Advertisement
ಈವರೆಗೆ 11 ಸಲ ಫ್ರೆಂಚ್ ಓಪನ್ ಚಾಂಪಿ ಯನ್ ಆಗಿರುವ ನಡಾಲ್, ಇಲ್ಲಿ ತಮ್ಮ ಗೆಲುವಿನ ದಾಖಲೆಯನ್ನು 87-2ಕ್ಕೆ ವಿಸ್ತರಿಸಿದರು.
Related Articles
ವಿಶ್ವದ ಮಾಜಿ ನಂಬರ್ ವನ್ ಆಟಗಾರ್ತಿ ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿದ್ದಾರೆ. ಅವರನ್ನು ವಿಶ್ವದ 68ನೇ ರ್‍ಯಾಂಕಿಂಗ್ ಆಟಗಾರ್ತಿ, ರಶ್ಯದ ವೆರೋನಿಕಾ ಕುದರ್ಮೆಟೋವಾ 0-6, 6-3, 6-3 ಅಂತರದಿಂದ ಪರಾಭವಗೊಳಿಸಿದರು.
Advertisement
ಡಚ್ ಆಟಗಾರ್ತಿ ಕಿಕಿ ಬರ್ಟೆನ್ಸ್ ಫ್ರಾನ್ಸ್ ನ ಪೌಲಿನ್ ಪರ್ಮೆಂಟೀರ್ ಅವರನ್ನು 6-3, 6-4ರಿಂದ ಮಣಿಸಿ ದ್ವಿತೀಯ ಸುತ್ತಿಗೆ ಮುನ್ನಡೆದರು.
ಅನುಭವಿ ವೀನಸ್ ವಿಲಿಯಮ್ಸ್ ಕೂಡ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ. ಅವರನ್ನು ರಶ್ಯದ ಎಲೆನಾ ಸ್ವಿಟೋಲಿನಾ 6-3, 6-3 ನೇರ ಸೆಟ್‌ಗಳಲ್ಲಿ ಮಣಿಸಿದರು.
ಕ್ವಿಟೋವಾ ಕೂಟದಿಂದ ಹೊರಕ್ಕೆಜೆಕ್ ಗಣರಾಜ್ಯದ ಸುಂದರಿ, ವಿಶ್ವದ ಖ್ಯಾತ ಟೆನಿಸ್ ಆಟಗಾರ್ತಿಯರಲ್ಲೊಬ್ಬರಾದ ಪೆಟ್ರಾ ಕ್ವಿಟೋವಾಗೆ ಫ್ರೆಂಚ್ ಓಪನ್ ಟೆನಿಸ್‌ನಿಂದ ಹಿಂದೆ ಸರಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಅವರಿಗೆ ಎಡ ಮೊಳಕೈ ನೋವು ಕಾಣಿಸಿದ್ದು, ದಿಢೀರನೆ ಕೂಟದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ಕ್ವಿಟೋವಾ 2012ರಲ್ಲಿ ಸೆಮಿಫೈನಲ್ ತಲುಪಿದ್ದರು. ಎರಡು ವರ್ಷದ ಹಿಂದೆ ಕ್ವಿಟೋವಾ ಫ್ರೆಂಚ್ ಓಪನ್ ಆಡುವ ಮೂಲಕವೇ ಟೆನಿಸ್‌ಗೆ ಮರಳಿದ್ದರು. ಅದಕ್ಕೂ ಮುಂಚೆ ಕೈಗೆ ತೀವ್ರ ಗಾಯ ಮಾಡಿಕೊಂಡಿದ್ದರು. ಕಳ್ಳನೊಬ್ಬ ಮನೆಗೆ ನುಗ್ಗಿದ್ದರಿಂದ ಆತನನ್ನು ತಡೆಯಲು ಕ್ವಿಟೋವಾ ಯತ್ನಿಸಿದ್ದರು. ಆ ವೇಳೆ ಕ್ವಿಟೋವಾ ಕೈಗೆ ಚಾಕು ತಗುಲಿ ಭಾರೀ ಗಾಯವಾಗಿತ್ತು. ಹೆಚ್ಚು ಕಡಿಮೆ ಅವರ ಟೆನಿಸ್ ಬದುಕೇ ಮುಗಿದು ಹೋಯಿತು ಎಂಬ ಅನುಮಾನ ಹುಟ್ಟಿಕೊಂಡಿತ್ತು.
ಆದರೆ ಪರಿಸ್ಥಿತಿ ವಿರುದ್ಧ ಹೋರಾಡಿದ ಕ್ವಿಟೋವಾ ಒಂದು ವರ್ಷದಲ್ಲಿ ಸುಧಾರಿ ಸಿಕೊಂಡು ಮತ್ತೆ ಟೆನಿಸ್ ಅಂಕಣಕ್ಕೆ ಇಳಿದಿ ದ್ದರು. ಆಗ ಅವರು ಹಿಂತಿರುಗಿದ್ದು ಫ್ರೆಂಚ್ ಓಪನ್ ಟೆನಿಸ್ ಮೂಲಕವೇ. ಆದ್ದರಿಂದ ಫ್ರೆಂಚ್ ಓಪನ್‌ನಿಂದ ಹೊರಬಿದ್ದಿರುವುದು ತನಗೆ ಬಹಳ ನೋವು ತಂದಿದೆ ಎಂದು ಕ್ವಿಟೋವಾ ಹೇಳಿಕೊಂಡಿದ್ದಾರೆ.