Advertisement
Related Articles
Advertisement
ಶ್ರೀಗಳನ್ನು ಮಹಿಳೆಯರು ಪೂರ್ಣಕುಂಭ ದೊಂದಿಗೆ ಸ್ವಾಗತಿಸಿದರು. ಸಂತೋಷ್ ಶೆಟ್ಟಿ ಮತ್ತು ದಿವ್ಯಾ ಎಸ್. ಶೆಟ್ಟಿ ದಂಪತಿ ಶ್ರೀಗಳನ್ನು ಹಾರಾರ್ಪಣೆ ಮಾಡಿ ಸ್ವಾಗತಿಸಿದರು. ಶ್ರೀಗಳು ಭವನದ ಚಾವಡಿಯಲ್ಲಿ ದೀಪ ಪ್ರಜ್ವಲಿಸಿದರು.
ಪ್ರವೀಣ್ ಶೆಟ್ಟಿ ದಂಪತಿ, ಉದಯ ಕುಮಾರ್ ಕೊಡಂಕಲ್ಲು ಹಾಗೂ ಸೂರ್ಯನಾರಾಯಣ ಭಟ್ ಅವರು ಶ್ರೀಗಳ ಪಾದಪೂಜೆ ನೆರವೇರಿಸಿದರು. ಈ ಸಂದರ್ಭ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಕಾಲುಗಳ ಬಲ ಕಳೆದುಕೊಂಡ ಯೋಧ ಶಾಮರಾಜ್ ಎಡನೀರು ಇವರನ್ನು ಶ್ರೀಗಳು ಮಂತ್ರಾಕ್ಷತೆ ಹಾಗೂ ಫಲಕ ನೀಡಿ ಸಮ್ಮಾನಿಸಿದರು. ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ, ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು, ಪಿಂಪ್ರಿ-ಚಿಂಚಾÌಡ್ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಕೆ. ಪದ್ಮನಾಭ ಶೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ಮಹಾಗಣಪತಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ರಾಮಚಂದ್ರಾಪುರ ಮಠ ಪುಣೆ ಘಟಕದ ಅಧ್ಯಕ್ಷ ಮದಂಗಲ್ಲು ಆನಂದ ಭಟ್, ಬಂಟ್ಸ್ ಅಸೋಸಿಯೇಶನ್ ಪುಣೆ ಮಾಜಿ ಅಧ್ಯಕ್ಷ ಜಯ ಶೆಟ್ಟಿ ಮಿಯ್ನಾರು, ಗುರುದೇವಾ ಸೇವಾ ಬಳಗದ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು, ರಂಕಾ ಜುವೆಲರ್ಸ್ ನ ಓಂ ಪ್ರಕಾಶ್ ರಂಕಾ, ಕೃ. ಶಿ. ಹೆಗಡೆ, ಸುಧಾಕರ ಶೆಟ್ಟಿ, ಚಂದ್ರಕಾಂತ ಹಾರಕೂಡೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ರಾಮಚಂದ್ರಾಪುರ ಮಠದ ಪುಣೆ ಘಟಕದ ಅಧ್ಯಕ್ಷ ಮದಂಗಲ್ಲು ಆನಂದ ಭಟ್, ಗುರಿಕ್ಕಾರ ಅನಂತ ಶರ್ಮ, ಉಪಾಧ್ಯಕ್ಷರಾದ ಮದಂಗಲ್ಲು ಅಶೋಕ್ ಭಟ್, ಉದಯಕುಮಾರ್ ಕೊಡಂಕಲ್ಲು, ಸೂರ್ಯನಾರಾಯಣ ಭಟ್, ಕಾರ್ಯದರ್ಶಿ ಶ್ಯಾಮ್ ಸುಂದರ್ ಭಟ್, ಕೋಶಾಧಿಕಾರಿ ಗಣೇಶ್ ಪ್ರಸಾದ್, ಮಹಿಳಾ ವಿಭಾಗದ ಹೇಮಾ ಭಟ್ ಮತ್ತು ಮಲ್ಲಿಕಾ ಭಟ್ ಇವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿ ಶ್ರಮಿಸಿದರು. ಅನಂತ ಶರ್ಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪುಣೆ ಬಂಟರ ಸಂಘದ ವತಿಯಿಂದ ಸಭಾಂಗಣವನ್ನು ಪ್ರಾಯೋಜಿಸಲಾಗಿತ್ತು. ಪ್ರವೀಣ್ ಶೆಟ್ಟಿ ಪುತ್ತೂರು ಲಘು ಉಪಾಹಾರವನ್ನು ಪ್ರಾಯೋಜಿಸಿದ್ದರು. ನೂರಾರು ಸಂಖ್ಯೆಯಲ್ಲಿ ಗುರುಭಕ್ತರು ಉಪಸ್ಥಿತರಿದ್ದು ಮಂತ್ರಾಕ್ಷತೆ ಸ್ವೀಕರಿಸಿದರು. ನಮ್ಮ ನೂತನ ಸಮಾಜದ ಭವನಕ್ಕೆ ಶ್ರೀಗಳು ಆಗಮಿಸಿರುವುದು ಸಂತಸ ತಂದಿದೆ. ಪೂಜ್ಯ ಶ್ರೀಗಳು ತಾಯಿ ಸಮಾನವಾದ ಗೋವುಗಳ ಬಗ್ಗೆ ಅಪಾರ ವಾದ ಆಸ್ಥೆಯನ್ನಿಟ್ಟುಕೊಂಡು ಅವನ್ನು ಉಳಿಸಲು, ಸಂರಕ್ಷಿಸಲು ಸಮಾಜಮುಖೀ ಚಿಂತನೆಯೊಂದಿಗೆ ಗೋವುಗಳ ಸ್ವತ್ಛಂದ ವಾದ ಜೀವನಕ್ಕೆ ವ್ಯವಸ್ಥೆ ಕಲ್ಪಿಸುವ ಗೋ ಸ್ವರ್ಗವನ್ನು ಸ್ಥಾಪಿಸಿ ಅಭಿಯಾನವನ್ನು ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿರುವುದು ಅಭಿಮಾನದ ವಿಷಯವಾಗಿದೆ. ಇಂತಹ ಉತ್ತಮ ಧ್ಯೇಯೋದ್ದೇಶಗಳನ್ನು ಕೈ ಗೊಳ್ಳುವ ಪೂಜ್ಯ ಸಂತರ ಕಾರ್ಯಗಳಿಗೆ ನಾವೆಲ್ಲರೂ ಕೈಜೋಡಿಸೋಣ
– ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು (ಅಧ್ಯಕ್ಷರು : ಪುಣೆ ಬಂಟರ ಸಂಘ)
ಚಿತ್ರ -ವರದಿ : ಕಿರಣ್ ಬಿ. ರೈ ಕರ್ನೂರು