Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಶಾಂತಿ ರೀತಿಯಿಂದ ನಡೆದಿದೆ. ಗಣೇಶೋತ್ಸವ ಮುಗಿದ ಮೇಲೆ ಈದ್ ಮಿಲಾದ್ ಆಚರಣೆ ವೇಳೆ ಕೇಲವು ಕಟೌಟ್ ಗಳನ್ನು ಹಾಕಿದ್ದಾರೆ. ಟಿಪ್ಪು ಪೋಟೋ, ಕತ್ತಿಯ ಪೊಟೋ, ಔರಂಗಜೇಬನ ಪೋಟೋ ಹಾಕಿದ್ದಾರೆ. ಸಾಬ್ರ ಸಾಮ್ರಾಜ್ಯ ಎಂದು ಹಾಕಿದ್ದಾರೆ. ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಈ ಕಟೌಟ್ ಹಾಕಲಾಗಿದೆ. ಸರ್ಕಾರದ ಹಾಗೂ ಪೊಲೀಸ್ ಇಲಾಖೆಯ ವೈಪಲ್ಯವಿದು. ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಕಂಡಿದೆ. ಎಸ್ಪಿಯ ಮೇಲೆಯೇ ಕಲ್ಲು ತೂರಾಟವಾಗಿದೆ, ಎಸ್ಪಿಗೆ ರಕ್ಷಣೆ ಇಲ್ಲವಾದರೆ ಸಾರ್ವಜನಿಕರ ಕಥೆ ಏನು ಎಂದು ಪ್ರಶ್ನಿಸಿದರು.
Related Articles
Advertisement
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಕಡೆಗಳಲ್ಲಿ ಪಾಕಿಸ್ತಾನದ ಧ್ವಜ ಹಿಡಿದು ಘೋಷಣೆ ಕೂಗಿದವರ ಮೇಲೆ ಪ್ರಕರಣ ದಾಖಲಿಸಿಲ್ಲ. ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ, ಹುಬ್ಬಳ್ಳಿ ಪ್ರಕರಣಗಳಲ್ಲಿ ಬಂಧಿತರನ್ನು ಬಿಡುಗಡೆ ಮಾಡಲು ಅವರ ನಾಯಕರೇ ಪತ್ರ ಬರೆಯುತ್ತಾರೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಆತಂಕವಾದಿಗಳು ತರಬೇತಿ ಪಡೆದಿದ್ದರು. ಆದರೆ ಇದೇ ಆತಂಕವಾದಿಗಳ ಪರವಾಗಿ ಡಿಸಿಎಂ ಡಿಕೆಶಿ ಒಂದು ಹೇಳಿಕೆ ನೀಡಿದ್ದರು. ಹಾಗಾಗಿ ಅವರಿಗೆ ಧೈರ್ಯ ಬಂದಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರವಾಗಿದೆ. ಪೊಲೀಸ್ ಇಲಾಖೆಯವರ ಕೈ ಕಟ್ಟಿ ಹಾಕುವ ಕೆಲಸ ಈ ಸರ್ಕಾರ ಮಾಡಿದೆ. ಮತ ಬ್ಯಾಂಕಿನ ಆಸೆಗಾಗಿ ಅಲ್ಪಸಂಖ್ಯಾತರ ಒಲೈಕೆ ಮಾಡುತ್ತಿದೆ. ಹಿಂದೂಗಳ ಪರವಾಗಿ ನಾವಿದ್ದೇವೆ ಎಂದು ನಳಿನ್ ಕಟೀಲ್ ಹೇಳಿದರು.
ಭಯೋತ್ಪಾದಕ ಸರ್ಕಾರ: ಕಾಂಗ್ರೆಸ್ ಸರ್ಕಾರ ಮೊದಲು ಬಂದಾಗ ಟಿಪ್ಪು ಜಯಂತಿ ನಡೆದಿತ್ತು. ಈಗ ಔರಂಗಜೇಬ್ ಬಂದಿದ್ದಾನೆ. ಈ ಸರ್ಕಾರ ಕೇವಲ ಹಿಂದೂ ವಿರೋಧಿ ಮಾತ್ರವಲ್ಲ, ಮಹಿಳಾ ವಿರೋಧಿ ಸರ್ಕಾರವು ಹೌದು. ಒಂದೇ ಒಂದು ಮುಸ್ಲಿಂ ಮನೆಗಳ ಮೇಲೆ ದಾಳಿ ನಡೆದಿಲ್ಲ. ಕಾಂಗ್ರೆಸ್ ಪಕ್ಷವೇ ಭಯೋತ್ಪಾದಕ ಸರ್ಕಾರ. ಹಾದಿ ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ. ನಾಳೆ ನಮ್ಮ ಮೇಲೂ ಕೇಸ್ ದಾಖಲಿಸಬಹುದು. ಎಸ್ಡಿಪಿಐ ಪಿತಾಮಹ ಕಾಂಗ್ರೆಸ್. ಈ ರಾಜ್ಯದಲ್ಲಿ ಆತಂಕ ಸೃಷ್ಟಿಯಾದರೆ ಕಾಂಗ್ರೆಸ್ ಸರ್ಕಾರವೇ ಕಾರಣ. ಮನೆ ಹಾನಿಯಾದವರಿಗೆ ಸರ್ಕಾರ ಪರಿಹಾರ ಕೊಡಬೇಕು ಎಂದರು.