Advertisement

ರಫೇಲ್‌ ರಹಸ್ಯ ? ಗೋವಾ ಸಿಎಂ ಪರೀಕರ್‌ ಜತೆ ರಾಹುಲ್‌ ಖಾಸಗಿ ಭೇಟಿ

09:37 AM Jan 29, 2019 | Team Udayavani |

ಪಣಜಿ : ವಿವಾದಿತ ರಫೇಲ್‌ ಫೈಟರ್‌ ಜೆಟ್‌ ಡೀಲ್‌ ನ ರಹಸ್ಯ ಮಾಹಿತಿಗಳು ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಸಿಎಂ ಆಗಿರುವ ಮನೋಹರ್‌ ಪರೀಕರ್‌ ಅವರ ಬಳಿ ಇವೆ ಎಂಬ ತನ್ನ  ಆರೋಪವನ್ನು ಪುನರುಚ್ಚರಿಸಿದ ಒಂದು ದಿನದ ತರುವಾಯ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇಂದು ಮಂಗಳವಾರ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಪರೀಕರ್‌ ಜತೆಗೆ ಮುಚ್ಚಿದ ಬಾಗಿಲ ಹಿಂದೆ ಮಾತುಕತೆ ನಡೆಸಿದರು. 

Advertisement

ಮಾತುಕತೆ ವಿವರಗಳನ್ನು ಬಹಿರಂಗಪಡಿಸದ ರಾಹುಲ್‌ ಗಾಂಧಿ ಇದೊಂದು ಖಾಸಗಿ ಭೇಟಿ ಎಂದರಲ್ಲದೆ ಆದಷ್ಟು ಬೇಗನೆ ಪರೀಕರ್‌ ಗುಣಮುಖವಾಗಲೆಂದು ಹಾರೈಸಿರುವುದಾಗಿ ಹೇಳಿದರು. 

ನಿನ್ನೆ ಸೋಮವಾರವಷ್ಟೇ ರಾಹುಲ್‌, ರಫೇಲ್‌ ಡೀಲ್‌ ಕುರಿತಾಗಿ ಈ ರೀತಿ ಟ್ವೀಟ್‌ ಮಾಡಿದ್ದರು : ರಫೇಲ್‌ ಕುರಿತಾದ ಗೋವಾ ಆಡಿಯೋ ಟೇಪ್‌ ರಿಲೀಸ್‌ ಆಗಿ 30 ದಿನಗಳೇ ಸಂದಿವೆ. ಆದರೆ ಇನ್ನೂ ಎಫ್ಐಆರ್‌ ದಾಖಲಾಗಿಲ್ಲ; ತನಿಖಗೆ ಆದೇಶ ನೀಡಲಾಗಿಲ್ಲ; ಸಚಿವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ; ಟೇಪ್‌ ಸಾಚಾ ಇರುವುದು ಸ್ಪಷ್ಟವೇ ಇದೆ. ಅಂತೆಯೇ ಗೋವಾ ಸಿಎಂ ಪರೀಕರ್‌, ರಫೇಲ್‌ ರಹಸ್ಯಗಳನ್ನು ತಮ್ಮಲ್ಲಿ ಹೊಂದಿರುವುದು ಕೂಡ ನಿಜವೇ ಇದೆ; ಇದರರ್ಥ ಪರೀಕರ್‌ ಗೆ ಪ್ರಧಾನಿ ಗಿಂತಲೂ ಹೆಚ್ಚಿನ ಅಧಿಕಾರ ಇರುವುದು ಸ್ಪಷ್ಟವಿದೆ. 

Advertisement

Udayavani is now on Telegram. Click here to join our channel and stay updated with the latest news.

Next