Advertisement

ಐಎಎಫ್ ಮುಖ್ಯಸ್ಥರ ನಿವಾಸದ ಮುಂದೆ ರಾಫೆಲ್

01:27 AM Jun 01, 2019 | Team Udayavani |
ನವದೆಹಲಿ: ದೆಹಲಿಯ ಪ್ರತಿಷ್ಠಿತ ಲ್ಯೂಟೆನ್ಸ್‌ ಬಡಾವಣೆಯಲ್ಲಿರುವ ವಾಯು ಪಡೆಯ ಮುಖ್ಯಸ್ಥ ಬಿ.ಎಸ್‌. ಧನೋವಾ ಅವರ ಅಧಿಕೃತ ನಿವಾಸದ ಮುಂದೆ ರಾಫೆಲ್ ಯುದ್ಧ ವಿಮಾನದ ಪ್ರತಿಕೃತಿಯೊಂದನ್ನು ಅಜ್ಞಾತ ವ್ಯಕ್ತಿಗಳು ರಾತ್ರೋ ರಾತ್ರಿ ನಿಲ್ಲಿಸಿ ಪರಾರಿಯಾಗಿದ್ದಾರೆ. ಕುತೂಹಲದ ವಿಚಾರವೇನೆಂದರೆ, ಧನೋವಾ ಅವರ ನಿವಾಸ ಕಾಂಗ್ರೆಸ್‌ನ ಪ್ರಧಾನ ಕಚೇರಿಯ ಎದುರುಗಡೆಯೇ ಇದೆ. ಇತ್ತೀಚೆಗೆ, ಕಾಂಗ್ರೆಸ್‌ ನರೇಂದ್ರ ಮೋದಿ ಯವರ ಸರ್ಕಾರದಿಂದ ರಾಫೆಲ್ ಒಪ್ಪಂದದಲ್ಲಿ ದೊಡ್ಡ ಮಟ್ಟದ ಹಗರಣವಾಗಿದೆ ಎಂದು ಆರೋಪಿಸಿತ್ತು. ಹಾಗಾಗಿ ಈ ಪ್ರಕರಣಕ್ಕೆ ರಾಜಕೀಯ ಸ್ಪರ್ಶ ಸಿಕ್ಕಂತಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next