ಮಂಗಳೂರು: ಇಲ್ಲಿನ ಉಳ್ಳಾಲದ ನಾಟಕಲ್ ನ ಖಾಸಗಿ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ರಾಗಿಂಗ್ ಮಾಡುತ್ತಿದ್ದ ಆರೋಪದಡಿ 11 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಲೇಜಿನ ಫಿಸಿಯೋಥೆರಪಿ ಮತ್ತು ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದ ಐವರು ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿದ್ದರು. ಗಡ್ಡ- ಮೀಸೆ ಬೋಳಿಸಬೇಕು, ಪೊಟ್ಟಣದಲ್ಲಿರುವ ಬೆಂಕಿ ಕಡ್ಡಿಗಳನ್ನು ಎಣಿಸಬೇಕು ಎಂಬಿತ್ಯಾದಿ ರೀತಿಯಲ್ಲಿ ಕಿರುಕುಳ ನೀಡಿದ್ದರು.
ಇದನ್ನೂ ಓದಿ:ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಸೂಕ್ತ ಕ್ರಮ : ರವಿ ಶಂಕರ್ ಪ್ರಸಾದ್
ಕೆಲವು ವಿದ್ಯಾರ್ಥಿಗಳು ಪ್ರತಿರೋಧ ತೋರಿದಾಗ ಅವರಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರು ಉಳ್ಳಾಲ ಠಾಣೆಗೆ ದೂರು ನೀಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ 11 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಮೊಹಮ್ಮದ್ ಶಮಾಸ್, ಅವಿನ್ ಜೋಯ್, ರಾಬಿನ್ ಬಿಜು, ಜೆರಾನ್ ಸಿರಿಲ್, ಜಬಿನ್ ಮಹರೂಫ್, ಮೊಹಮ್ಮದ್ ಸೂರಜ್, ಜಫಿನ್, ಅಬ್ದುಲ್ ಬಸಿತ್, ಆಶಿನ್ ಬಾಬು, ಅಬ್ದುಲ್ ಅನಾಸ್ ಮೊಹಮ್ಮದ್, ಅಕ್ಷಯ್ ಕೆ.ಎಸ್ ಬಂಧಿತ ವಿದ್ಯಾರ್ಥಿಗಳು. ಇವರೆಲ್ಲರೂ ಕೇರಳ ಮೂಲದವರಾಗಿದ್ದಾರೆ.