Advertisement
ಕೆಲವರಿಗೆ ಅಧಿಕಾರ ಇಲ್ಲದೆ ಇರಲಾಗದು ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂತೋಷ್ ಅವರು ಎಲ್ಲರನ್ನೂ ಉದ್ದೇಶಿಸಿ ಹೇಳಿರಬಹುದು. 70 ವರ್ಷ ಮೇಲ್ಪಟ್ಟವರು, ಸೋತವರನ್ನೂ ಲೋಕಸಭೆಗೆ ನಿಲ್ಲಿಸಲಾಗಿದೆ. ನಾನು ಮುಖ್ಯಮಂತ್ರಿ ಆಗಬೇಕು, ನನ್ನ ಪುತ್ರ ಅಧ್ಯಕ್ಷನಾಗಬೇಕು ಎನ್ನು ತ್ತಿರುವವರಿಗೂ ಹೇಳಿರಬಹುದು ಎಂದರು.
ಸುಮಾರು 25 ಲಕ್ಷ ಪದವೀಧರರ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 85 ಸಾವಿರ ಮಾತ್ರ ಆಗಿದ್ದು, ಈ ವ್ಯವಸ್ಥೆಯನ್ನು ಬದಲಿಸಬೇಕಿದೆ. ಮುಂದೆ ಗೆದ್ದು ಬಂದಾಗ ಈ ಬಗ್ಗೆ ಧ್ವನಿ ಎತ್ತುವೆ. ಒಮ್ಮೆ ಪದವಿ ದೊರಕಿದ ಬಳಿಕ ಅದು ಶಾಶ್ವತ. ಹಾಗಿರುವಾಗ ಆರು ವರ್ಷಗಳಿಗೆ ಒಮ್ಮೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಅನಗತ್ಯ ಎಂದರು. ಸಾಧನೆಯೇ ಆಧಾರ ಶಾಸಕನಾಗಿ ನಾನು ಮಾಡಿದ ಸಾಧನೆಗಳೇ ನನಗೆ ಆಧಾರ. ಕ್ಷೇತ್ರದ ಪ್ರಬುದ್ಧ ಮತದಾರರು ಅದನ್ನು ಆಧರಿಸಿ ಬೆಂಬಲಿಸುವ ಸಾಧ್ಯತೆ ಇದೆ ಎಂದರಲ್ಲದೇ, ಪದವೀಧರರ ಸಮಸ್ಯೆಯನ್ನು ಬಗೆಹರಿಸಲು ಅಂಕಿಅಂಶ ಆಧಾರಿತ ಜಾಲವನ್ನು ರಚಿಸಿ ಕಾರ್ಯತತ್ಪರನಾಗಲು ಯೋಚಿಸಿರುವೆ ಎಂದು ಹೇಳಿದರು.