Advertisement

ಅಪಘಾತ ತಡೆಗೆ ಬೀಡಾಡಿ ದನಗಳಿಗೆ, ವಿದ್ಯುತ್ ಕಂಬಕ್ಕೆ ರೇಡಿಯಂ ಸ್ಟಿಕ್ಕರ್ ಬಳಕೆ

03:41 PM Jan 17, 2022 | Shwetha M |

ಸಾಗರ: ಸಾಮಾನ್ಯವಾಗಿ ಕಡುಕಪ್ಪಿನ ಬಣ್ಣದ ಮಲೆನಾಡು ಗಿಡ್ಡ ಜಾತಿಯ ಬೀಡಾಡಿ ದನಗಳು ರಸ್ತೆಯ ಮೇಲೆಯೇ ರಾತ್ರಿ ಮಲಗುವುದರಿಂದ ಉಂಟಾಗುವ ಅಪಘಾತಗಳನ್ನು ತಪ್ಪಿಸಲು ತಾಲೂಕಿನ ಕಾರ್ಗಲ್‌ನ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ತಿರುಮಲೇಶ್ ತಮ್ಮ ಸ್ವಂತ ಖರ್ಚಿನಲ್ಲಿ ದನಗಳ ಕೋಡುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ವಿನೂತನ ಪ್ರಯೋಗ ನಡೆಸಿದ್ದಾರೆ.

Advertisement

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಜೋಗ ಜಲಪಾತದ ಸುತ್ತಲಿನ ಪ್ರದೇಶಗಳಲ್ಲಿ ಸ್ಥಳೀಯ ಮತ್ತು ಪ್ರವಾಸಿ ವಾಹನಗಳು ಬೀಡಾಡಿ ದನಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸುತ್ತಿತ್ತು. ಅಪಘಾತದಿಂದ ಅಮೂಲ್ಯವಾದ ಜೀವಗಳನ್ನು ಉಳಿಸಲು, ಬೀಡಾಡಿ ದನಗಳ ಜೀವಕ್ಕೆ ಕುತ್ತು ಉಂಟಾಗುವುದನ್ನು ತಪ್ಪಿಸಲು ರೇಡಿಯಂ ಸ್ಟಿಕ್ಕರ್ ಪ್ರಯೋಗ ಮಾಡಿದ್ದೇನೆ. ಸ್ಟಿಕ್ಕರ್ ಅಂಟಿಸುವುದರಿಂದ ರಾತ್ರಿ ಹೊತ್ತು ಹಸುಗಳು ದಾರಿಯಲ್ಲಿ ಮಲಗಿರುವುದು ವಾಹನ ಚಾಲಕರಿಗೆ ಕಾಣುತ್ತದೆ ಇದರಿಂದ ಅಪಘಾತ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಭಾವಿಸಿದ್ದೇನೆ ಎಂದರು.

ರಸ್ತೆಯ ಬದಿಯಲ್ಲಿನ ವಿದ್ಯುತ್ ಕಂಬಗಳಿಗೆ, ಟೆಲಿಫೋನ್ ಕಂಬಗಳಿಗೆ ಕೂಡ ರೇಡಿಯಂ ಸ್ಟಿಕ್ಕರ್ ಅಂಟಿಸಿ ವಾಹನ ಚಾಲಕರಿಗೆ ದಾರಿಯ ಅಕ್ಕಪಕ್ಕದ ಅಡೆತಡೆ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next