ನ್ಯೂಯಾರ್ಕ್: ಸ್ಪೈನ್ ನ ಟೆನ್ನಿಸ್ ಸೂಪರ್ ಸ್ಟಾರ್ ರಾಫೇಲ್ ನಡಾಲ್ ಮತ್ತೆ ಯುಎಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ರಷ್ಯಾದ ಮೆಡ್ವೆಡೆವ್ ಅವರನ್ನು ಸೋಲಿಸಿದ ರಾಫೇಲ್ 19ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದು ಬೀಗಿದರು.
ಫೈನಲ್ ಪಂದ್ಯದಲ್ಲಿ ರಷ್ಯಾದ ಡೆನಿಲ್ ಮೆಡ್ವೆಡೆವ್ ಅವರ ಸವಾಲನ್ನು ಎದುರಿಸಿದ ರಾಫೇಲ್ ನಡಾಲ್ 7-5, 6-3, 5-7, 4-6, 6-4 ಸೆಟ್ ಗಳಿಂದ ಗೆದ್ದು ನಾಲ್ಕನೇ ಸಲ ಅಮೇರಿಕನ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದರು.
ಅನುಭವಿ ರಾಫೇಲ್ ನಡಾಲ್ ಗೆ ಮೊದಲ ಗ್ರ್ಯಾನ್ ಸ್ಲ್ಯಾಮ್ ಫೈನಲ್ ಆಡುತ್ತಿರುವ ರಷ್ಯಾದ ಮೆಡ್ವೆಡೆವ್ ಭಾರಿ ಪೈಪೋಟಿ ನೀಡಿದರು. ಸುಮಾರು 4 ಗಂಟೆ 49 ನಿಮಿಷಗಳಷ್ಟು ಕಾಲ ನಡೆದ ಫೈನಲ್ ಹಣಾಹಣಿಯಲ್ಲಿ ಮೊದಲೆರಡು ಸೆಟ್ ಗೆದ್ದ ನಡಾಲ್ ನಂತರದ ಎರಡು ಸೆಟ್ ಗಳಲ್ಲಿ ಹಿನ್ನಡೆ ಅನುಭವಿಸಿದರು. ಅಂತಿಮ ಸೆಟ್ ನಲ್ಲಿ ತನ್ನೆಲ್ಲಾ ಅನುಭವ ಸೇರಿಸಿ ಆಡಿದ ನಡಾಲ್ ಮತ್ತೊಮ್ಮ ಟ್ರೋಫಿ ಎತ್ತಿ ಹಿಡಿಯುವಲ್ಲಿ ಸಫಲರಾದರು.
ಈ ಗೆಲುವಿನೊಂದಿಗೆ ನಡಾಲ್ ಅತೀ ಹೆಚ್ಚು ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ರೋಜರ್ ಫೆಡರರ್ ಗೆ ಮತ್ತಷ್ಟು ಹತ್ತಿರವಾದರು. ಸ್ವಿಸ್ ತಾರೆ ಫೆಡರರ್ 20 ಗ್ರ್ಯಾನ್ ಸ್ಲ್ಯಾಮ್ ಗೆದ್ದಿದ್ದರು.