Advertisement

ರೇಡಿಯೋ ಕಾಶ್ಮೀರ್…ಇನ್ಮುಂದೆ ಆಲ್ ಇಂಡಿಯಾ ರೇಡಿಯೋ/ಆಕಾಶವಾಣಿ

09:38 AM Nov 01, 2019 | Nagendra Trasi |

ನವದೆಹಲಿ: ಜಮ್ಮು-ಕಾಶ್ಮೀರ ಅಧಿಕೃತವಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಇಬ್ಭಾಗವಾಗಿದ್ದು, ಜಮ್ಮು-ಕಾಶ್ಮೀರ್ ಮತ್ತು ಲಡಾಖ್ ಇಂದಿನಿಂದ ಕೇಂದ್ರಾಡಳಿತ ಪ್ರದೇಶವಾಗಿದ್ದು, ರೇಡಿಯೋ ಕಾಶ್ಮೀರ್ ಹೆಸರನ್ನೂ ಇದೀಗ ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ) ಎಂದು ಬದಲಾಯಿಸಲಾಗಿದೆ.

Advertisement

ಶ್ರೀನಗರ್, ಕಾಶ್ಮೀರ್ ಮತ್ತು ಲೇಹ್ ನಲ್ಲಿರುವ ರೇಡಿಯೋ ಕೇಂದ್ರಗಳು ಇದೀಗ ಆಲ್ ಇಂಡಿಯಾ ರೇಡಿಯೋ ಎಂದು ಮರುನಾಮಕರಣ ಮಾಡಲಾಗಿದ್ದು, ಜಮ್ಮು-ಆಲ್ ಇಂಡಿಯಾ ರೇಡಿಯೋ, ಶ್ರೀನಗರ್ ಅ್ಯಂಡ್ ಅಲ್ ಇಂಡಿಯಾ ರೇಡಿಯೋ ಲೇಹ್ ಎಂದು ಮರುನಾಮಕರಣ ಮಾಡಿದ್ದು, ಹೊಸ ಬದಲಾವಣೆ ಇಂದಿನಿಂದಲೇ ಜಾರಿಯಾಗಲಿದೆ ಎಂದು ವರದಿ ತಿಳಿಸಿದೆ.

ರೇಡಿಯೋ ಕಾಶ್ಮೀರ್ 1948ರಲ್ಲಿ ಸ್ಥಾಪನೆಯಾಗಿತ್ತು. ಇದು ಶ್ರೀನಗರ ಕೇಂದ್ರದಿಂದ ಪ್ರಸಾರವಾಗುತ್ತಿತ್ತು. ಜೆಎನ್ ಝುಶಿ ರೇಡಿಯೋ ಕಾಶ್ಮೀರದ ಮೊದಲ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರದ್ದುಗೊಳಿಸಿ ಮೂರು ತಿಂಗಳ ನಂತರ ಅಕ್ಟೋಬರ್ 31ರಿಂದ ಜಮ್ಮು-ಕಾಶ್ಮೀರ್ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಕಾರ್ಯನಿರ್ವಹಿಸತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next