ಆಂಜನೇಯ, ಶಕ್ತಿ ಮತ್ತು ಭಕ್ತಿಗೆ ಹೆಸರಾದವನು. ಅವನನ್ನು “ಭಕ್ತರ ಭಕ್ತ’ ಎಂದು ಕರೆದಾಗ ಸರಳತೆಯ ಜೊತೆಗೆ ಹೆಚ್ಚುಗಾರಿಕೆಯೂ ವ್ಯಕ್ತವಾಗುತ್ತದೆ. ನಗರದ ಹೆಸರಾಂತ ಹನುಮನ ದೇವಾಲಯಗಳಲ್ಲೊಂದು ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯ. 1969ರಲ್ಲಿ ಶುರುವಾದ ದೇವಾಲಯ ಈಗ 50ನೇ ಹನುಮಜ್ಜಯಂತಿ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಡಿ.30ರ ತನಕ ಆಚರಣೆ ನಡೆಯಲಿದೆ. ಅದರ ಪ್ರಯುಕ್ತ ದೇಗುಲದ ಆವರಣದಲ್ಲಿ ಡಿ.23ರ ತನಕ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಈ ದಿನ (ಡಿ.15) ಬೆಳಗ್ಗೆ 9 ಗಂಟೆಗೆ ಶ್ರೀ ಮಹಾಮೃತ್ಯುಂಜಯ ಹೋಮ, ಸಂಜೆ ರಜತ ಕವಚ ಧಾರಣೆ ಜರುಗಲಿದೆ. ಸಂಜೆ 6.30ಕ್ಕೆ “ಸ್ಟ್ರಿಂಗ್ಸ್ ಅಟ್ಯಾಚ್x’ ತಂಡದ ವಿದ್ವಾನ್ ಕುಮರೇಶ್ ಮತ್ತು ವಿದುಷಿ ಜಯಂತಿ ಕುಮರೇಶ್ ಅವರಿಂದ ಪಿಟೀಲು ಮತ್ತು ವೀಣಾ ವಾದನ ಇರಲಿದೆ. ಮರುದಿನ (ಡಿ.16), ಬೆಳಗ್ಗೆ 9ಕ್ಕೆ ಚಂಡಿಕಾ ಹೋಮ, ಸಂಜೆ 6.30ಕ್ಕೆ ಕಂಚಿ ಕಾಮಕೋಟಿ ಆಸ್ಥಾನ ವಿದ್ವಾನ್ ಶಿವಮೊಗ್ಗ ಕುಮಾರಸ್ವಾಮಿ ಮತ್ತು ತಂಡದವರಿಂದ ಸ್ಯಾಕೊÕಫೋನ್ ವಾದನ ನಡೆಯಲಿದೆ.
ಎಂ.ಎಸ್. ಸುಬ್ಬುಲಕ್ಷ್ಮೀ ಮರಿಮಕ್ಕಳು ಹಾಡ್ತಾರೆ…
ಭಾರತರತ್ನ ಪುರಸ್ಕೃತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಕಂಠಸಿರಿಯನ್ನು ಮೆಚ್ಚದವರಿಲ್ಲ. ಇದೀಗ ಅವರ ಮರಿಮಕ್ಕಳು ಕುಟುಂಬದ ಸಂಗೀತ ಪರಂಪರೆಯನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ಅವರ ಗಾಯನಸಿರಿಯನ್ನು ಕೇಳಬೇಕೆಂಬ ಇಚ್ಚೆ ಇದ್ದರೆ ರಾಗಿಗುಡ್ಡ ಆಂಜನೇಯನ ದೇವಸ್ಥಾನಕ್ಕೆ ಬನ್ನಿ. ಸುಬ್ಬುಲಕ್ಷ್ಮೀ ಯವರ ಮರಿ ಮಕ್ಕಳಾದ ವಿದುಷಿ ಐಶ್ವರ್ಯ ಮತ್ತು ವಿದುಷಿ ಕು. ಎಸ್. ಸೌಂದರ್ಯ ಅವರ ಸಂಗೀತ ಕಛೇರಿ ಡಿ.19, ಸಂಜೆ 6.30ಕ್ಕೆ ನಡೆಯುತ್ತಿದೆ.
ಎಲ್ಲಿ?: ರಾಗಿಗುಡ್ಡ ಪ್ರಸನ್ನ ಆಂಜನೇಯ ದೇವಸ್ಥಾನ, ಜಯನಗರ