ಮಲ್ಲೋರ್ಕಾ: ಟೆನ್ನಿಸ್ ಸೂಪರ್ ಸ್ಟಾರ್ ರಫೆಲ್ ನಡಾಲ್ ಕೊನೆಗೂ ವಿವಾಹ ಬಂಧನದಲ್ಲಿ ಸೆರೆಯಾಗಿದ್ದಾರೆ. ಶನಿವಾರ ನಡೆದ ವಿವಾಹ ಸಮಾರಂಭದಲ್ಲಿ ಬಹುಕಾಲದ ಗೆಳತಿ ಕ್ಸಿಸ್ಕಾ ಪೆರೆಲ್ಲೋ ಅವರನ್ನು ನಡಾಲ್ ವರಿಸಿದರು.
ಕಳೆದ 14 ವರ್ಷಗಳಿಂದ ನಡಾಲ್- ಪೆರೆಲ್ಲೋ ಜೋಡಿ ಪ್ರಿತಿಯಲ್ಲಿದ್ದರು. ಕಳೆದ ಫೆಬ್ರವರಿಯಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು.
ಸ್ಪೈನ್ ನ ಮಲ್ಲೋರ್ಕಾದ ಪ್ರಸಿದ್ದ ಲಾ ಫೋರ್ಟ್ ಲೆಜಾದಲ್ಲಿ ನಡೆದ ವೈಭವದ ಕಾರ್ಯಕ್ರಮದಲ್ಲಿ 33ರ ಹರೆಯದ ನಡಾಲ್ ತಮ್ಮ ಮನದರಸಿಯನ್ನು ವರಿಸಿದರು.
ಕಾರ್ಯಕ್ರಮದಲ್ಲಿ ಫೆಲಿಸಿಯಾನೊ ಲೋಪೆಜ್, ಡೇವಿಡ್ ಫೆರರ್ ಮುಂತಾದ ಟೆನಿಸ್ ಆಟಗಾರರು ಭಾಗವಹಿಸಿದ್ದರು. ಬಾಸೆಲ್ ನ ಮುಂದಿನ ಪಂದ್ಯಾವಳಿಗೆ ಅಭ್ಯಾಸ ನಡೆಸುತ್ತಿರುವ ಕಾರಣ ರೋಜರ್ ಫೆಡರರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದು ವರದಿಯಾಗಿದೆ.
31ರ ಹರೆಯದ ಪೆರೆಲ್ಲೋ ವಾನಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದು, ವಿಮಾ ಕಂಪನಿಯಲ್ಲಿ ಕೆಲಕ್ಕಿದ್ದರು. ನಂತರ ಆ ಕೆಲಸ ಬಿಟ್ಟು, ರಾಫಾ ನಡಾಲ್ ಫೌಂಡೇಶನ್ ನ ನಿರ್ದೇಶಕಿಯಾಗಿದ್ದಾರೆ.