ನವದೆಹಲಿ: ಫ್ರಾನ್ಸ್‌ನಿಂದ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಮಾ.31ರಂದು ಹರ್ಯಾಣದ ಅಂಬಾಲಾಕ್ಕೆ ಆಗಮಿಸಲಿವೆ.
ಅವುಗಳಿಗೆ ಗಲ್ಫ್ ಆಫ್ ಒಮನ್ ವ್ಯಾಪ್ತಿಯಲ್ಲಿ ಹಾರಾಟ ನಡೆಸುವ ಸಂದರ್ಭದಲ್ಲಿ ಯುಎಇ ಸರ್ಕಾರ ಹಾರಾಟ ನಡೆಸುವಾಗಲೇ ಇಂಧನ ಪೂರೈಕೆ ಮಾಡಲಿದೆ.
ಐಎಎಫ್ ನ ಮೂವರು ಪೈಲಟ್‌ಗಳು ಈಗಾಗಲೇ ಫ್ರಾನ್ಸ್‌ನ ಬೋರ್ಡೋ ವಾಯುನೆಲೆಗೆ ತಲುಪಿದ್ದಾರೆ. ಅಲ್ಲಿಂದ ಮಾ.31ರಂದು ಬೆಳಗ್ಗೆ 7 ಗಂಟೆಗೆ ಹೊರಟು ರಾತ್ರಿ 7ಕ್ಕೆ ಭಾರತಕ್ಕೆ ಆಗಮಿಸಲಿವೆ.
ಈ ಮೂಲಕ ಅಂಬಾಲಾ ವಾಯುನೆಲೆಯಲ್ಲಿ 14 ರಫೇಲ್ ವಿಮಾನಗಳು ನಿಯೋಜನೆಗೊಂಡಂತಾಗುತ್ತವೆ. ಮುಂದಿನ ತಿಂಗಳು ಮತ್ತೆ 9 ವಿಮಾನಗಳು ಬರಲಿದ್ದು, ಈ ಪೈಕಿ ಐದನ್ನು ಪಶ್ಚಿಮ ಬಂಗಾಳದ ಹಶಿಮರಾ ವಾಯುನೆಲೆಯಲ್ಲಿ ನಿಯೋಜನೆ ಮಾಡಲಾಗುತ್ತದೆ.
ಇದನ್ನೂ ಓದಿ :ರಾವಲ್ಪಿಂಡಿಯಲ್ಲಿ ಶತಮಾನ ಹಳೆಯ ದೇಗುಲ ಧ್ವಂಸಗೊಳಿಸಿದ ಕಿಡಿಗೇಡಿಗಳು