ರಾಘವೇಂದ್ರ ರಾಜ್‌ಕುಮಾರ್ ಈಗಾಗಲೇ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡು ಮತ್ತೆ ನಟನೆಗೆ ಮರಳಿರುವ ವಿಚಾರ ನಿಮಗೆ ಗೊತ್ತೆ ಇದೆ. ಈಗಾಗಲೇ ಅವರ ನಟನೆಯ “ಆಡಿಸಿದಾತ’ ಚಿತ್ರೀಕರಣ ಮೊದಲ ಹಂತ ಪೂರ್ಣಗೊಂಡಿದೆ. ಚಿತ್ರದ ಟೀಸರ್ ಗೌರಿ-ಗಣೇಶ ಹಬ್ಬದ ದಿನ ಬಿಡುಗಡೆಯಾಗಲಿದೆ.
ಈ ನಡುವೆಯೇ ರಾಘಣ್ಣ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಅದು “ರಾಜತಂತ್ರ’. ಹೌದು, ಹೀಗೊಂದು ಚಿತ್ರವನ್ನು ರಾಘಣ್ಣ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಪಿ.ವಿ.ಆರ್.ಸ್ವಾಮಿ ಈ ಚಿತ್ರದ ನಿರ್ದೇಶಕರು. ವಿಶ್ವಂ ಡಿಜಿಟಲ್ ಮೀಡಿಯಾ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರಲಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, ರಾಜತಂತ್ರ ಚಿತ್ರ ದೇಶವನ್ನು ಅಸ್ಥಿರಗೊಳಿಸುವ ವಿವಿಧ ಶಕ್ತಿಗಳ ವಿರುದ್ಧ ಸಾಮಾನ್ಯ ಮತ್ತು ಅಸಾಮಾನ್ಯರ ಸಂಘರ್ಷ ಮತ್ತು ಹೋರಾಟಗಳ ಅನಾವರಣ ಎನ್ನುತ್ತಾರೆ.
ರಾಘವೆಂದ್ರ ರಾಜ್‌ಕುಮಾರ್ ಇಲ್ಲಿ ನಾಯಕರಾಗಿ ನಟಿಸುತ್ತಿದ್ದು, ಹೊಸ ಬಗೆಯ ಪಾತ್ರವಿದೆಯಂತೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿ ಯನ್ನು ಜೆ.ಎಮ್ .ಪ್ರಹ್ಲಾದ್ ವಹಿಸಿಕೊಂಡಿದ್ದಾರೆ. ನಿರ್ದೇಶಕ ಪಿ.ವಿ.ಆರ್. ಸ್ವಾಮಿಯವರೇ ಈ ಚಿತ್ರದ ಛಾಯಾಗ್ರಹಣ ವನ್ನು ವಹಿಸಿಕೊಂಡಿದ್ದಾರೆ. ಇದುವರೆಗೆ 30 ಸಿನಿಮಾ ಗಳಿಗೆ ಛಾಯಾ ಗ್ರಾಹಕರಾಗಿ ದುಡಿದ ಅನುಭವ ಸ್ವಾಮಿಯವರಿಗಿದೆ.
………………………………………………………………………………………………………………………………………………..
ಸ್ವಾಮಿ ವಿವೇಕಾನಂದರ ಸಂದೇಶಸಾರುವ ಮ್ಯೂಸಿಕ್ ಆಲ್ಬಂ : ತನ್ನ ಚಿಂತನೆಗಳ ಮೂಲಕವೇ ವಿಶ್ವದಾದ್ಯಂತ ಅಸಂಖ್ಯಾತ ಯುವಕರನ್ನು ಸೂಜಿಗಲ್ಲಿನಂತೆ ಸೆಳೆದವರು ಸ್ವಾಮಿ ವಿವೇಕಾನಂದರು. ಇಂದಿಗೂ ಅದೆಷ್ಟೋ ಯುವಕರಿಗೆ ನಿರಂತರ ಪ್ರೇರಣೆ ನೀಡುವ ಸ್ವಾಮಿ ವಿವೇಕಾನಂದರ ಸಂದೇಶವನ್ನು ಇಲ್ಲೊಂದು ಯುವಕರ ತಂಡ ಮ್ಯೂಸಿಕ್ ಆಲ್ಬಂ ಮೂಲಕ ಹೇಳಲು ಹೊರಟಿದೆ. ಅಂದಹಾಗೆ, ಆ ಮ್ಯೂಸಿಕ್ ಆಲ್ಬಂ ಹೆಸರು “ಜೈ ಜೈ ಸ್ವಾಮಿ ವಿವೇಕಾನಂದ’. ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ತುಳು ಹೀಗೆ ನಾಲ್ಕು ಭಾಷೆಗಳಲ್ಲಿ ಏಕ ಕಾಲಕ್ಕೆ ಈ ಮ್ಯೂಸಿಕ್ ಆಲ್ಬಂ ತಯಾರಾಗಿದ್ದು, ಇದೇ ಆಗಸ್ಟ್ 15 ಸ್ವತಂತ್ರ ದಿನದಂದು ಬಿಡುಗಡೆಯಾಗಿದೆ. ಗಾಯಕಿ ಐರಾ ಉಡುಪಿ ಅವರ ಸುಮಧುರ ಧ್ವನಿಯಲ್ಲಿ ನಾಲ್ಕು ಭಾಷೆಯ ಹಾಡುಗಳು ಮೂಡಿಬಂದಿವೆ. ಈ ಮ್ಯೂಸಿಕ್ ಆಲ್ಬಂನ ಹಾಡುಗಳಿಗೆ ಸುರೇಶ್ ಬಾಬು ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ದೇರಳಕಟ್ಟೆ ಸುರೇಶ್ ಅವರ ಛಾಯಾಗ್ರಹಣ, ಸುಹಾಸ್ ಸಂಕಲನವಿದೆ. ಸಿ. ಜಯಪ್ರಕಾಶ್ “ಜೈ ಜೈ ಸ್ವಾಮಿ ವಿವೇಕಾನಂದ’ ಮ್ಯೂಸಿಕ್ ಆಲ್ಬಂ ನಿದೇìಶನ ಮಾಡಿದ್ದಾರೆ.