Advertisement
“ದೇಶವನ್ನು ಒಗ್ಗೂಡಿಸುವ ಯಾತ್ರೆಯ ಪರವಾಗಿ ನಿಲ್ಲುವವರ ಸಂಖ್ಯೆ ಏರಿಕೆಯಾಗುತ್ತಿದೆ. ದ್ವೇಷ ಹರಡುವವರ ವಿರುದ್ಧದ ನಮ್ಮ ಈ ಹೋರಾಟದಲ್ಲಿ ಯಶಸ್ಸು ಗಳಿಸುತ್ತೇವೆ,’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. 2013ರ ಸೆ.4ರಿಂದ 2016ರ ಸೆ.4ರವರೆಗೆ ಆರ್‌ಬಿಐ ಗವರ್ನರ್ ಆಗಿ ರಘುರಾಮ್ ರಾಜನ್ ಕರ್ತವ್ಯ ನಿರ್ವಹಿಸಿದ್ದರು.
“ಕಾಂಗ್ರೆಸ್‌ನಿಂದ ನೇಮಕವಾದ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಯಾವುದೇ ಅಶ್ಚರ್ಯವಿಲ್ಲ. ಅವರು ತಮ್ಮನ್ನು ತಾವೇ ಮುಂದಿನ ಮನಮೋಹನ್ ಸಿಂಗ್ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಭಾರತದ ಆರ್ಥಿಕತೆಯ ಬಗ್ಗೆ ಅವರ ವ್ಯಾಖ್ಯಾನವನ್ನು ತಿರಸ್ಕರಿಸಬೇಕು. ಇದು ಅವಕಾಶವಾದದಿಂದ ಕೂಡಿದ ತಿರುಚಿದ ಹೇಳಿಕೆಯಾಗಿದೆ,’ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.