Advertisement

ರಫೇಲ್‌: ಆಕ್ಷೇಪ ಕುರಿತು ಇಂದು ತೀರ್ಪು

01:22 AM Apr 10, 2019 | Team Udayavani |

ಹೊಸದಿಲ್ಲಿ: ರಫೇಲ್‌ ಪ್ರಕರಣ ಸಂಬಂಧ ಕೇಂದ್ರದ ಮಾಜಿ ಸಚಿವರಾದ ಯಶ್ವಂತ್‌ ಸಿನ್ಹಾ ಹಾಗೂ ಅರುಣ್‌ ಶೌರಿ ಅವರು ಪ್ರಸ್ತಾಪಿಸಿರುವ ದಾಖಲೆಗಳು “ಸರಕಾರದ ಗೌಪ್ಯ ಕಾಯ್ದೆ’ಯಡಿ ಬರುವ ಕಾರಣ, ಅದನ್ನು ಪರಿಗಣಿಸುವಂತಿಲ್ಲ ಎಂಬ ಕೇಂದ್ರ ಸರಕಾರದ ವಾದಕ್ಕೆ ಸಂಬಂಧಿಸಿ ಬುಧವಾರ ಸುಪ್ರೀಂ ಕೋರ್ಟ್‌ ತನ್ನ ತೀರ್ಪನ್ನು ನೀಡಲಿದೆ. ಕೇಂದ್ರ ಸರಕಾರದ ಆಕ್ಷೇಪಕ್ಕೆ ಸಂಬಂಧಿಸಿದ ತೀರ್ಪನ್ನು ಮಾ. 14ರಂದು ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಕಾಯ್ದಿರಿಸಿತ್ತು. ಸರಕಾರದ ಆಕ್ಷೇಪದ ಬಗ್ಗೆ ನಿರ್ಧಾರ ಪ್ರಕಟಿಸಿದ ಬಳಿಕವೇ, ಪ್ರಕರಣದ ಉಳಿದ ವಿಚಾರವನ್ನು ಪರಿಗಣಿಸುತ್ತೇವೆ ಎಂದು ಅಂದು ಕೋರ್ಟ್‌ ಹೇಳಿತ್ತು. ರಫೇಲ್‌ಗೆ ಸಂಬಂಧಿಸಿದ ದಾಖಲೆಗಳನ್ನು ಅನಧಿಕೃತವಾಗಿ ಪ್ರಕಟಿಸಲಾಗಿದ್ದು, ಕಳವು ಮಾಡಲಾದ ದಾಖಲೆಗಳನ್ನು ಪರಿಗಣಿಸಬಾರದು ಎಂದು ಕೇಂದ್ರ ಮನವಿ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next