕೊಟ್ಟಿದ್ದೇವೆ. ಬ್ಲೆಡ್‌ ಡೊನೇಶನ್‌ ಕ್ಯಾಂಪ್‌ ಮಾಡುತ್ತಿದ್ದೇವೆ ಎಂದರು.

ಜನರಿಗೆ ವ್ಯಾಕ್ಸಿನೇಶನ್‌ ಹಾಕಿಕೊಳ್ಳುವಂತೆ ಅರಿವು ಮೂಡಿಸುತ್ತಿದ್ದೇನೆ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡುತ್ತಿದ್ದೇನೆ. ಸ್ಲಂ, ಆಸ್ಪತ್ರೆ, ಸ್ಮಶಾಣ ಹೀಗೆ ಎಲ್ಲಕಡೆಕೊರೊನಾ ಫ್ರಂಟ್‌ ಲೈನ್‌ ವಾರಿಯರ್ಗೆ ನನ್ನಕೈಲಾದ ಸಹಾಯ ಮಾಡುತ್ತಿದ್ದೇನೆ. ಬರ್ತ್‌ಡೇ ದಿನ ಈ ಕೆಲಸವನ್ನು ಇನ್ನೂ ಹೆಚ್ಚಾಗಿ ಮಾಡಿದ್ದೇನೆ. ಇದರಿಂದ ನನಗೆ ಏನೋ ಸಾರ್ಥಕ ಭಾವವಿದೆ’ ಎನ್ನುತ್ತಾರೆ ರಾಗಿಣಿ.

Advertisement

Udayavani is now on Telegram. Click here to join our channel and stay updated with the latest news.

Next