ರಾಗಿ: 1 ಕಪ್
ತೆಂಗಿನ ತುರಿ: ಮುಕ್ಕಾಲು ಕಪ್
ಬೆಲ್ಲದ ಹುಡಿ: ಒಂದೂವರೆ ಕಪ್
ಏಲಕ್ಕಿ ಹುಡಿ: ಸ್ವಲ್ಪ
ತುಪ್ಪ: 2 ಚಮಚ
Advertisement
ಮಾಡುವ ವಿಧಾನರಾಗಿಯನ್ನು ನೀರಿನಲ್ಲಿ ಎರಡು ಗಂಟೆ ನೆನೆಸಿ ತೆಂಗಿನ ತುರಿಯೊಂದಿಗೆ ನುಣ್ಣಗೆ ರುಬ್ಬಿ ಸೋಸಿ. ಸೋಸಿದ ರಾಗಿಯ ನೀರನ್ನು ಬೆಲ್ಲದೊಂದಿಗೆ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ ಅನಂತರ ತುಪ್ಪ, ಏಲಕ್ಕಿ ಹುಡಿ ಸೇರಿಸಿ ಚೆನ್ನಾಗಿ ಕಲಸಿದ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಯಲ್ಲಿ ಸುರಿದು ತಣ್ಣಗಾದ ಬಳಿಕ ಬೇಕಾದ ಆಕೃತಿಯಲ್ಲಿ ಕತ್ತರಿಸಿ ಸವಿಯಬಹುದು.
ಬಿಜೈ ಮೈನ್ ರೋಡ್, ಮಂಗಳೂರು