Advertisement

ಮಾ. 7ರಿಂದ “ವಾಯು ಶಕ್ತಿ’ಅನಾವರಣ

10:08 PM Mar 02, 2022 | Team Udayavani |

ನವದೆಹಲಿ: ರಾಜಸ್ಥಾನದ ಜೈಸಲ್ಮೇರ್‌ನ ಪೋಖ್ರಾನ್ ವಲಯದಲ್ಲಿ ಮಾ. 7ರಿಂದ ಭಾರತೀಯ ವಾಯುಪಡೆಯ (ಐಎಎಫ್) “ವಾಯು ಶಕ್ತಿ ಕವಾಯತು’ ಆರಂಭವಾಗಲಿದ್ದು, ಅದರಲ್ಲಿ ಐಎಎಫ್ ನ 148 ಯುದ್ಧ ವಿಮಾನಗಳು ಪಾಲ್ಗೊಳ್ಳಲಿವೆ.

Advertisement

ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಐಎಎಫ್ ಸೇರ್ಪಡೆ ಯಾಗಿರುವ ರಫೇಲ್‌ ಯುದ್ಧ ವಿಮಾನಗಳು ಇದೇ ಮೊದಲ ಬಾರಿಗೆ ಈ ಕವಾಯತಿನಲ್ಲಿ ಪಾಲ್ಗೊಳ್ಳಲಿರುವುದು ವಿಶೇಷ.

ಕವಾಯತಿನಲ್ಲಿ ಪಾಲ್ಗೊಳ್ಳಲಿರುವ 148 ಯುದ್ಧ ವಿಮಾನಗಳಲ್ಲಿ 109 ಫೈಟರ್‌ ಜೆಟ್‌ ಆಗಿರಲಿವೆ. ಇವುಗಳಲ್ಲಿ ಜ್ವಾಗ್ವಾರ್‌, ಸುಖೋಯ್‌-30, ಮಿಗ್‌ 29, ತೇಜಸ್‌; ಆಕಾಶ್‌ ಕ್ಷಿಪಣಿ ವ್ಯವಸ್ಥೆ, ಸ್ಪೈಡರ್‌ ಕ್ಷಿಪಣಿ ವ್ಯವಸ್ಥೆ; ಸರಕು ಸಾಗಣೆ ವಿಮಾನಗಳಾದ ಸಿ17, ಸಿ130 ಜೆ ವಿಮಾನಗಳ ಶಕ್ತಿ ಪ್ರದರ್ಶನವೂ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next