Advertisement

OTT release: ಕೀರ್ತಿ ಸುರೇಶ್‌ ʼರಘು ತಾತʼ ಓಟಿಟಿ ರಿಲೀಸ್‌ಗೆ ಡೇಟ್‌ ಲಾಕ್

03:04 PM Sep 10, 2024 | Team Udayavani |

ಚೆನ್ನೈ: ʼಮಹಾನಟಿʼ ಕೀರ್ತಿ ಸುರೇಶ್‌ (Keerthy Suresh) ಅಭಿನಯದ ʼರಘು ತಾತʼ(Raghu Thatha) ಥಿಯೇಟರ್‌ನಲ್ಲಿ ಸಕ್ಸಸ್‌ ಫುಲ್‌ ಆಗಿ ಓಡಿದ ಬಳಿಕ ಇದೀಗ ಓಟಿಟಿ ಎಂಟ್ರಿಗೆ ಸಜ್ಜಾಗಿದೆ.

Advertisement

ಪೊಲಿಟಿಕಲ್‌ ಡ್ರಾಮಾ ಹಾಗೂ ಕಾಮಿಡಿ ಸ್ಟೋರಿಯನ್ನೊಳಗೊಂಡ ʼರಘು ತಾತʼ ಸಿನಿಮಾಕ್ಕೆ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಸ್ಮ್ (Hombale Films) ಬಂಡವಾಳ ಹಾಕಿತ್ತು.

ಸಿನಿಮಾದಲ್ಲಿ ಕೀರ್ತಿ ಸುರೇಶ್‌ ಅಭಿನಯ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿತ್ತು. ಸ್ವಾತಂತ್ರ್ಯ ದಿನಕ್ಕೆ ತೆರೆಕಂಡಿದ್ದ ಈ ಸಿನಿಮಾಕ್ಕೆ ತಮಿಳಿನ ಮತ್ತೊಂದು ದೊಡ್ಡ ʼತಂಗಲಾನ್‌ʼ ಪೈಪೋಟಿ ನೀಡಿತ್ತು. ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ಸಿನಿಮಾ ರಿಲೀಸ್‌ಗೆ ಮೊದಲು ಹೊಂಬಾಳೆ ಪ್ಲ್ಯಾನ್‌ ಹಾಕಿಕೊಂಡಿತ್ತು. ಆದರೆ ಆ ಬಳಿಕ ತಮಿಳಿನಲ್ಲಿ ಮಾತ್ರ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು.

content-img

ʼಗನ್ಸ್ & ಗುಲಾಬ್ಸ್ʼ ಮತ್ತು ʼಫರ್ಜಿʼಯಂತಹ ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವವಿರುವ ಸುಮನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

Advertisement

ಥಿಯೇಟರ್‌ನಲ್ಲಿ ಹೆಚ್ಚು ದಿನ ಓಡದೆ ಇದ್ರು ಪ್ರೇಕ್ಷಕರಿಂದ ಪಾಸಿಟಿವ್‌ ರೆಸ್ಪಾನ್ಸ್‌ ಪಡೆದುಕೊಂಡಿತ್ತು. ಇದೀಗ ʼರಘು ತಾತʼ ಓಟಿಟಿ ಎಂಟ್ರಿಗೆ ದಿನ ಫಿಕ್ಸ್‌ ಆಗಿದೆ. ಇದೇ ಸೆ.13ರಂದು  ಜೀ 5ನಲ್ಲಿ ಸ್ಟ್ರೀಮಿಂಗ್‌ ತಮಿಳಿನಲ್ಲಿ ಮಾತ್ರವಲ್ಲದೇ ತೆಲುಗು, ಕನ್ನಡದಲ್ಲಿಯೂ ಡಬ್‌ ಆಗಿ ಬರಲಿದೆ.

ಕೀರ್ತಿ ಸುರೇಶ್‌ ʼಬೇಬಿ ಜಾನ್‌ʼ, ʼರಿವಾಲ್ವರ್ ರೀಟಾʼ, ʼಕನ್ನಿವೇದಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.